ಶಿಕ್ಷಣ ವೃತ್ತಿಗೆ ನಿದರ್ಶನ
ನಿಮ್ಮ ಜೀವನ
ನಿಮ್ಮ ನಡೆ-ನುಡಿಯಿಂದ
ಬದುಕಾಯ್ತು ಪಾವನ
ನೀವೊಂತರ ಗಂಗೆ
ಪಾಪವ ತೊಳೆಯೊ ತುಂಗೆ
ಕೈ ಹಿಡಿದವ ಮುದ್ದು ರಾಜಕುಮಾರ
ನಿಮ್ಮೊಲವು ಎಂದೂ ಅಮರ
ಜೀವನದ ತಿರುವು
ನಿಮ್ಮಿಬ್ಬರ ಸಂಗಮದ ಒಲವು
ಇಂದಿನ ದಿನ ಆ ಸಂಭ್ರಮ
ಕಳೆದಿರಿ ಜೊತೆ ೧೨ ವರುಷ ಎನ್ನುವುದಕ್ಕಿಂತ
ಸವಿದಿರಿ ಜೊತೆ ಎನ್ನುವುದು ಚೆಂದ
ಹರನ ಆಶೀರ್ವಾದ ನಿಮ್ಮೊಲವಿಗಿದೆ
ನಿಮ್ಮಿಬ್ಬರ ಪ್ರೇಮದೀ ನಮಗೂ ಪಾಲಿದೆ-
"೨೫** ವರ್ಷಗಳ ಅನುಬಂಧಕ್ಕೊಂದು ಬರಹ"
🌷🌷🌷🌷🌷🌷🌷🌷🌷🌷🌷🌷🌷🌷🌷
ಚಿರ ಎನ್ನುವುದಿದ್ದರೆ ಅದು ಪ್ರೀತಿ ಮಾತ್ರ
ಅದ ಉಳಿಸಿಕೊಳ್ಳಲು ಬೇಕು
ನಂಬಿಕೆ-ಹೊಂದಾಣಿಕೆಯೆಂಬ ಸೂತ್ರ
ಎಲ್ಲೊ ಹುಟ್ಟುವ ಹೆಣ್ಣು
ಯಾರೊ ಮನೆಗಾಗುವಳು ಕಣ್ಣು
ಅವಳ ಜೀವನವೇ ಒಂದು ವಿಸ್ಮಯ
ನನಗನ್ನಿಸುವುದು ಅಮ್ಮನ ನೋಡಿದರೆ
ಹೆಣ್ಣು ನಿಜ ಕಾಣುವ ದೇವತೆಯ
ಹೆಣ್ಣಿನ ತ್ಯಾಗವಂತೂ ದೊಡ್ಡದು
ಅದಕ್ಕಾಗಿಯೆ ಭಗವಂತ ದೂರ ಇರುವ ಇಂದು
ಇರಲಿ ನಿಮ್ಮಂತವರ ಸುಖ ಹೊಂದಾಣಿಕೆಯ ಬಾಳು
ಎಷ್ಟೊ ಮುಗ್ದ ಮನಸುಗಳಿಗೆ ಸ್ಪೂರ್ತಿ
ಇರಲಿ ನಿಮ್ಮ ಪಯಣ ಜೊತೆಜೊತೆಯಾಗಿ ನಿರಂತರ
೨೫* ವರ್ಷ ದಾಟಿದ ಪಯಣ ೫೦* ವರ್ಷಕ್ಕೂ ಸಹ
ಇದೇ ಪ್ರೇಮ ವಾತ್ಸಲ್ಯ ಹೊಂದಾಣಿಕೆಯಿಂದ ನಡೆಯಲೆಂದು ಆಶಿಸುತ್ತಾ
ಇಲ್ಲಿನ ಎಲ್ಲ ಬರಹಗಾರರ ಪರವಾಗಿ
ನಿಮಗೆ ಹೃದಯ ಪೂರ್ವಕ
ಅಭಿನಂದನೆಯ ಶುಭಾಶಯಗಳು ತಿಳಿಸಲು ನನಗೆ ಖುಷಿಯಿದೆ.🤗-
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ಈ ದೇಹಕೆ ಅಸ್ತಿತ್ವ ನೀಡಿದ ಜನ್ಮದಾತರಿವರು
ಆಡಿಸಿ ನಲಿಸಿ ನಮ್ಮ ಬೆಳೆಸಿದವರಿವರು
ವಿದ್ಯೆ, ಬುದ್ದಿ, ಸಂಸ್ಕಾರವ ತಿದ್ದಿ ತೀಡಿದವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ಸರಿ ತಪ್ಪು, ಒಳಿತು ಕೆಡುಕುಗಳ ತಿಳಿಸಿದವರು
