ನಿನ್ನಿ ಸೌಂದರ್ಯವನ್ನು ಹೇಗೆ ಬಣ್ಣಿಸಲಿ🤔
ನಿನ್ನ ಈ ನಗು ಪೌರ್ಣಿಮೆಯ
ಚಂದಿರನನ್ನು ನಾಚಿಸುದೇನೋ
ಅರಳಿದ ಕಮಲವು ನಿನ್ಮುದ್ದಾದ
ಮೊಗದ ಹಾಗೆ ಆಕರ್ಷಿಸುವುದೇನೋ
ಕಂಗಳ ಕಾಂತಿಯು ನಕ್ಷತ್ರಕ್ಕೂ
ಹೊಳಪು ನೀಡಬಹುದೇನೋ
ನಾಸಿಕದ ನತ್ತು ನಾಚುತಿದೆ
ನಿನ್ನ ಅಂದವ ಕಂಡು
ಕೊರಳ ಹಾರವು ನೀನೇ ಸುಂದರಿ
ಎಂದು ಹಿಡಿದಿದೆ ಮೊಂಡು
ಕಿವಿಯೋಲೆಯು ಕೂಗಿ ಹೇಳುತ್ತಿದೆ
ನಿನ್ನ ಚಲುವಿನ ಮುಂದೆ ನಾನು ಬೆಪ್ಪ ನೋಡು
ಹಸಿರ ಸೀರೆ ಕೆಂಪು ರವಿಕೆ ತೊಟ್ಟು
ಮಿನುಗುತಿರುವ ಚಲುವೆ ನೀನೇನೆ-
ಎಲ್ಲರಿಗೂ ಸಿಗುವಂತೆ
ನನಗೆ ನೀ ಸಿಕ್ಕೆ.
ನೀ ಯಾರೊ ನಾ ಕಾಣೆ
ನಾನು ಯಾರೊ ನೀ ಕಾಣೆ.
ಆದರೇ ಒಂದು ಸುಂದರವಾದ
ಸಂಭಾಷಣೆ ನಡೆಯುತ್ತಿದೆ
ನನ್ನ ನಿನ್ನ ನಡುವೆ
ಗೆಳತಿ.-
ಹೇ ಹುಡುಗಿ,
ನಿನ್ನಂದ
ವರ್ಣಿಸುವ
ಅವಕಾಶ ಕೊಡು🤗
ವರ್ಣನೆಗೂ
ಅಸೂಯೆ
ಪಡುವಷ್ಟು ವರ್ಣಿಸುವೆ😍-
ವರ್ಣನೆಗೆ ನಿಲುಕದ
ಮೈಸೂರು ದಸರೆಯ ಸೊಗಸು ನೀನು😍
ಬರಹದಲ್ಲೇ ನಿನ್ನ ಹೊತ್ತು
ತಿರುಗುವ ಅರಮನೆಯ ಅಂಬಾರಿ ನಾನು🧡-
ಹೇಗೆ ವರ್ಣಿಸಲಿ
ನಿನ್ನ ಅಂದವ
ಪದಗಳು ಮರೆತಂತಿವೆ
ನಿನ್ನ ನೆನೆದಾಗಲೆಲ್ಲಾ
ಹೃದಯದ ಬಡಿತವು
ಹೆಚ್ಚಾದಂತಿದೆ ನಿನ್ನ
ನಗು ನೋಡಿ ನನ್ನ.
ಮುಂಗುರುಳು
ನಾಚುತ್ತಾ ನಿನ್ನ ಕೈ
ಬೆರಳ ಸ್ವರ್ಶಕ್ಕೆ
ಕಾಯುತ್ತಿದೆ. ಒಮ್ಮೆ
ನಿನ್ನ ಕಿರು ಬೆರಳಿಗೆ
ನನ್ನ ಕಿರುಬೆರಳ
ಪರಿಚಯ
ಬೇಕೇನಿಸುತ್ತಿದೆ
ಎಷ್ಟು ನೋಡಿದರು
ನಿನ್ನ ಮುದ್ದಾದ
ಮುಖವ ಮತ್ತೆ ಮತ್ತೆ
ನೋಡಬೇಕೆನಿಸುತ್ತಿದೆ.-
ಪಳ ಪಳ ಹೊಳೆಯುವ
ಪಿಳಿ ಪಿಳಿ ಕಣ್ಣವಳು,
ದಾವಣಗೆರೆ ಬೆಣ್ಣೆ ಹೋಲುವ
ಮೃದುವಾದ ಕೆನ್ನೆಯವಳು,
ಮಾಸಿಕ ಕಂತು ಕಟ್ಟಿಯಾದರೂ
ನೋಡಬೇಕೆನಿಸುವ ನಾಸಿಕದವಳು,
ಅಮೃತ ಶಿಲೆಯೇ ಬೆರಗಾಗುವ
ಬಿಳುಪಾದ ಮೈಬಣ್ಣದವಳು,
ಹುಣ್ಣಿಮೆಯ ಚಂದಿರನ
ಹಾಲ್ಬೆಳಕಿಗೆ ಪೈಪೋಟಿ ನೀಡುವ
ಚಂದನವನದ ಗೊಂಬೆ ಇವಳು.-
ಯಾರಿವಳು..???
ಇಂದ್ರ
ಲೋಕದಿಂದ
ಧರೆಗಿಳಿದು
ಬಂದ
ದೇವಕನ್ಯೆ ನಾ,
ಸಪ್ತ
ಸಾಗರದಾಳದಿಂದ
ಉದ್ಭವಿಸಿದ
ಸಾಗರಕನ್ಯೆ ನಾ.-
ಆ
ನಿನ್ನ
ಲೇಖನಿಗೂ
ತಿಳಿದಿದೆ ನಲ್ಲ
ನನ್ನೊಲವ
ಅನುರಾಗ
ನಿನ್ನ ಮಡಿಲಲಿ
ವರ್ಣನೆಗೂ ಮೀರಿ
ನಗುವುದೆಂದು.-