ಗಿಲ್ಲಿ ದಾಂಡು
ಗಲ್ಲಿಯೊಳಗೆ
ಕಲ್ಲ ಮೇಲೆ ಹೊಡೆದರು
ಅಲ್ಲೆ ಮೆಲ್ಲ
ಚಲ್ಲಿ ನಿಂತು
ಹಲ್ಲೆ ಮಾಡಿ ಬಂದರು||
ಬಯಲಿನೊಳಗೆ
ನಯದಿ ಬೀಸಿ
ಭಯದಿ ನಿಂತು ಕಾದರು
ದಯೆಯು ಗೆದ್ದು
ಜಯದ ಮಾಲೆ
ನಿಯತವಾಗಿ ಕುಣಿದರು||
ಹುಡುಗ ಹುಡುಗಿ
ಬಿಡದೆ ನಲಿದು
ಹಿಡಿದು ಕರೆದು ಬಂದರು
ಕಡಿದ ದಾಂಡು
ನಡುವೆ ಬಂದು
ಮುಡಿಯ ಕಟ್ಟಿ ಮೆರೆದರು||
ಕೋಲು ಹಿಡಿದು
ಬಾಲಿನಂತೆ
ಗೋಲಿನಲ್ಲಿ ಹೊಡೆವರು
ನಾಲೆ ಬಳಿಯೆ
ಸಾಲಿನಲ್ಲಿ
ಜಾಲಿಯಿಂದ ನಲಿವರು||-
ಅಮ್ಮನೂರಿನ ಆಗಸದಲಿ ಮೂಡಿದೆ ಕಾಮನಬಿಲ್ಲು
ಮಳೆ ಬಿಸಿಲ ಸಂಗದಿಂದ ರಂಗೇರಿದ ಆಗಸವು
ಏಳು ಬಣ್ಣಗಳ ಹೊತ್ತು ತಂದಿದೆ ಮಳೆಬಿಲ್ಲು
ಸಂತಸದ ಚಿಲುಮೆ ಚಿಮ್ಮುತಿದೆ ಎಲ್ಲೆಲ್ಲೂ
ಮಳೆಯ ಜಿನುಗಲಿ ನೆನೆಯುವ ಸಂಭ್ರಮ
ಅಮ್ಮನ ಬೆಚ್ಚಗಿನ ಮಮತೆಯ ಆಲಿಂಗನ
ಆಕಾಶವ ನೋಡುತ ಖುಷಿಯ ಪಡುತ
ಮಳೆಬಿಲ್ಲಿಗೆ ತುಂಟ ಮಾತುಗಳ ಕೇಳಿಸುತ
ಗೆಳೆಯರು ಕೂಡಿ ಬಣ್ಣಗಳ ಏಣಿಸುತ
ಕಾಮನಬಿಲ್ಲೇ ಎಂದು ಜೋರಾಗಿ ಕೂಗುತ
ಮಳಿಬಿಲ್ಲನು ಹಿಡಿಯುವೆ ಎಂದು ಸಾಗುತ
ಅಪ್ಪನ ನೋಡಿ ಮತ್ತೆ ಮನೆ ಕಡೆಗೆ ಓಡುತ
ಬಣ್ಣದ ಕಡ್ಡಿಯ ಹಿಡಿದು ಹೊರಗೆ ಓಡಿ ಬಂದು
ರಂಗು ರಂಗಾಗಿ ಹಾಳೆಯಲಿ ಚಿತ್ರವ ಬಿಡಿಸಿರಲು
ನಾನು ಬಿಡಿಸಿದ ಕಾಮನಬಿಲ್ಲು ಎಂದು ಕುಣಿಯುತ
ಚಳಿಯಲಿ ಅಜ್ಜಿ ತಂದು ಕೊಟ್ಟಳು ಬಿಸಿಬಿಸಿ ಬಜ್ಜಿಯ
-ಅಂಕಿತಾ ಕೋಪರ್ಡೆ
-
ಶಿಶುಗೀತೆ : ಚಿಟ್ಟೆ
ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು?!!
ನಿನ್ನಯ ರೂಪ ಸೌಂದರ್ಯವ
ಯಾರು ಇಷ್ಟೊಂದು ಸುಂದರವಾಗಿಸಿದರು
ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು-
ನನ ಕಂದ ನನ ಕಂದ
ಚಂದ್ರನ ಮೊಗದಂತೆ ನಿನ ಅಂದ ॥
ಬರುಡಾದ ಮಡಿಲಿಗೆ ಬೆಳಕಾಗಿ ಬಂದೆ
ಬಾಡಿದ ಮನಕೆ ಹಸಿರು ಸಿರಿ ತಂದೆ ॥
ನಿನ ಪುಟ್ಟ ಪುಟ್ಟ ಹೆಜ್ಜೆಗಳ ಕಾಣುವುದೆ ಅಂದ
ನೀ ಕೈತುತ್ತು ತಿಂದು ಬೀರುವ ಮುಗುಳ್ನಗೆ ಚೆಂದ ॥
ಜಗದ ಸಂತಸವೆಲ್ಲ ನಿನಪಾಲಿಗಿರಲಿ
ನೋವೇನಿದ್ದರು ನನ ಪಾಳಿ ಸೇರಲಿ ॥
ಅಷ್ಟೈಶ್ವರ್ಯಗಳ ಕೊಡಿಸುವೆನೆಂದೇಳಲಾರೆ
ಅದಕೂ ಮೀರಿದ ಸುಸಂಸ್ಕೃತಿ ಕಲಿಸದೆ ಇರಲಾರೆ ॥-
ಕಂಡು ಶಶಿಯ ಅಂದ ಚಂದ
ನಕ್ಕನಿಲ್ಲಿ ತುಂಟ ಕಂದನು ,
ಹಟದ ಮೊಂಡು ಚೋರನಿವನು
ತಂದ ಮನಕೆ ಆನಂದವು !
