shwe bailu   (@ ಶ್ವೇತಾ ಬುನ್ನನ್)
163 Followers · 50 Following

read more
Joined 9 April 2020


read more
Joined 9 April 2020
31 MAY AT 11:32

ನೀನು ನನ್ನ ಜೊತೆಗೆ ಹೇಗಿರಬೇಕಂದರೆ ನಿನ್ನ ಕೈಯಲ್ಲಿ ಇರುವ ಮೊಬೈಲ್ ಹೇಗೆ ನಿನ್ನ ಜೊತೆ ಇದ್ದು ನೀ ಅದನ್ನು ಬಿಡದ ಹಾಗೆ... ಒಂದು ಕ್ಷಣ ಯೋಚಿಸು ನೀನು ಮುಂಜಾನೆ ಎದ್ದು ರಾತ್ರಿ ಮಲಗುವ ತನಕ ಅದು ನಿನ್ನ ಜೊತೆಗೆ ಇದ್ದು ಅದನ್ನು ಬಿಟ್ಟಿರಲು ನಿನ್ನಿಂದ ಸಾಧ್ಯವಿಲ್ಲ ಅಲ್ಲವಾ... ಅದನ್ನು ಹಚ್ಚಿಕೊಂಡಸ್ಟು ನಿನ್ನ ಬಳಿ ಬೇರಾವುದು ಇಲ್ಲ ... ಯೋಚಿಸಿ ನೋಡು ಒಮ್ಮೆ...

-


26 MAY AT 0:52

ನೋಡುವೆ ಒಂದು ದಿನ ಗೋಡೆಯಲ್ಲಿ ನೇತಾಡುವ ಅವಳ ಫೋಟೋ
ಇಂದು ನಿನ್ನ ಹತ್ತಿರವಿದ್ದು ದೂರ ಇಟ್ಟ ನೀನು ಮುಂದೊಂದು ದಿನ ಬೇಕಿತ್ತು ನನಗವಳು ಅನಿಸುವಾಗ ಅವಳು ಅದೆಷ್ಟೊ ದೂರ ಸಾಗಿ ಮರೆ ಮಾಚಿರಬಹುದು.....

ಇಂದು ಕಿಂಚಿತ್ತೂ ಪ್ರೀತಿ ಕೊಡದವನು ಮುಂದೊಂದು ದಿನ ಅವಳ ತಬ್ಬಿ ಮಡಿಲಲ್ಲಿ ಮಲಗಿಸಲು ಆಸೆ ಪಟ್ಟರೆ ಅವಳ ನೆನಪೇ ಆಸರೆ ಅಗಬಹುದೇನೋ...
ಪಕ್ಕದಲ್ಲಿ ಕೂತು ಅವಳ ತಲೆ ಸವರಿ ಹಣೆಗೊಂದು ಮುತ್ತ ನೀಡಿದರೆ ಕರಗಿ ನಿರಾಗುವ ಅವಳು
ನಿನ್ನ ಸನಿಹ ಬಯಸಿ ಹೃದಯ ಕಲ್ಲಾಗಿ ಉಸಿರೇ ನಿಂತರೆ...
ಯಾರು ಮಾಡುವರು ನಿನಗೆ ಕೀಟಲೆ, ಯಾರು ತೋರುವರು ಅವಳಷ್ಟು ಕಾಳಜಿ, ಪ್ರೀತಿ, ಅವಳ ತುಂಟಾಟವನ್ನು ನಿಲ್ಲಿಸಿ ಅದೆಷ್ಟೊ ಸಮಯ ಆಗಿರಬಹುದು ಅಲ್ಲವೇ...

ಮರೆತು ಬಿಟ್ಟೆ ನೀನು ಅವಳ ಸಂಗಡ, ಯಾರೋ ಏನೋ ಆಗಿಹಳು...ಅವಳು ಇದ್ದರು ಇಲ್ಲದಿದ್ದರೂ ಏನೂ ವ್ಯತ್ಯಾಸವಿಲ್ಲ ಇಂದು ನಿನಗೆ.... ಅವಳ ಜೊತೆ ಯಾವಾಗ ಇದ್ದೆ , ಅವಳ ದುಖ ಯಾವಾಗ ಅರಿತೆ... ಭಾವನೆ ಕಲ್ಲಾಗಿ ಇನ್ನು ನನಗೆ ಸಿಕ್ಕಿದ್ದೇ ಇಷ್ಟು ಅಂತ ಯಾವುದನ್ನು ಹೇಳದೆ ಕಣ್ಣೀರಿಟ್ಟ ಹೆಣ್ಣಿಗೆ ಸಿಗುವುದೇ ಸಂತಸದ ಕ್ಷಣ ಅತವಾ ಮರಣವೇ ಉತ್ತರ.....

-


23 MAY AT 13:32

ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಮೇಲೆ ಬಂದು ಕುಶಿಯಲ್ಲಿ ಇರಬೇಕಾದ ಹೊತ್ತಲ್ಲಿ ಮತ್ತೆ ತಲೆ ಮೇಲೆ ಕಲ್ಲು ಬಿದ್ದು ಒಡೆದು ಹೋಗುವ ಸಂದರ್ಭ ತನ್ನನ್ನೇ ತಾನು ಕುಗ್ಗಿಸಿದಂತಾಗಿ ಮತ್ತೆ ಇನ್ನೇನು ಎಂಬ ಸಾವಿರ ಚಿಂತೆ ಕೂರಿಬಿಟ್ಟಿದೆ ಅಂತರಾಳದಲ್ಲಿ....

