ನನ್ನದೊಂದು ಪುಟ್ಟ ಬಿನ್ನಹ
ಬರುವೆಯಾ ನೀ ಇನ್ನೂ ಸನಿಹ
-
ನಿನ್ನ ಕಣ್ಣಿನಾಳದಲ್ಲಿ ಇಳಿದು ಈಜಬಲ್ಲೆನೇ ನಾನು
ಮೊದಲೇ ಈಜು ಬಾರದು ನನಗೆ
ನಿನ್ನ ಒಲವ ಅಪ್ಪುಗೆಯೇ ಜೀವರಕ್ಷಕ ಕವಚವು
ನಿನ್ನ ಪ್ರೀತಿಯಲ್ಲಿ ತೇಲುತಿರುವೆ ನಾ ಹೀಗೆ-
ಸೈನ್ ತರಂಗವೊಂದು ಅಂದದ
ಹೆಣ್ಣಾದಂತೆ ಮೈಮಾಟ
ಬಳುಕುವ ಬಳ್ಳಿಯ ನಾಚಿಸುವ
ವಯ್ಯಾರದ ಆಟ
ಮದನನ ಮದವೇರಿಸುವಂತೆ
ಉಬ್ಬು ತಗ್ಗುಗಳ ಓಲಾಟ
ಕೇಳೆ ರತಿ ನಿನ್ನ ಈ ಸೊಬಗಿನ ಚೆಲ್ಲಾಟ
ಮನ್ಮಥನ ಕಂಗಳಿಗೆ ಸೌಂದರ್ಯದ ರಸದೂಟ-
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ಈ ದೇಹಕೆ ಅಸ್ತಿತ್ವ ನೀಡಿದ ಜನ್ಮದಾತರಿವರು
ಆಡಿಸಿ ನಲಿಸಿ ನಮ್ಮ ಬೆಳೆಸಿದವರಿವರು
ವಿದ್ಯೆ, ಬುದ್ದಿ, ಸಂಸ್ಕಾರವ ತಿದ್ದಿ ತೀಡಿದವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ಸರಿ ತಪ್ಪು, ಒಳಿತು ಕೆಡುಕುಗಳ ತಿಳಿಸಿದವರು
ನೋವು ನಮಗೆ, ಕಣ್ಣೀರ ಸುರಿಸಿದವರಿವರು
ಕಷ್ಟವೆಲ್ಲ ನುಂಗಿ ಸುಖವ ಹಂಚಿದವರಿವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ನಿಸ್ವಾರ್ಥ ಪ್ರೀತಿಗೆ ಸ್ಪೂರ್ತಿಯಾದವರು
ತಾಳ್ಮೆ, ತ್ಯಾಗಗಳ ಸ್ವರೂಪವಾದವರು
ಅನುದಿನ ಮಮತೆಯ ಮಳೆಸುರಿದವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು
ನಮ್ಮ ಬಯಕೆಗಳಿಗೆ ಆಧಾರವಾದವರು
ಕನಸುಗಳ ನನಸಾಗಿಸಲು ಪಣ ತೊಟ್ಟವರು
ನಮ್ಮ ಪ್ರೀತಿಯ ಅಪ್ಪ ಅಮ್ಮ ಇವರು
ನಮ್ಮ ಹೆತ್ತವರಿವರು, ಹೆಗಲ ಮೇಲ್ಹೊತ್ತವರಿವರು-
ನಡೆದಾಡುವ ದೇವರು ಬಡವರಿಗೆ
ಜ್ಞಾನಜ್ಯೋತಿ ಸಾವಿರಾರು ಮಕ್ಕಳಿಗೆ
ಅಕ್ಷಯಪಾತ್ರೆ ಹಸಿದ ಹೊಟ್ಟೆಗಳಿಗೆ
ದಾರಿದೀಪವಾದರು ದೀನ ದಲಿತರಿಗೆ
ಜ್ಞಾನಯೋಗಿ ಕರ್ಮಯೋಗಿ
ಕರುಣಾಮಯಿ ತ್ಯಾಗಮಯಿ
ಅನ್ನದಾನಿ ವಿದ್ಯಾದಾನಿ ಮಹಾದಾನಿ
ತ್ರಿವಿಧ ದಾಸೋಹದ ಮಹಾಮುನಿ
ಹುಟ್ಟು ಸಾವುಗಳಿಲ್ಲ ದೇವರಿಗೆ
ಇರುವರು ನಮ್ಮೆಲ್ಲರ ಹೃದಯದೊಳಗೆ-
ಚಳಿಯಲಿ ನಡುಗುತ ಬದಿಯಲಿ ನೀನಿರಲು ಬಳಸಿ ಮುತ್ತಿಟ್ಟೆ
ತುಟಿಗಳಿಗೆ ಒರಟಾಗಿ ಏನೋ ತಗುಲುತಿರೆ ಎಚ್ಚರವಾಗಿ ಕಣ್ಬಿಟ್ಟೆ-
ಓ ಸುಂದರಿ, ನಿನ್ನ ಸುತ್ತ ದುಂಬಿಯೊಂದು ಸುಳಿಯುತಿದೆ
ಅಧರಗಳ ಮಧುವ ಹೀರಲು ಹೊಂಚು ಹಾಕಿ ಕುಳಿತಿದೆ-