ಕೆಲವೊಂದಿಷ್ಟು ಕಲೆಗಳನ್ನ
ತಕ್ಷಣವೇ ತಿಕ್ಕಿ ತೊಳೆದುಬಿಡಬೇಕು..
ಆಮೇಲಾಯಿತೆನ್ನುವ ಉದಾಸೀನವು,
ಆ ಕಲೆಯನ್ನ ಅದೆಷ್ಟು ಒರಟಾಗಿಸುತ್ತದೆಂದರೆ..
ಜೀವನಪರ್ಯಂತ ಸವೆಸಿದರೂ,
ಅದು ಉಳಿಸಿ ಹೋಗುವ ಗಾಢತೆಯನ್ನು ಅಳಿಸಲಾರದು.-
ಅಲ್ಲೆಲ್ಲೋ ಗಾಜು ಬಿದ್ದ ಸದ್ದು,
ಅಸಲಿಗೆ ಚೂರಾಗಿದ್ದು ಸಂಬಂಧ!
ಇಬ್ಬರೂ ಸೂಕ್ತ ಕಾರಣದ ತಲಾಶಿನಲ್ಲಿದ್ದರು,
ಸಮಾಜದ ದಾಹ ತಣಿಸಲು!
ಉಳಿದಂತೆ ಇಬ್ಬರಿಗೂ ತಿಳಿದಿತ್ತು,
ಸಹಸ್ರ ಅಪೂರ್ಣ ಮನಸ್ತಾಪಗಳ ದಣಿವಿನ ನಿಟ್ಟುಸಿರಿದು ಎಂದು!-
ದುಃಖವನ್ನು ಯಾಕಷ್ಟು ದ್ವೇಷಿಸಬೇಕು..
ಖುಷಿಯಷ್ಟೆ ಸಮನಾಗಿ ಸಂಭ್ರಮಿಸಬೇಕು.
ಒಂಟಿಯಾಗಲ್ಲ, ನಮ್ಮೊಳಗಿನ ವ್ಯಕ್ತಿಯೊಂದಿಗೆ!-
ಇಲ್ಲಿ ಎಲ್ಲಾರ್ದೂ ಒಂದಲ್ಲ ಒಂದು ರೀತಿಲಿ ನಾಟಕಾನೇ..!
ಅನುಭವಿಸೋಕೆ ಅರ್ಥೈಸ್ಕೊಳ್ಳೋಕೆ ಬರಿಗಣ್ಣಿದ್ರೆ ಸಾಲಲ್ಲ, ಪೂರ್ತಿ ಸಾರವನ್ನ ಅರಗಿಸಿಕೊಳ್ಳೋ ಬಯಕೆ ಇದ್ರೆ ಕ್ಯಾಮೆರಾ ಕಣ್ಣೇ ಬೇಕು.
ಯಾಕಂದ್ರೆ ಜನ ಕ್ಯಾಮೆರಾದ ಮುಂದೆನೇ ಡ್ರಾಮಾ ಮಾಡೋದು...!!
ನಮಿತಾ ಹೆಗ್ಡೆ 🦋-
ಕೂಲಿಯಲ್ಲೂ ಕೂಸಿಗೆ
ಕೋಟಿ ಕನಸನ್ನ
ಕಟ್ಟಿಕೊಡಬಲ್ಲ ಕೋಟ್ಯಾಧಿಪತಿ.
ನಮಿತಾ ಹೆಗ್ಡೆ 🦋
-
"ವಿದ್ಯೆಯ ಸರಸ್ವತಿಗೆ ಮಕ್ಕಳಿಲ್ಲ.
ಸುಖದ ಲಕ್ಷ್ಮಿಗೆ ಮಕ್ಕಳಿಲ್ಲ.
ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಸಂತಾನವೇ ಇಲ್ಲ.
ಕಾಯೋ ದೇವಿ ದುರ್ಗೇನೂ ಬಂಜೇನೇ.
ಹೆರೋರು ತಾಯಿ ಆದ್ರು. ಹೆರದೋರು ದೇವರಾದ್ರು.
