ಎಲೆಗಳಂತಿರಲಿ ನಯ ನಾಜೂಕಿನ ಮೃದು ಮಧುರತೆಯ ನೈಜತೆ;
ಮನ ಮನೆಗಳಲ್ಲಿರಲಿ ಸಂಸ್ಕೃತಿˌ ಸಂಸ್ಕಾರಗಳ ಆಚರಣೆಯ ಸೌಜನ್ಯತೆ!-
ಬಿಕರಿಯಾಗುತಿವೆ ಸಂಸ್ಕೃತಿ ಸಂಸ್ಕಾರಗಳೆಂಬ
ಆಚಾರ ವಿಚಾರಗಳು ಆಡಂಬರದ ಬೆಡಗು ಬಿನ್ನಾಣದ
ಮಾರುಕಟ್ಟೆಯಲ್ಲಿ ಹೇಳ ಹೆಸರಿಲ್ಲದೆ ರಿಯಾಯಿತಿ ದರದಲ್ಲಿ.!
ಆಧುನಿಕತೆಯ ಸೊಗಡಿನೊಳು ಮಾಸುತಿಹ
ಈ ಮೌಲ್ಯಗಳು ಕೊಳ್ಳುವವರಿಲ್ಲದೆ ಬಿಕಾರಿಯಾಗುತ್ತಿವೆ.!
ಕಟ್ಟಕಡೆಯದಾಗಿ ಜಗತ್ತಿನ ಪರಿಧಿಯಲ್ಲಿ ಕೊನೆಯಂಚಿನ
ಸಾವಿನ ಸೂತ್ರ ಕಟ್ಟುಪಾಡು ಮೀರಿದರೆ ಜೀವನ
ಸುಡುಗಾಡು ನೀ ಅರಿತು ನಡೆಯೋ ಓ ಮನುಜ.!!-
ಸುಸಂಸ್ಕೃತ ನಾಡು
ಸೌಂದರ್ಯದ ತವರೂರು
ಶ್ರೀಮಂತಿಕೆಯ ಸಂಸ್ಕಾರದ
ಸುಗಂಧ ಬೀರುವ ಆರೋಗ್ಯಪೂರ್ಣ ನಾಡು
ಸಂಪೂರ್ಣ ಮಾಹಿತಿಯ ಆರತಿಯೂ
ಸಕಾರಾತ್ಮಕ ಬದುಕಿನ ಸನ್ಮಾರ್ಗವೂ
ಸಮ್ಯಕ್ + ಕೃತಿಯಿಂದಾದ ಈ ಸಂಸ್ಕೃತಿ
ಸನ್ನಡೆತೆ ˌಸದ್ಕಾರ್ಯಗಳ ಮೂಲಕ
ಸಾಗುತಿರುವ ನಮ್ಮೀ ನಾಡಿನ ಕೈಂಕರ್ಯವೂ
ಸಂಪ್ರದಾಯಗಳ ಮಜಲು ಕವಲುಗಳಲಿ
ಸುಂದರವಾಗಿ ಮೂಡಿಬಂದಿದೆ!
ಸುಮಧುರ ನಾಡಿನ ಹೆಮ್ಮೆಯ ಗರಿ ನಮ್ಮೀ
ಸಂಸ್ಕೃತಿ !ಸೊಗಡಿದೆ ˌಸೊಗಸಿದೆ ಸಚ್ಚರಿತ್ರೆಯ
ಸದ್ಭಕ್ತಿಯಿದೆ ನಮ್ಮೀ ಸಂಸ್ಕೃತಿಯಲಿ !
ಸಾಲು ಸಾಲು ವಿವಿಧತೆಯಲಿ ಐಕ್ಯತೆ ಬಿಂಬಿಸುತಿರುವ
ಸಂಸ್ಕೃತಿ ನಮ್ಮದು! ಉಳಿಸೋಣ ಬೆಳೆಸೋಣ!
