ನೀ ನನ್ನ ಪ್ರೇಮ ಕಾಶ್ಮೀರ
ನಾ ನಿನ್ನ ಹೃದಯದ ಚೋರ
ಸುತ್ತೋಣ ಬಾ ಇಂಡಿಯಾ ಪೂರಾ
ನಮ್ಮ ಮನೆ ಮೈಸೂರು ನೋಡ-
ಯಾರ್ ಸೂರಲ್ಲಿ ಎಷ್ಟೋತ್ತೆ ಇದ್ರು
ನಮ್ ಸೂರೆ ನಮಿಗ್ ಚೆಂದ.!
ಗೋಯಿಂಗ್ ಟು ಮೈ-ಸೂರು..-
ಮಂಡ್ಯದ ಬೆಲ್ಲ ಸಕ್ಕರೆಯೂ
ಎತ್ತ ನೋಡಿದರೂ ನಾಡಿನೆಡೆ
ಸಿಹಿಯಾದ ಕಂಪು ಸೂಸುತಿರಲು
ಅಕ್ಕರೆಯ ಸಕ್ಕರೆಯ ನಾಡಿನಲಿ
ಒರಟು ಭಾಷೆಯ ಮೃದು
ಸ್ವಾಭಾವವು ಮೆರೆಯುತಿಹುದು
ಕನ್ನಡಾಂಬೆಯ ಅಕ್ಕ ಪಕ್ಕದಿ
ಕಬ್ಬು ಜಲ್ಲೆಯ ಝೇಂಕಾರವೂ
ಮೊಳುಗುತಿಹುದು ಓಂಕಾರದಿ!-
ಒಲವಿಂದ ಮನ ಅಲಂಕರಿಸಿ ಬಾ
ಜಗಮಿಗಿಸುವಂತೆ
ಸಿಂಗಾರಿಸಿಕೊಂಡಿರುವ
ಹೊಂಬೆಳಕಲಿ ಮಿನುಗುವ
ಮೈಸೂರನೊಮ್ಮೆ ಸುತ್ತಿ ಬರೋಣ..-
ನಮ್ಮ ಹೆಮ್ಮೆಯ ಮೈಸೂರು ಇಡೀ ಭಾರತದಲ್ಲೇ ಸ್ವಚ್ಛವಾದ ನಗರದಲ್ಲಿ 3ನೇ ಸ್ಥಾನಕ್ಕೇರಿದೆ..😍❤❤
-
ನಿನ್ನ ಮುಖದಲ್ಲಿ ಒಂದು ಇಲ್ಲ ಸಿಂಪಲ್ಲಾಗಿ ಪಿಂಪಲ್
ನನಗನ್ನಿಸುತ್ತೆ ನೀ ಬಳಸೋ ಸೋಪ್ ಮೈಸೂರ್ ಸ್ಯಾಂಡಲ್;-
ಸಾಂಸ್ಕೃತಿಕ ನಗರಿಯ
ಸಡಗರವೇ ಜೋರು,
ನಗರವಾದರೂ ತನ್ನ
ಮೂಲ ಆಶಯವನ್ನು
ಬಿಟ್ಟು ಕೊಡದೇ
ಮುದವ ನೀಡೋ ಸಡಗರ.-
ತಾಯಿ ಚಾಮುಂಡಿ
ಏನೆಂದು ಕೇಳಲಿ ನಿನ್ನ,
ಸಕಲ ಸಂಪತ್ತನ್ನು
ಕೇಳದೇ ನೀಡಿರುವೆ,
ಮತ್ತೆ ಕೇಳಲು
ಆಸೆಯ ಪರಮಾವಧಿ ಆದೀತು,
ನಿತ್ಯ ನಿನ್ನ ನಾಮಸ್ಮರಣೆ ಆಗಲಿ
ನಿನ್ನಾಶೀರ್ವಾದದೀ ಸಾಹಿತ್ಯ ಕೃಷಿಯಾಗಲಿ,
ಆಸೆಯ ಕಂಗಳಿಂದ ಕೇಳುವೆ
ಕೋಪಿಸದಿರು ತಾಯಿ,
ಆರೋಗ್ಯ ಭಾಗ್ಯವ ಕರುಣಿಸು ಎಲ್ಲರಿಗೂ
ಹಸಿವಿನ ನೋವು ಬಾರದಿರಲಿ
ಎಲ್ಲರೂ ನೆಮ್ಮದಿ, ಸಮೃದ್ಧಿಯಿಂದಿರಲಿ,
ಈ ಬಿನ್ನಹ ನಿನ್ನ ಪದತಲದಲ್ಲಿ
ಈ ಬರಹವೂ ನಿನ್ನ ಸಮ್ಮುಖದಲ್ಲಿ.-
ಪ್ರತಿಯೊಬ್ಬರ ಬದುಕು ಒಂಥಾರ ರೈಲು ಬಂಡಿ ಇದ್ದಂಗೆ,
ಎಲ್ರೊಳಗೂ ನೂರಾರ್ ಜನ ಬರ್ತಾರೆ,
ನಮ್ಮ ಸುಖ ದುಃಖದ ಪಯಣದಲ್ಲಿ ಭಾಗಿಯಾಗ್ತಾರೆ.
ನಿಲ್ದಾಣ ಬಂದಾಗ ನಿಲ್ಲೇ ಬೇಕು,
ಹಾಗೆ ಎಂದಿಗೂ ನಿರಂತರವಾಗಿ ಹಳಿ ಮೇಲ್ ಸಾಗೋದನ್ನ ಮಾತ್ರ ನಿಲ್ಸ್ಬಾರ್ದು.-