Vishnu. A   (𝓓𝓮𝓮𝓼𝓱𝓾 ...)
871 Followers · 47 Following

Joined 5 June 2019


Joined 5 June 2019
21 APR AT 0:05

ನಡೆದ ಘಟನೆ ಮರೆಯಲಾಗದು

ಬದುಕು ಬದಲಾಗಬಹುದು
ನಡೆದು ಬಂದ ದಾರಿ ಮರೆಯಬಾರದು ...

-


11 DEC 2024 AT 0:18

ಕಿರು ಬೆರಳ ಹಿಡಿದು
ಸಪ್ತಪದಿ ತುಳಿದಿರುವೆ

ಪುಟ್ಟ ಮನವಿದು
ನಿನಗೆ ಒಪ್ಪಿಸಿರುವೆ

ಪೂರ್ಣ ಜನ್ಮವಿದು
ನಿನಗಾಗಿ ಮೀಸಲಿಡುವೆ ...

-


12 AUG 2024 AT 22:24

ತಂಪು ತಂಗಾಳಿಯಲ್ಲಿ
ನಿನ ಮೊಗವ ನೋಡುತಲಿ

ಏನೆಂದು ಹೇಳಲಿ
ಮೌನಿಯೂ ನಾನಲ್ಲಿ

ಆ ನಿನ್ನ ಕಂಗಳಲಿ
ನನ್ನ ಬಿಂಬ ತುಂಬಿರಲಿ

ನಡೆವ ಪ್ರತಿ ಹೆಜ್ಜೆಯಲಿ
ಸಂಗಾತಿ ನಾನಲ್ಲಿ ...

-


26 JUN 2024 AT 1:04

ಆಗಸದ ಮೊಗದಲ್ಲಿ
ಹೊಳೆವ ಚುಕ್ಕಿ ಕಂಗಳು

ಈ ನನ್ನ ಮನದಲ್ಲಿ
ಹೊಳೆಯುವಳು ನನ್ನವಳು

ನಕ್ಷತ್ರಗಳ ಸಮೂಹದಲಿ
ಮೀನುಗೋ ಚಂದ್ರನಂತಿಹಳು ...

-


15 JUN 2024 AT 1:31

ನಿನ್ನ ಪ್ರತಿ ನೋವಲ್ಲಿ
ನನಗೂ ಸರಿ ಪಾಲಿರಲಿ

ನನ್ನ ಪ್ರತಿ ಕುಶಿಯಲ್ಲಿ
ನಿನ್ನದು ನಗುವಿರಲಿ

ನಿನ್ನ ಪ್ರತಿ ರಾತ್ರಿಯಲಿ
ಕನಸು ನಾನಾಗಿರಲಿ

ನನ್ನ ಪ್ರತಿ ಜನ್ಮದಲಿ
ಸಂಗಾತಿ ನೀನೇ ಆಗಿರಲಿ ...

-


25 MAY 2024 AT 22:44

ತಂಪು ತಂಗಾಳಿಯಲ್ಲಿ
ಕುಳಿತು ಮರದ ಅಡಿಯಲ್ಲಿ

ಮೂಡಿದಾ ಮಾತು ಮನದಲ್ಲಿ
ಹಂಚಿಕೊಳ್ಳಲೇ ನಿನ್ನಲ್ಲಿ ...

-


27 MAR 2024 AT 23:46

ನಗುವೇ ಕಾಣದ ಮೊಗಕೆ
ನಗುವಾಗಿ ನಿ ದೊರೆತೆ

ಏನನ್ನು ಬಯಸದ ಮನಕೆ
ಬಯಕೆಯೇ ನೀನಂತೆ

ಉಳಿದ ಈ ಜೀವನಕೆ
ಸಂಗಾತಿಯು ನೀನಂತೆ ...

-


20 MAR 2024 AT 23:14

ಹೇಳದೆ ನಿನ್ನಲ್ಲಿ
ಕನಸುಗಳ ಕಟ್ಟಿಹೇನು

ಆ ನಿನ್ನ ಮೊಗದಲ್ಲಿ
ನಗುವನ್ನೇ ಬಯಸುವೆನು

ನಿನ್ನ ಆ ಮನದಲ್ಲಿ
ಸ್ಥಳವ ಬಯಸುವೆನು ...

-


4 MAR 2024 AT 0:18

ಮೊಗದಿ ನಗು ತುಂಬಿರಲಿ
ಆ ನಗುವು ನಾನಾಗಿರಲಿ

ದಿನವೂ ಖುಷಿಯಾಗಿರಲಿ
ಕಾರಣವೂ ನಾನಾಗಿರಲಿ

ನಿನ್ನಯ ಆ ಗೆಲುವಲ್ಲಿ
ನನಗೊಂದು ಪಾಲಿರಲಿ ...

-


3 MAR 2024 AT 12:38

ಹಣೆ ವರೆಸಿದರೆ
ಹಣೆಬರಹ ಬದಲಾಗುವುದೇ

ಮೊಗದಿ ನಗು ಬೀರಿದರೆ
ಮನದ ನೋವು ಮರೆಯಾಗುವುದೇ

ಎಲ್ಲವನು ಮರೆತರೆ
ಜೀವನದಿ ಖುಷಿ ದೊರಕುವುದೇ ...

-


Fetching Vishnu. A Quotes