ಬಾನ ವರ್ಷ ಇಳೆಯ ಅಪ್ಪಿ
ಬರದ ಬೇಗೆ ತಪ್ಪಿದೆ ,
ನಗುವ ಕಂದನೊಲವ ಕಂಡು
ತಾಯ ಮಡಿಲು ನಲಿದಿದೆ !
ಗುಡುಗು ಗುಡಿಗಿ ಸಿಡಿಲು ಮಿಂಚಿ
ವನವ ತಂಪುಗೊಳಿಸಿದೆ ,
ತುಂಟತನದ ಆಟ ಕಂಡು
ಮನೆಯ ಮಂದಿ ಕುಣಿದಿದೆ !
ಮಳೆಯ ಕಂಪು ಇಳೆಯ ತಬ್ಬಿ
ನವ ವಸಂತ ತಂದಿದೆ ,
ಬಾನ ಜೀವಿ ಹಿಗ್ಗಿ ಹಿಗ್ಗಿ
ಖುಷಿಯ ಸುಗ್ಗಿ ನೀಡಿದೆ !!
✍️ ನಯನ ಭಟ್ 💞
-
ಚಿಲಿಪಿಲಿ ಕೂಗುವ ಹಕ್ಕಿಗಳೇ
ನಿಮಗೀ ದನಿಯ ಕೊಟ್ಟವರು ಯಾರು ?
ಸಂಜೆಯಾಗಸದ ತಂಪಿನಲಿ ಮೈಮರೆತು
ನಲಿಯೋ ಪಾಠವ ಕಲಿಸಿದವರು ಯಾರು.?
ಬದಲಾಗುವ ಋತುಗಾನದ ಅಂದದಲಿ
ನಿಮ್ಮದೇ ಗಾಯನದ ಮಾರ್ದನ ,
ನೊಂದ ಮನಗಳ ಬೇಗುದಿಗೆ
ಇದೇ ಸಾಲದೇನು ಸಾಂತ್ವನ.. ?
ಮೋಡಗಟ್ಟಿದ ಆಗಸದಂಗಳದಿ
ನೇಸರನ ಹುಡುಗಾಟವು ಮೇಳೈಸಿರೆ
ನಿಮಗೂ ಹಬ್ಬವೇ ವರುಣನ ಆಲಿಂಗನದಿ
ಮಿಳಿತು ಹನಿಹನಿಯೊಂದಿಗೆ ನಲಿಯಲು..?
ನಮ್ಮಂತೆ ನಿಮ್ಮದೂ ಒಂದು ಬಾಳು
ಅದಕೂ ಹಾಕಿಕೊಂಡಿರಿ ತಪ್ಪದ ದಿನಚರಿ ,
ಕೆಂಪೇರಿದ ಬಾನೊಂದಿಗೆ ಪಯಣವದು
ಭರವಸೆಯ ಮುಂಜಾವಿನ ನಿರೀಕ್ಷೆಗಳಲಿ.. ✍️ನಯನ ಭಟ್.