ತಾಯಾಗ್ಲಿಲ್ಲ ಬಿಡು, ದೇವಿ ಆಗ್ತೀನಿ!"
ಎಸ್.ಎನ್ ಸೇತುರಾಮ್.-
ಮಾತನಾಡುತ್ತವೆ ಮಳೆ ಹನಿಗಳು
ಮೃದುವಾಗಿ ಹನಿಯುತ್ತಾ
ಬಿರುಸಾಗಿ ಸುರಿಯುತ್ತಾ..
ಮಡಿಲು ತುಂಬಿಸಿಕೊಳ್ಳುವ ಭುವಿಯದ್ದು,
ಸಿಹಿ ಮೌನ ಮುಗಿಲ ಗೀತೆ.-
ಅಪ್ಪಾ ಅಂದ್ರೆ ಕಣ್ಣಿಗೆ ಕಾಣಿಸದ ಅವಿರತ ಪ್ರೀತಿ
ಅಪ್ಪಾ ಅಂದ್ರೆ ಪರ್ಯಾಯವಿಲ್ಲದ ಸೃಷ್ಟಿ
ಅಪ್ಪಾ ಅಂದ್ರೆ ಗದರಿ ಗಟ್ಟಿಗೊಳಿಸುವ ಅಕ್ಕರೆಯ ಗಣಿ
ಅಪ್ಪಾ ಅಂದ್ರೆ ಜವಬ್ದಾರಿಗಳ ಹೊರುವ ಮೌನಿ
ಅಪ್ಪಾ ಅಂದ್ರೆ ಅವರ್ಣೀಯ ಅನುಭವ
ಅಪ್ಪಾ ಅಂದ್ರೆ ಮಾಸಿ ಹೋಗದ ಸ್ವಭಾವ
ಅಪ್ಪಾ ಅಂದ್ರೆ ಪ್ರೇರಣೆಯ ದೀಪ
ಅಪ್ಪಾ ಅಂದ್ರೆ ತ್ಯಾಗದ ಸ್ವರೂಪ
ಅಪ್ಪಾ ಅಂದ್ರೆ ಆದರ್ಶವೆಂಬ ಸತ್ವ
ಅಪ್ಪಾ ಅಂದ್ರೆ ಆಕಾಶದಂತ ವ್ಯಕ್ತಿತ್ವ-
ಮುನಿಸನ್ನೂ ಮುದ್ದಿಸಿ
ನಗಿಸುವ ನಿನ್ನಾ ಕಲೆಗೆ
ನಾ ಕೊನೆ ಮೊದಲ ಹುಚ್ಚು
ಅಭಿಮಾನಿ ಕಣೋ ಹುಡುಗ..
ಕಡುಗೋಪದಲ್ಲಿ ನಾ
ಕೆನ್ನೆಯೂದಿಸಿ ಕೂತಾಗ,
ಪಾದವನ್ನೆತ್ತಿ ಬೊಗಸೆಯಲ್ಲಿಟ್ಟು
ನಯವಾಗಿ ಸವರಿ ದೃಷ್ಟಿ ಬೊಟ್ಟನಿಟ್ಟು..
ಈ ಕೋಮಲ ಪಾದಗಳೊಡತಿಗೆ
ಕ್ರೂರ ಮನವಿರಲು ಸಾಧ್ಯವೇ..!?
ಎಂದು ಕಣ್ಣು ಮಿಟುಕಿಸಿ ನಗುವ
ಮುತ್ತಿಕ್ಕಿ ಇನ್ನಿಲ್ಲದಂತೆ ಒಲಿಸುವ,
ನಿನ್ನಾ ತುಂಟತನದ ಮಾತುಗಳಿಗೆ
ನಾ ಸಂಪೂರ್ಣ ಹಕ್ಕುದಾರಳು..
ಮಗುವಂತೆ ಮುದ್ದಿಸುವ ನಿನ್ನನ್ನು
ಮನದುಂಬಿ ಪ್ರೀತಿಸುವ ನಾನೀಗ ಮೂಕಳು..
- ನಮಿತಾ ಹೆಗ್ಡೆ --