ಅವರ ಕಷ್ಟದ ಸಮಯದಲ್ಲಿ ನಿಮ್ಮ ಬಳಿಗೆ ಬರುವ ಸಾಕಷ್ಟು ಸ್ನೇಹಿತರನ್ನು ನೀವು ಕಾಣಬಹುದು.
ನಿಮ್ಮ ಕಷ್ಟದ ಸಮಯದಲ್ಲಿ, ನಿಮ್ಮೊಂದಿಗೆ ನಿಲ್ಲುವ ಸ್ನೇಹಿತರನ್ನು ಹುಡುಕಿ.-
ನೀವು ಕಠಿಣವಾಗಿರುವಾಗ ಕಷ್ಟದ ಸಮಯ ನಿಮ್ಮನ್ನು ಕಾಡುವುದಿಲ್ಲ.
ಇಡೀ ಸಮಾಜವು ನಿಮ್ಮ ಕಷ್ಟದ ಸಮಯವನ್ನು ಅರಿತಾಗ ಮಾತ್ರ ಅದು ನಿಮಗೆ ತೊಂದರೆ ನೀಡುತ್ತದೆ.-
ಯಾವಾಗ ನಾವು ಅಳಲು ಸಾಧ್ಯವಿಲ್ಲವೋ,
ಸುಖವಾಗಿ ನಿದ್ರಿಸಲು ಆಗುವುದಿಲ್ಲವೋ,
ಯಾವಾಗ ನಮ್ಮನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲವೋ,
ಆ ಕ್ಷಣ ಬಾಲ್ಯ ನೆನಪಾಗುತ್ತದೆ!-
ನಿನ್ನ ಹೃದಯದ ಮಾತನ್ನು,
ನಿನ್ನ ಕಣ್ಸನ್ನೆಯಿಂದ
ಓದುವಷ್ಟು ಸಾಕ್ಷರತೆ ಸಾಕು. — % &-
ಎಲ್ಲಿಯವರೆಗೆ ನೀವು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮೊಬೈಲ್ ಅನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಸಂಬಂಧದಲ್ಲಿ ಸಣ್ಣ ಸಮಸ್ಯೆ ಹಾಗೂ ಗುಟ್ಟು ಅಡಗಿರುತ್ತದೆ.
ಅಂತಹ ಸಂಬಂಧದಿಂದ ಬೇಗನೆ ಹೊರಬನ್ನಿ.— % &-
ಕೆಲವೊಮ್ಮೆ ಪರಿಸ್ಥಿತಿಗಳು ಕಷ್ಟಕರವಾಗಬಹುದು. ಅಂದರೆ ಅವುಗಳನ್ನು ನಿಭಾಯಿಸುವುದು ಕಷ್ಟ,
ಆದರೆ ಅಸಾಧ್ಯವಲ್ಲ!— % &-
ನೋವು, ಅವಮಾನ, ಸೋಲು
ಇವೆಲ್ಲವನ್ನೂ ಜೋಪಾನವಾಗಿ ಕಾಪಾಡಿ.
ನಾಳೆಯ ನಿಮ್ಮ ಯಶಸ್ಸಿನ ಜ್ವಾಲೆಗೆ
ಇವುಗಳೇ ಮುಖ್ಯ ಕಿಡಿಗಳು.— % &-
ಜೀವನವು ಪಾಠ ಕಲಿಸುತ್ತಲೇ ಇರುತ್ತದೆ.
ಒತ್ತಡ ಹೆಚ್ಚಾದಲ್ಲಿ ವಿಶ್ರಾಂತಿ ಪಡೆಯಲು ಕಲಿಯಿರಿ ಆದರೆ ಬಿಟ್ಟುಕೊಡಬೇಡಿ!— % &-
ಧೈರ್ಯವೆಂದರೆ ಭಯ ಇಲ್ಲವೇ ಇಲ್ಲ ಅಂತಲ್ಲ,
ಅದು ಭಯವನ್ನು ಜಯಸಿ ಪಡೆದ ಭಾವನೆ ಅಷ್ಟೇ.
ಭಯ ಮುಖ್ಯ!— % &-
ನಿನ್ನ ಬಯಕೆ ಮೂಡಿದಾಗಲೆಲ್ಲ
ಒಂದು ನಾಣ್ಯ ಸಂಗ್ರಹ ಮಾಡಿದ್ದರೆ,
ನಾನಿಂದು ಕೋಟ್ಯಾಧಿಪತಿ ಆಗಿರುತ್ತಿದ್ದೆ.— % &-