ನೋವು ನಮಗೆ, ಕಣ್ಣೀರ ಸುರಿಸಿದವರಿವರು
ಕಷ್ಟವೆಲ್ಲ ನುಂಗಿ ಸುಖವ ಹಂಚಿದವರಿವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ನಿಸ್ವಾರ್ಥ ಪ್ರೀತಿಗೆ ಸ್ಪೂರ್ತಿಯಾದವರು
ತಾಳ್ಮೆ, ತ್ಯಾಗಗಳ ಸ್ವರೂಪವಾದವರು
ಅನುದಿನ ಮಮತೆಯ ಮಳೆಸುರಿದವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ನಮ್ಮ ಬಯಕೆಗಳಿಗೆ ಆಧಾರವಾದವರು
ಕನಸುಗಳ ನನಸಾಗಿಸಲು ಪಣ ತೊಟ್ಟವರು
ನಮ್ಮ ಪ್ರೀತಿಯ ಅಪ್ಪ ಅಮ್ಮ ಇವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು-
ಕೂಡಿದ ವರುಷಗಳು ಎಷ್ಟಾದರೇನು
ಕೊನೆಗೂ ಮಾಸದ ಅನುಬಂಧ ಇದ್ದರೆ ಸಾಕೆನು
ಕೈ ಹಿಡಿದ ದಿನವ ನೆನೆಯಲು ದಿನ ಬೇಕೆನು
ಕೈ ಹಿಡಿದಾಗಲೆಲ್ಲ ಅದೇ ಕ್ಷಣವು ಅನಿಸಿದರೆ ಸಾಕೆನು
ಕುಟುಂಬದ ಕುಶಲ ನಿಮ್ಮ ಈ ಬಂಧವು
ಖುಷಿಯಾಗಿರಲಿ ಸೇರಿ ಎಲ್ಲರೊಳು ಈ ಸಂಬಂಧವು
ಕಾಲನ ಒಡೆಯ ಮುಕ್ಕಣ್ಣನ ಆಶೀರ್ವಾದವಿರಲಿ
ಕಾಲ ಉರುಳಿದರು ಈ ಮಮತೆಯು ಇಬ್ಬರಲ್ಲು ಇರಲಿ
ಕೈ ಎತ್ತಿ ಹರಸಲು ನಾ ಚಿಕ್ಕವನು
ಕೈ ಮುಗಿದು ಹೇಳುವೆ ಹೀಗೆ ಇರಿ ಇನ್ನು..
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು..
💐💐💐💐💐💐-
ಈ ಒಂದು ವರುಷದಲ್ಲಿ,
ಎರಡು ಸಾಲುಗಳಲ್ಲಿ ಗಾಯಿಪದಗಳ ನಮಗೆ ಓದಲು ಉಣಿಸಿ
ನಗುಮೊಗದಿಂದಲೇ ಮಾತನಾಡಿ, ಹೊಸ ಹೊಸ ಗೆಳೆಯರ ಸ್ವಾಗತಿಸಿ
ಯುವರ್ಕೋಟ್ ನಲ್ಲಿ ಮಿಂಚುತ್ತಾ, ಹರುಷದಿಂದ ದಿನಕಳೆಯುತ್ತಾ, ನೋವ ಮರೆಯುತ್ತಾ, ನಗುವ ಹಂಚುತ್ತಾ,
ಪದಗಳ ಪೋಣಿಸಿದ ವಿವಿಧ ಆಕರ್ಷಕ ಕಸೂತಿಯಲ್ಲಿ
ಓದುಗರ ಗಮನ ಸೆಳೆಯುತ್ತಿರುವ
ನಿಮಗೆ ಇನ್ನಷ್ಟು ಬರೆಯುವ ಶಕ್ತಿ ಆ ಭುವನೇಶ್ವರಿ ನೀಡಲಿ.