-
ಅಪ್ಪನು ಕೊಡಿಸಿದ ಬಣ್ಣದ ಕೊಡೆ
***********************
ಅಪ್ಪನು ಕೊಡಿಸಿದ ಬಣ್ಣದ ಕೊಡೆ
ನಾನು ಹಿಡಿದು ನಡೆದೆ ಶಾಲೆ ಕಡೆ
ಗೆಳತಿಯರಿಗೆ ಕೊಡೆಯ ತೋರಿಸುತ
ಅಪ್ಪನನ್ನು ಪ್ರೀತಿಯಿಂದ ನಾ ಕೊಂಡಾಡಿದೆ//
ಅಪ್ಪನು ಕೊಡಿಸಿದ ಬಣ್ಣದ ಕೊಡೆಯನ್ನು
ಜಾಗ್ರತೆಯಲ್ಲಿ ಕಾಪಾಡುತ್ತಿದ್ದೆ ಪ್ರತಿನಿತ್ಯ
ಯಾಕೆಂದರೆ ಅಪ್ಪನು ದಿನಾ ಕಷ್ಟಪಟ್ಟು
ದುಡಿದ ಬೆವರಿನ ಹನಿ ಕೊಡೆಯಲ್ಲಿತ್ತು ಸತ್ಯ//
ಅಪ್ಪ ಅಪ್ಪ ನನ್ನಪ್ಪ ಪ್ರೀತಿ ಮನಸ್ಸಿನ
ಮೃದು ಸ್ವಭಾವದ ನನ್ನಪ್ಪ ಬಾಲ್ಯದಲ್ಲಿ
ಹೆಗಲ ಮೇಲೆ ಕೂರಿಸಿ ಊರೂರು
ಸುತ್ತಾಡಿಸಿದವರು ನಗು ನಗುತಲಿ//
ಅಪ್ಪನೆಂದರೆ ನನಗೆ ಎಲ್ಲಿಲ್ಲದ ಒಲವು
ಕಷ್ಟವಿದ್ದರೂ ನಗು ನಗುತಾ ನನ್ನಾಸೆಯ
ಹೇಳದೆನೇ ನೆರವೇರಿಸಿದವರು
ಅಪ್ಪನ ಮುಖ ಕಂಡರೆ ನೋವೆಲ್ಲ ಮಾಯ//
ಅಪ್ಪನ ಪ್ರೀತಿಯು ನನ್ನ ಮೇಲಿತ್ತು
ಅಮ್ಮನ ಆರೈಕೆಯನ್ನು ದಿನವೂ ನೆನೆದು
ಖುಷಿಯಿಂದ ಆಟ ಪಾಠವನ್ನು ಕಲಿಯುತ
ಓದುವುದರಲ್ಲಿ ಆದೆ ನಾ ಮುಂದು//
-
ಜೂನ್ ಮಾಸದ ಕವನಗಳು : (೦೮)
ಮಕ್ಕಳ ಸಾಹಿತ್ಯ ವಿಭಾಗದಲ್ಲಿ
ಶೀರ್ಷಿಕೆ : ನೆಚ್ಚಿನ ಗುರುಗಳ ನೆನೆಯುವೆ ಇಂದು
~~~~~~~~~~~~~~~~~~~
ಗುರುಗಳು ವಿದ್ಯೆಯ ಕಲಿಸುವರು
ಶಿಸ್ತಿನ ಹಾದಿಯ ತೋರುವರು
ಅ..ಆ..ಇ..ಈ ಕಲಿಸುತ ಗುರುಗಳು
ಅಕ್ಷರಲೋಕಕೆ ಕರೆಯುವರು//೧//
ತಪ್ಪು ಮಾಡಿದರೆ ತಿದ್ದುವರು
ಮಕ್ಕಳ ಜೊತೆಗೆ ಬೆರೆಯುವರು
ಮಧ್ಯಾಹ್ನದ ಊಟವ ಬಡಿಸುತ
ತಾವೂ ಜೊತೆಗೂಡಿ ಸವಿಯುವರು//೨//
ಅಂಗನವಾಡಿಯು ಬಲುಚಂದ
ಪುಟಾಣಿಗಳ ತುಂಟಾಟವೇ ಅಂದ
ಕೈಯ ಹಿಡಿದು ಬರೆಸುತಲಿದ್ದರು ಅಂದು
ಸುಮಂಗಲ ಟೀಚರ ನೆನೆಯುವೆ ಇಂದು//೩//
ಇನ್ನೂ ಇದೆ->-
ಅಳಿಲೆ ಅಳಿಲೆ
ಓಡೋಡಿ ನನ್ನ ಬಳಿ ಬಾ ತಿಂಡಿ ಕೊಡುವೆ.,
ಕೇಳಲೆ ಕೇಳಲೆ
ಹಾರಾಡಿ ಬಾ ನಾನೂ ನಿನ್ನ ಜೊತೆ ಆಡುವೆ..
ಕುರುಕಲು ತಿಂಡಿ
ತುಂಬಿ ತಂದೆನು ಗಿಂಡಿ ತಿನ್ನೋಣ ಬಾ ಉಂಡಿ.,
ಚುಮು ಚುಮು
ಚಳಿಯಲಿ ಚಂಗನೆ ನೆಗೆದ್ರೆ ಮಾಯ ಈ ತಂಡಿ..
ನೆಗೆದು ನಗಾಡಿ
ತಿಂದು ನಲಿಯೋಣ ಅಮ್ಮ ಕೊಟ್ಟ ಹಣ್ಣನು.,
ನಗುವ ಹರಡಿ
ದಿನ ಕಳೆಯೋಣ ಬಿಟ್ಟು ಹೋಗ್ಬೇಡ ನನ್ನನು..
ನಾನು ನೀನು
ಇಬ್ಬರೆ ಈ ಕೈ ತೋಟದಲ್ಲಿ ಬಿಡು ನೀ ಭಯ.,
ತಂಟೆ ತರಲೆಯಿಂದ
ಗೆದ್ದರೆ ನಿನ್ನ ನಾನಿಲ್ಲಿ ಬೇಡ ಯಾವ ಸಂಶಯ..-