ಶ್ರೀರಾಮ ಜಯರಾಮ
ದಶರಥರಾಮ ಕೌಶಲ್ಯ ರಾಮ
ಪಿತೃವಾಕ್ಯ ಪರಿಪಾಲಕ ರಾಮ
ಹನುಮನ ಉಸಿರಾಗಿಹ ರಾಮ
ಸರ್ವರ ಸಲಹುವ ಮಹದೇವ
ಕರುಣಿಸೋ ರಾಮ
ಹೇ ರಾಮ ರಘುರಾಮ
ಜಾನಕಿವಲ್ಲಭ ರಾಮ..
ಜಗದೋದ್ಧಾರಕ ರಾಮ..-
ಜೈ ಶ್ರೀ ರಾಮ್ 🏹🚩
***************
ಹಿಂದುತ್ವದ ಗುರಿಕಾರ ಪಿತೃವಾಕ್ಯ ಪರಿಪಾಲಕ ಏಕಪತ್ನಿ ವೃತಸ್ಥನಾದ ಶ್ರೀ ರಾಮನ ಬದುಕಿನ ಕಥೆ ಧರ್ಮ,ತ್ಯಾಗ,ಏಕತೆ,ಶಕ್ತಿ,ಯುಕ್ತಿ,ವಚನ ಪಾಲನೆಯನ್ನು ತೋರುತ್ತದೆ ಹೊರತು ರಕ್ತಪಾತವನ್ನಲ್ಲ ಹಿಂದುತ್ವದ ಮೂಲಮಂತ್ರ ಶಾಂತಿ, ಒಗ್ಗಟ್ಟೇ ಹೊರತು ಹಿಂಸೆಯಲ್ಲ-
ನಾ ಮಾಡಿದ ಪಾಪಗಳ
ಮನ್ನಿಸಿ ಸಲಹೋ ಶ್ರೀ ರಾಮ,
ನಾ ಮಾಡಿದ ಪುಣ್ಯಗಳ ಒಪ್ಪದೇ,
"ನಾ" ಎಂಬುದಕ್ಕೆ ನೀಡು ವಿರಾಮ,
ಪಾಪ, ಪುಣ್ಯಗಳ ನಡುವೆಯೂ
ನಿನ್ನ ಧೇನಿಸುವುದೇ ನನಗೆ ಆರಾಮ,
ಸೀತಾರಾಮ, ರಾಜಾರಾಮ, ಹರೇರಾಮ.
-
ದಶರಥರಾಮ ಬಂದನು ನೋಡಿ
ಕೌಸಲ್ಯೆನಂದನ ಮೊಗವನು ನೋಡಿ
ಅನುಜರ ರಾಮನ ಮುಗುಳ್ನಗೆ ನೋಡಿ
ಜಾನಕಿರಾಮನ ಗುಣಗಳೇ ಚೆಂದ ನೋಡಿ
ಹನುಮನರಾಮನು ಮರಳಿ ಬಂದ ನೋಡಿ
ಅಯೋಧ್ಯೆ ರಾಮನು ಗಳಿಸಿದ ಜಯವ ನೋಡಿ
ಜಗದ್ಧೋದಾರಕರಾಮನು ಮರಳಿದ ಬಂದ ನೋಡಿ
ಭರತದ ಖಂಡವ ಬೆಳಗುವ ಸಂಕಲ್ಪ ಕಟ್ಟಿದ ನೋಡಿ
ಎಲ್ಲರೂ ಹೇಳಿ ಜೊತೆ ಜೊತೆಯಲ್ಲಿ
ರಾಮ ರಾಮ ಜಯ ಶ್ರೀರಾಮ ಎಂದು..!!
-
ರಾಮ ರಾಮ..
ಭೂಲೋಕದ ರಾಯ ರಾಮ
ಯಾಕೋ ನಾ ಇಂದು ಮರುಳಾದೆ
ರಾಮ ರಾಮ ಎಂದು
ತನುವು ನುಡಿಯುತಿರುವುದು !!
ರಾಮ ರಾಮ..
ಹೃದಯದ ಭಾವ ರಾಮ
ಏಕೋ ನಾ ಸೋತೆ ನಾಮಕ್ಕೆ
ರಾಮ ರಾಮ ಎಂದು
ಮನವು ಮಿಡಿಯುತಿರುವುದು !!
-
ರಾಮ ರಾಮ ರಾಮ ಹಾಡಿರೋ..
ರಾಮ ಬರುವನು...ರಾಮನೂರಿಗೆ !!
ಶ್ರೀರಾಮಚಂದ್ರನು ವಿಶ್ವ ಮಾದರಿಯು..
ವಿಶ್ವರೂಪಿಯೂ...ವಿಶ್ವ ಖ್ಯಾತಿಯೂ
ರಾಮ ಬರುವನು...ರಾಮನೂರಿಗೆ !!
ರಾಮ ರಾಮ ರಾಮ ಜಪಿಸಿರೋ..
ರಾಮ ಬರುವನು...ರಾಮನೂರಿಗೆ !!
- ಸುಧೆ ಸಂಪದ🍁
-
"🧡ರಾಮಾಭಿಮಾನ ನಮಗೂ ಬೆಟ್ಟದಷ್ಟಿದೆ
ಅದ್ದೂರಿಗಲ್ಲ ಅನುಸರಣೆಗೆ..👍
"🧡ಶ್ರೀರಾಮ ನಾಮ ನಾವು ಜಪಿಸುವೆವು
ಅನ್ಯಧರ್ಮರ ವಿರೋದಕ್ಕಲ್ಲ..🤔
✊ ಎಲ್ಲರೂ ಒಂದೇ ಎಂದು ಸಾರುವುದಕ್ಕೆ✊..
"🗣️ಜೈ ಶ್ರೀ ರಾಮ್ ಎಂದೂ ನಾವು ಕೂಗುವೆವು
ರಾಮನನ್ನು ಕಾಣಲಿಕ್ಕಲ್ಲ.🤳
ನಮ್ಮೊಳಗಿನ ರಾಮನನ್ನು ಎಚ್ಚರಿಸಲು..👥
ಎಲ್ಲ ವಿಕೃತಗಳಿಂದ ಮುಕ್ತಿ ಹೊಂದಲು..😩
"ರಾಮ ನಮ್ಮಲ್ಲೆ ಇರುವ 👥
ವಿಕೃತ ಕಾಮನೆಗಳನೋಮ್ಮೆ ಸುಟ್ಟು ನೋಡಿ..👥
ರಾಮರಾಜ್ಯವು ನಮ್ಮೊಳಗೇ ಇದೇ ಒಂದು ಸಲ,👥
ದ್ವೇಶಾಸೂಯೆ ತೋರೆದು ನೋಡಿ..!
✍️ BasuraajK-
ರಾಮರಾಮ ಜಯರಾಮ ಸುಗುಣಧಾಮ
ನಿನ್ನ ಚರಣ ಶ್ರೀರಕ್ಷೆಯಮಗೆ ನೀ ಪರಂಧಾಮ
ಮಾತು ತಪ್ಪದ ಮಗ ರಘುಕುಲ ಸೋಮ
ನಿನ್ನ ಆದರ್ಶ ಸರ್ವಕಾಲಿಕ ನಿನ್ನ ಜಪ ನಿತ್ಯ ನೇಮ
ಕರುಣಿಸು ನಮ್ಮನು ಅನವರತ ಓಪರಂನಿಯಾಮ(ಕ)
-