ನಿಮ್ಮೆಲ್ಲ ಕನಸುಗಳು ನನಸಾಗಲಿ. ಶುಭಾಶಯಗಳು💐-
ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ ಉಲ್ಲಾಸದ ಉತ್ಸಾಹ
ಕೋರುವೆ ಆ ದೇವರಲ್ಲಿ ಮನ ಬಿಚ್ಚಿ
ಹಾಯಾಗಿ ಹಾರಾಡಿ ನೀವು ಆಕಾಶದೆತ್ತರ ಹಕ್ಕಿಯಂತೆ ರೆಕ್ಕೆ ಬಿಚ್ಚಿ
ಇಂದು ನಿಮ್ಮ ಮದುವೆಗೆ ಐದನೇಯ ವಾರ್ಷಿಕೋತ್ಸವ
ನಿಮ್ಮಿ ಪ್ರೀತಿಗೆ ದಿನವೂ ನಿತ್ಯೋತ್ಸವ
ನಿಮಗೆ ನನ್ನ ಹೃತ್ಪರ್ವಕ ಶುಭಾಶಯ
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ-
ನೂರಾರು ವರುಷ
ತುಂಬಿರಲಿ ಹರುಷ
ನಿಮ್ಮ ಪ್ರೇಮ ಬಾಂಧವ್ಯದಲಿ
ನಗುವೊಂದೆ ಇರಲಿ ಅನುದಿನ ಅನುಕ್ಷಣ
ಎಂದು ಕೋರುವೇವು ಆ ದೇವರಲ್ಲಿ ಮನ ಬಿಚ್ಚಿ
ಹಾಯಾಗಿ ಹಾರಾಡಿ ನೀವು
ಆಕಾಶದೆತ್ತರ ಹಕ್ಕಿಯಂತೆ ರೆಕ್ಕೆ ಬಿಚ್ಚಿ
ನೀಮಗೆ ನಮ್ಮ ಹೃತಪೂರ್ವಕ ಶುಭಾಶಯ
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನಮ್ಮೆಲ್ಲರ ಆಶಯ
ವಿವಾಹ ವಾರ್ಷಿಕತ್ಸವದ ಹಾರ್ದಿಕ ಶುಭಾಶಯಗಳು 🤗😍
-
ಏಳು ವರ್ಷಗಳ ನಮ್ಮ ಜೀವನದ ಬಂಡಿ
ಉರುಳಿದ್ದು ಅರಿವಿಗೆ ಬಾರಲಿಲ್ಲ.
ಪ್ರತಿ ವರ್ಷ ಹಾದುಹೋಗುವ ವರ್ಷದ
ಹಾಗೆಯೇ ಈ ವರ್ಷವು ನಮ್ಮ ಪ್ರೀತಿಯ
ಇನ್ನೊಂದು ವರ್ಷವಾಗಿದೆ.
ನಮ್ಮ ಪರಿಪೂರ್ಣ ಮದುವೆ ಒಂದು ಮಾದರಿ ಎಂದು ನಾನು ಹೆಮ್ಮೆಪಡುತ್ತೇನೆ.
ನಮ್ಮ ವಾರ್ಷಿಕೋತ್ಸವದ ಆಚರಣೆಯು ಆಡಂಭರವಾಗಿ, ಪಟಾಕಿಗಳ ಶಬ್ಧವನ್ನಾಗಲಿ, ಶ್ರೀಮಂತಿಕೆಯ ಭವ್ಯತೆಯನ್ನಾಗಲೀ ಹೊಂದಿಲ್ಲ. ಆದರೆ ಇದು ನಮ್ಮ ನೆನಪುಗಳ ಕನಸವನ್ನು,ನಮ್ಮ ಜೀವನದ ನಗುವನ್ನು ಹೊಂದಿದೆ.
ನಮ್ಮ ಪ್ರೀತಿಯ ವೈಭವದ ಪ್ರತಿಬಿಂಬವಾಗಿದೆ.
