ಎತ್ತ ನಡೆದೆ ಮುರಾರಿ
ಮತ್ತೆ ಬರುವೆನೆಂದು ನುಡಿದು
ಧರೆಯತ್ತ ನೋಡು ಗಿರಿಧಾರಿ
ಇನ್ನೊಂದು ಜನ್ಮವ ತಳೆದು
ನೀ ಮೆಚ್ಚಿದ ಬೃಂದಾವನವಿಲ್ಲ
ಮನುಜನ ವಿಕೃತಿಗೆ ಉರಿದು
ತಾನು ತನ್ನದೆಂಬುದೇ ಎಲ್ಲ
ಅರಿಷಡ್ವರ್ಗಗಳು ಮೆರೆದು
ಸ್ಪರ್ಶಿಸೊಮ್ಮೆ ಪಾದಾರವಿಂದವ
ಅರಳಲಿ ಮುದುಡಿದ ಭೂಮಿ
ಕೇಳುವಾಸೆ ಮುರುಳಿಯ ಕಲರವ
ದಯೆ ತೋರು ಒಮ್ಮೆ ಸ್ವಾಮಿ-
ನನ್ನೊಳಿರುವ
ಈ ಆತ್ಮನಿಗೇನು ಬೇಕು??
ಪರಮಾತ್ಮ ಬೇಕು,
ಪರಮಾತ್ಮನಲ್ಲೈಕ್ಯವಾಗಲು
ಏನು ಬೇಕು??
ಭಕ್ತಿ ಬೇಕು,
ಭಕ್ತಿಯೇನೆಂದರಿಯದ
ಈ ಹಾಳು ಮನಕ್ಕೇನು ಬೇಕು??
ಮುಕುತಿ ಪಥವ ತೋರುವ
ಮುರಾರಿಯ ಸಂಗ ಬೇಕು...-
ಯಾರಿಲ್ಲ ಶರಣಾರ್ಥಿ ಪ್ರೀತಿಗೆ
ಶ್ರೀ ಕೃಷ್ಣನ ಕೊಳಲ ನಾದಕ್ಕೆ
ರಾಧೆಯ ಮನದಲ್ಲಿ ಚಿಗುರಿತು
ಪ್ರೇಮ ಪ್ರೇಮ ಪ್ರೇಮ...
ಕ್ರೋಧ ಬೇಡ ಭಯ ಬೇಡ
ಎನ್ನುತ್ತಾ ತನ್ನ ಮಾತಲ್ಲೇ ಮೋಡಿ
ಮಾಡಿದ ಗೋಪಿ ಲೋಲ...
ನಂದನವನದಲ್ಲಿ ಹೂತೋಟಗಳ
ನಡುವೆ ಮೈ ಮರೆತು ನುಡಿಸುವ
ಕೊಳಲ ನಾದಕ್ಕೆ ಎಲ್ಲರೂ ಮೈ
ಮರೆಯುವಂತೆ ಮಾಡಿದ ಮುರಾರಿ
ಎಲ್ಲರ ಮನಸಲ್ಲಿ ಅಚ್ಚೋತ್ತಿಹನು...
ರಾಧಾ ಕೃಷ್ಣನ ಪ್ರೇಮವೇ
ಪ್ರೀತಿಯಲ್ಲಿ ನಂಬಿಕೆಗೆ
ಕೊಂಡಿಯಾಗಿದೆ...!!
-
ಭುಗಿಲೆದ್ದ ಮನಕೆ ಯಾವುದು ಸರಿ ದಾರಿ
ಕಾಯ್ವನೆ ಎಲ್ಲಾ ಬಲ್ಲ ಮುರಾರಿ
ಅರಿಷಡ್ವರ್ಗಳ ಅಡಿಯಾಳಾಗಿಹೆನು
ಒಳಿತೇನೆಂದು ಕಾಣದೆ ಕುರುಡಾಗಿಹೆನು
ಕಾಣಿಸದೇಕೋ ನೇರ ದಾರಿ
ಧ್ಯಾನಿಸಲಷ್ಟೆ ಅರಿತಿಹೆನು ಬೇಡಲಷ್ಟೆ ಶಕ್ತನಾಗಿರುವೆನು
ಗುರಿಯೆಡೆಗೆ ಕರೆದೊಯ್ಯಲು
ನಿನ್ನ ನಾಮವೊಂದೇ ಸಾಕಯ್ಯ
ಅಚಲ ನಂಬಿಕೆಯೊಂದೇ ಎನ್ನಯ ಭಕ್ತಿಯಾಗಿಹುದು
ಬಣ್ಣವಳಿದ ಒಡಲಿಗೆ ಚೇತನ ನೀನಯ್ಯ ಶ್ರೀಹರಿ-
ಸುಳ್ಳು ನಗುತ್ತಿರುವಾಗ
ಸತ್ಯ ಅಳುತ್ತಿರಬಹುದು,
ಆದರೆ ಸತ್ಯ ನಕ್ಕಾಗ
ಸುಳ್ಳೆ ಸತ್ತು ಹೋಗಿರುತ್ತದೆ.
🌺ಶ್ರೀ ಕೃಷ್ಣ 🌼-
ಜಗದ ಮಾಯೆಯ ಬಿಡಿಸಿ
ಒಳಗಿನ ಅನಂತ ಪ್ರೀತಿಯ
ಜಾಗೃತಗೊಳಿಸೋ
ಕಲೆಗಾರ..
ರಾಧೆಯ ಮೋಹನ
ಮುರಳಿ ಮನೋಹರ..
ಸತ್ಯ ಅಸತ್ಯದ
ಮಿಥ್ಯಗಳ ಸಣ್ಣ ಎಳೆಯ
ಬಿಡಿಸಿ ಆತ್ಮ ಪರಮಾತ್ಮನಲ್ಲಿ
ಲೀನವಾಗೋ ಕಲೆಯ
ಹೇಳಿಕೊಟ್ಟ ನಂದಗೋಪಾಲ..
ಚಂದದಿ ಕೊಳನೂದಿ
ಸಖಿಯರ ಪರವಶಗೊಳಿಸೋ
ಅಂದಗಾರ ಈ ಶ್ಯಾಮಸುಂದರ 😍😍-
ಮುಗುಳ್ನನಗೆಯ ಚೆಲ್ಲಿ
ಹಾಲ್ಗೆನ್ನೆಯ ಅರಳಿಸಿ
ನಿಂತಿರುವೆಯಲ್ಲ ಗೆಳತಿ
ಮುಟ್ಟದೆ ದೃಷ್ಟಿ
ಬೊಟ್ಟು ಇಡಲೇ.....-
ಸಮಯ ಅನ್ನುವುದು ಅಮೂಲ್ಯ
ಭೂತಕಾಲ ವರ್ತಮಾನಕಾಲ
ಭವಿಷ್ಯತ್ ಕಾಲದ ಚಿಂತನೆಯ
ಸಮರ.. !
ಭೂತಕಾಲ ಮತ್ತು ಭವಿಷ್ಯತ್ ಕಾಲದ
ಚಿಂತೆ ಬಿಟ್ಟು ವರ್ತಮಾನದ ಜೊತೆ
ಸಾಗೋಣ.. !!-
"ಶ್ರೀ ಹರಿ "
ಬಾರವಾಗಿದೆ ಮನವೂ
ಏನೆಂದು ತಿಳಿಯದೆ
ನಿನ್ನ ದಯೆಮೇಲೆಯೇ ಎನ್ನ ಜೀವ
ಮುನ್ನಡೆಸು ಶ್ರೀ ಗುರುವೆ ಕೇಶವ,,,,,-