QUOTES ON #KANNADAINSPIRATION

#kannadainspiration quotes

Trending | Latest
29 AUG 2020 AT 15:23

ಒಂದೊಂದು ತಿರುವಿನಲ್ಲೂ ಬಯಸದ ನೆನಪುಗಳೇ

-


24 JUL 2021 AT 10:17

ಶತ್ರುಗಳಿಂದ ಆಗುವ ಅವಮಾನಕ್ಕಿಂತ,
ನಮ್ಮವರಿಂದ ಆಗುವ ಅವಮಾನ
ಮನಸ್ಸಿಗೆ ತುಂಬಾ ನೋವು ನೀಡುತ್ತದೆ...

-


5 SEP 2021 AT 19:54

"ಬಾಡಿರುವ ಹೂವನ್ನು ನೋಡಿ
ಅರಳಿರುವ ಹೂವು ನಗಬಹುದು,
ಆದರೆ ಆ ನಗು ಶಾಶ್ವತವಲ್ಲ ಅದಕ್ಕೂ
ಬಾಡುವ ಸಮಯ ಬಂದೆ ಬರುತ್ತದೆ
ಹಾಗೆ ಅಹಂಕಾರದ ನಗು ತಾತ್ಕಾಲಿಕವಷ್ಟೇ"

-



"ಯಶಸ್ಸು" ಎಂಬುವುದು
ಭತ್ತಿದ್ದ ನದಿಯಲ್ಲಿ
ತೆಗೆಯುವ,
ಒರತೆಯ ನೀರಲ್ಲ..
ಅದು ಭೂಗರ್ಭದಲ್ಲಿ
ದೊರೆಯುವ,
ಅನರ್ಘ್ಯ ವೈಡೂರ್ಯ..!!

-


3 APR 2020 AT 23:43

ಪಟ್ಟ ಪರಿಶ್ರಮ ಕೈ ಬಿಡದು

ಸಮಯ ಕೈ ಕೊಡಬಹುದು
ಆದರೆ ನಮಗೂ ಸಮಯ ಬಾರದಿರದು ...

-


29 AUG 2020 AT 14:59

ಒಂದೊಂದು ದಿನವೂ ಒಂದೊಂದು ತಿರುವು

-


10 DEC 2019 AT 0:00

ನಿಮ್ಮಲ್ಲಿ ಇಲ್ಲದಿರುವುದನ್ನು ಅಪೇಕ್ಷಿಸುವ ಮೂಲಕ ನಿಮ್ಮಲ್ಲಿ ಈಗ ಇರುವುದನ್ನು ಹಾಳು ಮಾಡಿಕೊಳ್ಳಬೇಡಿ;
ಈಗ ನಿಮ್ಮಲ್ಲಿ ಇರುವುದು, ಹಿಂದೊಮ್ಮೆ ನೀವು ಬಯಸಿದ್ದೇ ಎಂಬುವುದನ್ನು ನೆನಪಿಡಿ!

-


10 AUG 2019 AT 14:23

ವಿನಾಕಾರಣ 'ನಮ್ಮವರು' ಎಂಬ ಬಾಂಧವ್ಯದ ಕುರಿತಾಗಿ ಒಂದು ವಿಲಕ್ಷಣ ಅಸಹನೆ ಬೆಳೆಸಿಕೊಂಡುಬಿಟ್ಟಿದ್ದೆ..
ಆದರೀಗ ತುಸು ವಿಳಂಬವಾದರೂ ಅತೀ ಸರಳವಾಗಿ ಅರಿವಿಗೆ ಬಂದಿರುವುದು,
ನೋಯಿಸುವುದು 'ನಮ್ಮವರಲ್ಲ' ನಮ್ಮ 'ನತದೃಷ್ಟ ನಿರೀಕ್ಷೆಗಳು'!!

ನಮಿತಾ ಹೆಗ್ಡೆ 🦋

-


11 DEC 2019 AT 7:25

ನಿಮ್ಮ ಹಿಂದಿನ ನೆನಪುಗಳಿಗೆ, ನಿಮ್ಮ ಭವಿಷ್ಯದ ಸಾಮರ್ಥ್ಯವನ್ನು ಮಿತಿಗೊಳಿಸಲು ಬಿಡಬೇಡಿ!

-


7 AUG 2019 AT 22:17

ಕೆಲವೊಂದು ಸಲ ಜೊತೆಲಿದ್ದವರಿಗೇ
ಕಾರಣವಿಲ್ಲದೆ ಬೋರಾಗಿ ಹೋಗಿರುತ್ತೇವೆ!
ಈ ಸಾಗರದ ದಂಡೆಗೂ ಪದೇ ಪದೇ ಅಪ್ಪಳಿಸುವ
ಅಲೆಗಳ ಸ್ಪರ್ಶವೂ ಬೋರ್ ಹಿಡಿಸುತ್ತಿರಬಹುದು!!

ನಮಿತಾ ಹೆಗ್ಡೆ 🦋

-