ಸಂಗೀತವೆಂದರೆ ಕೇವಲ ಸರಿಗಮಪದನಿ ಸಪ್ತಸ್ವರದಲ್ಲಿಲ್ಲ..!!
ಕೇಳೋ ಮನಸಿಗೆ ಕಿವಿಗಳಿದ್ದರೆ,
ಸಂಗೀತವೇ ನೋಡೋ ಕಡೆಯಲ್ಲೆಲ್ಲಾ..!!
ಹರಿವ ನದಿಯ ನಿನಾದ ಒಂದು ಸಂಗೀತ..
ಬೀಸೋ ಗಾಳಿಯಲ್ಲೂ ಇದೆ ಸಂಗೀತ..
ದುಂಬಿಯ ಝೇಂಕಾರ..ಹಕ್ಕಿಯ ಚಿಲಿಪಿಲಿ ಉಲಿತ..
ಹೀಗೆ ಎಲ್ಲೆಲ್ಲೂ ಇದೆ ಸಂಗೀತ,ತುಂಬಿ ತುಳುಕುತ..!!
ಜೀವನವೂ ಒಂದು ಸಂಗೀತ..
ಅಲ್ಲೂ ಇದೆ ಭಾವನೆಗಳ ಏರಿಳಿತ..
ಹೃದಯ ಬಡಿತದ ತಾಳಕೆ,ಉಸಿರ ಮೇಳ..
ಮನದ ಮಾತಿನ ಸಾಹಿತ್ಯಕೆ,ಸಮರಸವೇ ಗಾಯನ..!!
-