ಆ ದೇವರಿಗೆ ಅನಂತಕೋಟಿ ಧನ್ಯವಾದಗಳನ್ನರ್ಪಿಸುವೆ ನಿನ್ನಂತ ಪತಿಯನ್ನ ದಯಪಾಲಿಸಿದ್ದಕ್ಕೆ .ನಿನ್ನನ್ನೊಗಳಲುಪದಗಳವಶ್ಯಕತೆ ಇಲ್ಲ ನೀ ನೀಡೋ ಪ್ರೀತಿಯೇ ಸಾಕು
ಈ ಪ್ರೀತಿ ಚಿರಕಾಲವಿರುವುದೆಂಬ ನಂಬಿಕೆಯಂತೂ ನನಗಿದೆ.ಏಳೇಳು ಜನ್ಮಕ್ಕೂ ಹೀಗೆ ಸಾಗಲಿ
ನಮ್ಮ ಒಲವಿನ ಬೆಸುಗೆಯ ಬಂಡಿ
This is all I want to do with you forever
💕ಮದುವೆಯ ವಾರ್ಷಿಕೋತ್ಸವದ ಶುಭಾಷಯಗಳು ಪತಿದೇವ💕-
ಮಿತ್ರನ ಪಾಲಕರ ವಿವಾಹ ವಾರ್ಷೀಕೋತ್ಸವ
ನಿನ್ನೆ ಮೊನ್ನೆ ಕಟ್ಟಿ ಕೊಂಡಂತೆ ಭಾಸ,
ಐವತ್ತುವರುಷಗಳ ಪ್ರೀತಿ ಪ್ರಿಯವಾಸ.
ಹಿಂದೆ ನೋಡಿದರೆ ಹೊರಳಿ,
ದಿಟ್ಟ ಕಟ್ಟುನಟ್ಟಿನ ಸಂಸಾರದ ಹಳಿ.
ಅಡೆ ತಡೆಗಳು ಬಂದವು ಎಲ್ಲರಂತೆ,
ಸಾಗಿದಾಟಿ ಬಂದಿರಿ ಬಿಟ್ಟುಕೊಡದಂತೆ.
ಮುತ್ತು ರತ್ನಗಳಂಥ ಮಕ್ಕಳ ಬಳುವಳಿ,
ಅದುವೇಭಾಗ್ಯ ನಿಮ್ಮ ಪರಸ್ಪರರ ಬಳಿ.
ಅಂದಿನಂತೆ,
ಇಂದೂ ನಡೆಯುತಿದೆ ಸಂಭ್ರಮದ ಮೇಳ!,
ಸಾಗಿಬಂದಿರಿ ನೀವು ತಪ್ಪಿಲ್ಲದಂಥ ತಾಳ.
ನಿರಂತರಿಸಲಿ ಬಾಳಬಂಡಿ ಪ್ರೀತಿ ತುಂಬಿ,
ಈ ಜೀವನದಿ ವಿಶ್ವಾಸ ಪರಸ್ಪರರ ನಂಬಿ.
ನಮ್ಮೀ ಹಾರೈಕೆ ಈ ಕೆಲ ಸಾಲುಗಳಿಂದ,
ಕಲಿತೆವು ಮಾದರಿಯ ನಾವು ನಿಮ್ಮಿಂದ.
...ಅಶೋಕ ಪ್ರ ದೇಸಾಯಿ.....
-
ಸುದೀರ್ಘ ೩೫ ವರ್ಷಗಳ
ದಾಂಪತ್ಯ ಜೀವನದ ಜೋಡಿ
ಬೆರಗಾಗುವರೆಲ್ಲ ಇವರನ್ನ ನೋಡಿ.
ಇಂದಿಗೂ ಅದೇ ಒಲವಿನ ಹೊನಲು
ಧಾರೆಯೆರೆದುದು ಆನಂದದ ಒಡಲು
ಅವರ ಗುಣಕೆ ಇವರು ಮರುಳು
ಇವರ ತ್ಯಾಗಕೆ ಅವರು ಮರುಳು
ಒಬ್ಬರಿಗೊಬ್ಬರ ಮನ ಮರುಳು.
ಅನ್ಯೋನ್ಯತೆಯ ಕಂಡವರು
ಅವಿನಾಭಾವವ ಬೆಳೆಸಿದವರು.
ಆದರ್ಶರು ಈ ಹೆತ್ತವರು.
ಶುಭಾಶಯ ನಿಮ್ಮ ವಾರ್ಷಿಕೋತ್ಸವಕೆ
೬ನೇ ತಾರೀಖು ೬೦೦ನೇ ಲೇಖನ
ವಿಶೇಷವಾಯಿತು ನನಗೀಕ್ಷಣ.-