ಸಮೃದ್ಧಿಯ ತೇರ ಎಳೆಯೋಣ
ಸಂತಸˌ ಸಡಗರದ ಸಂಬಂಧವ ಬೆಸೆಯುತ್ತಾ ನಮ್ಮೀ
ಸಂಸ್ಕೃತಿಯ ಮೌಲ್ಯವ ಸರ್ವರಿಗೂ ತಿಳಿಸೋಣ!-
ಸಹನೆ ನಿನ್ನಲ್ಲಿದ್ದರೆ
ಸಕಲವೂ ನಿನ್ನದೆ
ಸಂಸ್ಕೃತಿ ನಿನ್ನಲ್ಲಿದ್ದರೆ
ಸನ್ಮಾನವೂ ನಿನ್ನದೆ
ಸಂಸ್ಕಾರ ನೀ ಮರೆತರೆ
ಸಂಹಾರವೂ ನಿನ್ನದೆ-
ಸಮಾರಂಭವೊಂದಲಲ್ಲಿ ಅವಳು
ಅಪ್ಪಿಕೊಂಡು ಹೇಳಿದಳು ಗಾಲಿಬ್
ಅಪ್ಪಿಕೊಳ್ಳೋದು ಇಂದಿನ ಸಂಸ್ಕೃತಿ,
ಇದನ್ನೇ ಪ್ರೀತಿ ಅನ್ಕೋಬೇಡ ಎಂದು...-
ಗೊತ್ತಾಗುತ್ತಿಲ್ಲ ಯಾರು ಸಾಚಾಗಳು
ಈ ಜಗತ್ತಿನಲ್ಲಿ ಎಂದು.
ಮನಸೋ ಇಚ್ಛೆ ವರ್ತನೆಯಲ್ಲಿ
ಸಂಸ್ಕೃತಿ ಮರೆತವರೇ ಹೆಚ್ಚು....-
ಮನದ ವನದಲ್ಲಿ ಹೂವಿನ ಸಿಂಚನ
ಅರಳಿದ ಸುಮಗಳ ಸುಗಂದದ ಹನಿಗವನ
ಅದುವೆ ಭರತ ಭೂಮಿಯ ಸಂಸ್ಕೃತಿಯ ದಿವ್ಯ ಯಾನ.
ಎಲ್ಲ ಹೂಗಳಿಂದ ಅಲಂಕೃತವಾದ ವನವನ್ನು ನೋಡಿದೆ....
ಎಂತಹ ಸೊಬಗೆಂದು ಹಾಡಿ ನಲಿದಾಡಿದೆ.
ನಾ ನೋಡಿದ ವನವನ್ನು ನೀ ನೋಡ ಬಯಸುವೆಯಾ?
ಕಣ್ಣರಳಿಸಿ ನೀನಿರುವ ಜನ್ಮಭೂಮಿಯ ನೋಡುವೆಯಾ?
ವಿವಿಧ ಮತಗಳ ಆಗರ
ವಿವಿಧ ಧರ್ಮಗಳ ಸಾಗರ
ಇದೆಲ್ಲವು ವಿವಿಧತೆಯಲ್ಲಿನ ಏಕತೆಯ ಸಾರ...
ಈ ಭಾರತ ಮಾತೆಯ ಕೊರಳ ಹಾರ. 🇮🇳-
'ಪಬ್ಜಿಯಂದ' ಮನೆಯ ಸಂಬಂಧ ಹಾಳು, ಸಂಸಾರವೂ ಹಾಳು...
'ಟಿಕ್ ಟಾಕ್' ನಿಂದ ದೇಶದ ಸಂಸ್ಕಾರ ಹಾಳು ಸಂಸ್ಕೃತಿಯೂ ಹಾಳು...
ಹೇಗೆ ಅಂತ ಮಾತ್ರ ಕೇಳ್ಬೇಡಿ,
ಆಡ್ಬೆಡಿ ಅಂತ ಮಾತ್ರ ಹೇಳುವುದಿಲ್ಲ.
ಅನುಭವಿಸಿದ ಮೇಲೆ ನಿಮ್ಮ ಅನುಭವ ಬೇರೆಯವರಿಗೆ (ಬುದ್ಧಿವಾದ) ಹೇಳಿ ಸಾಕು...😊-
ಹೇ ಹುಡುಗಿ..,
ನಮ್ಮ ಸಂಸ್ಕೃತಿ
ಸಂಪ್ರದಾಯಕ್ಕೆ
ಬೆಲೆ ಕೊಡುತ್ತಾ
ಮೈತುಂಬಾ ಸೀರೆ ಸುತ್ತಿ
ನೀನೊಮ್ಮೆ ನನಗೆ ಕಾಣು😍
ಮಳೆಗಾಲದಲ್ಲಿ
ಹಚ್ಚ ಹಸಿರಿನ
ಭೂರಮೆಯ
ಸೊಬಗಿಗೆ ಮರುಳಾಗಿ
ಧರೆಗಳಿದು ಬಂದ
ಆ ಮೋಡದಂತೆ
ನಿನ್ನ ಚೆಲುವಿಗೆ
ಶಿರಭಾಗಿ ಶರಣಾಗುವೆ ನಾನು🧡-