RANI   (ಝಾನ್ಸಿ)
627 Followers · 286 Following

read more
Joined 13 August 2020


read more
Joined 13 August 2020
19 MAR AT 12:57

ಮೊಗದಲ್ಲಿ ಮಂದಹಾಸವಿರಲು
ಮನದೊಳಗೆ ಅಳು ಅಡರಿಕೊಂಡು
ಆರಿಸಲಾಗದ ನೋವೆಂಬ ಬೆಂಕಿ ಉರಿಯುತ್ತಿರೆ
ಬೆಂದು ಬೂದಿಯಾಗದೇ
ಬೇರೆ ದಾರಿಯುಂಟೆ ಚೆನ್ನಮಲ್ಲಿಕಾರ್ಜುನ ದೇವಾ

-


12 FEB AT 14:10

ಸೂರ್ಯನ ಕಿರಣಗಳು ತಾಕಬಾರದೆಂದು
ಪರದೆಯ ಹಿಂದೆ ಸರಿದೆ
ಸುಳಿವೇ ನೀಡದೆ ನೀ
ಮನದೊಳಗೆ ನುಸುಳಿ ಬಿಟ್ಟೆ ....

-


17 DEC 2024 AT 21:05

ಅರಳಿದ ಭಾವನೆಗಳ ಬುತ್ತಿಯ ಬಿಚ್ಚಿಡಲು
ಕಾಲುಂಗುರದ ಬೆರಳು ನಾಚಿಕೆಯಿಂದ
ರಂಗೋಲಿಯಲ್ಲಿ ಓಲೆಯ ಗೀಚುತ್ತಿದೆ
ಅದ ಓದಾಲಾಗದೇ ಇನಿಯ ನಿನಗೆ.....

-


10 DEC 2024 AT 20:18

ಬದುಕೆಂಬ ಭಾನ ಬನದಲ್ಲಿ ಪೂರ್ವದಲ್ಲಿ ಹುಟ್ಟಿ
ನಡುವಣ ಮತ್ತೊಬ್ಬರ ನಗುವಿಗೆ ಕಿರಣವಾಗಿ
ಬದುಕ ಭಾನ ಬನದಲ್ಲಿ ಪಶ್ಚಿಮದಲ್ಲಿ ಸಾವಾದರೂ
ಹೊಸ ಭರವಸೆಯ ಕನಸು ಬಿತ್ತುವುದೇ ಭಾನು.....

-


9 DEC 2024 AT 20:45

ಮನುಷ್ಯತ್ವವ ನೋಟಿನಲ್ಲೆ ಅಳೆದು
ಬದುಕಿನುದ್ದಕ್ಕೂ ನೋಟಿನ ಹಿಂದೆ ಅಲೆದು
ಸ್ವಾರ್ಥದ ನೋಟಿನಿಂದನೇ ಅಳಿಯುವ
ಜಗದ ಜಂಜಾಟವ ನೋಡಲಾಗದು ಕಾಣಾ
ಚೆನ್ನಾಮಲ್ಲಿಕಾರ್ಜುನ ದೇವಾ............

-


30 NOV 2024 AT 11:48

ಕಣ್ಣಾಲಿಗೆ ಕಪ್ಪಿಡಿದು
ಬದುಕು ಅಂಧಕಾರದ
ಅರಮನೆಯ ಅಲಂಕರಿಸುತ್ತಿದೆ

-


26 NOV 2024 AT 22:51

ಕತ್ತಲ ಪ್ರಪಂಚದಲ್ಲಿ ಆಪತ್ತಿನ
ಅರಿವಿಲ್ಲದೆ ಅಡಗಿದೆ ಅಂದು...
ಬೆಳಗುವ ಸಾವಿರಾರು ದೀಪಗಳಿದ್ದರೂ
ಕತ್ತಲೆ ತುಂಬಿದೆ ಬದುಕಿನಲ್ಲಿ ಇಂದು...

-


26 NOV 2024 AT 22:37

ಝಾನ್ಸಿ

-


22 NOV 2024 AT 8:48

ಆಡಂಬರದ ಅರಮನೆಯಲ್ಲಿ
ಅವಿತು ಕುಳಿತೆ
ಭಂಡಾರದ ತುಂಬಾ ಚಿನ್ನವೇ ತುಂಬಿದ್ದರು
ಒಬ್ಬರಲ್ಲೂ ಮೌಲ್ಯವೇ ಇಲ್ಲ
ಖುಷಿ ಮನೆ ತುಂಬಾ ಆವರಿಸಿದರೂ
ಆರದ ಭಯ ಹೊಗೆಯಾಡುತ್ತಿದೆ
ನೆಮ್ಮದಿಯ ಮಳೆಯಲ್ಲಿ ನೆನೆಯುತ್ತಿರುವೆನೆಂಬ
ಊಹೆ ಮನ ತುಂಬಿದೆ

-


21 NOV 2024 AT 19:52

ಕಾಯಬೇಡ ನನ್ನ ಮನದಲ್ಲಿ
ಮೂಡಿದ ಕವಿತೆಗಳಿಗೆ
ಅವುಗಳೆಲ್ಲಾ ರೆಕ್ಕೆಗಳಿಲ್ಲದೆ ಹಾರ
ಬಯಸುವ ಹಕ್ಕಿಗಳಂತೆ

-


Fetching RANI Quotes