-


20 MAY AT 21:31

ಸಾಧಿಸುವ ಛಲವು ನಿನ್ನೊಳು ಇದ್ದರೆ ಜೀವನ ವಿಧಾನ ಬದಲಿಸಿ ನೋಡು
ನೋವು ನಲಿವಿನ ಅಂತರದಲಿ ಬದುಕೇ ನಶ್ವರ ಆಗದಿರಲಿ
ನಿನ್ನೊಳು ನೀನಾಗಿ ಇತರರಿಗೆ ಒಲವಾಗಿ ಸಾಗಾಲಿ ಬದುಕ ಪಯಣ

-


26 DEC 2023 AT 10:50

ನಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ತಲೆಕೆಡಿಸಿಕೊಂಡು ಇಂದಿನ ದಿನದ ಮಹತ್ವವನ್ನೇ ಮರೆತುಬಿಡುತ್ತೇವೆ. ಬದುಕು ಎಷ್ಟು ದಿನ? ಜೀವನ ಶಾಶ್ವತವೇ? ಶಾಶ್ವತ ಅಲ್ಲದ ಜೀವನದಲ್ಲಿ ಅದೆಷ್ಟು ಕನಸುಗಳು, ಆಸೆಗಳು, ನಿರೀಕ್ಷೆಗಳು. ಮನೆ, ಕಾರು, ಬಂಗಾರ, ಇವೆಲ್ಲವೂ ಇವತ್ತು ನಮ್ಮದಾಗಿದ್ದರೂ ಮುಂದೊಂದು ದಿನ ಅದು ಇನ್ನೊಬ್ಬರ ಸೊತ್ತು. ಬದುಕು ಕ್ಷಣಿಕ ಎಂದು ಅರಿತರೂ ನಮ್ಮ ಕನಸು ನನಸಾಗಲಿ ಎನ್ನುವ ಆಸೆಗೆ ಬಲಿಯಾಗಿ ಇಂದಿನ ದಿನದ ಸುಖವನ್ನ ದಾರೆ ಎರೆದು ಬಿಡುತ್ತೇವೆ. ನೂರು ವರುಷ ಬದುಕಿದರೂ ಮುಂದೊಂದು ದಿನ ನಮ್ಮ ಫೋಟೋ ನೇತು ಬೀಳುವ ಸಮಯ ಬಂದೆ ಬರುವುದು. ಆದರೂ ಬದುಕು,ಜೀವನ ಒಂದು ಚದುರಂಗದ ಆಟ 🙏

-


25 DEC 2023 AT 13:28

ಹೆಂಡತಿ ತಾಯಿ ತಂದೆ ಗಂಡನಿಗೆ ಸಹ ಸ್ವಂತದವರು
ಯಾವಾಗ್ಲೋ ಒಮ್ಮೆ ಬಂದು ನೋಡಿಕೊಂಡು ಹೋಗುವಾಗ ಅವರಿಗೂ ಸ್ವಲ್ಪ ಪ್ರೀತಿ ತೋರಿಸಿದರೆ
ಹೆಂಡತಿಗೂ ಗಂಡನ ಮೇಲಿನ ಗೌರವ ಇನ್ನೂ ಹೆಚ್ಚಾಗುವುದು....ಹೆಂಡತಿಗೆ ತನ್ನ ತಂದೆ ತಾಯಿಯನ್ನು ಖುಷಿಯಾಗಿ ಇಡಬೇಕೆನ್ನುವ ಆಸೆ ಇರುತ್ತದೆ. ಅದೇ ಅವಳಿಗೆ ನೋಡೋಕೆ ಆಗದೆ ಹೋದಾಗ ಆಗುವ ನೋವು ಬದುಕಿದ್ದು ಸತ್ತ ಹೆಣದ ಹಾಗೆ

-


8 DEC 2023 AT 19:03


ಎಲ್ಲವೂ ತಿಳಿದಿದೆಯೆಂದು ತೋರಿಸುವ ದರ್ಪ
ಅಹಂಕಾರದ ಮಾತಲ್ಲಿ ತಿಳಿಯುವುದು ನಿನ್ನ ವ್ಯಕ್ತಿತ್ವ
ಬೇರೆಯವರ ಬಗ್ಗೆ ಕೊಂಕು ಮಾತಾಡಿ ಹೊಲಸ ತೋರಿಸಿ
ನಾಟಕದ ಬದುಕಲ್ಲಿ ಜೀವನ ಸಾಗುತ್ತಿದ್ದರೂ
ತಿಳಿದಿಲ್ಲ ನಿನಗೆ ಯಾರ ಜೀವನವು ಶಾಶ್ವತವಲ್ಲವೆಂದು

-


7 DEC 2023 AT 17:51

ನನ್ನ ನಗುವಿಗೆ ಕಾರಣ ನೀನೆ
ನನ್ನ ಮನಸ ಬಲ್ಲವನು ನೀನೆ
ಏನು ಹೇಳಲಿ ನಾ ನಿನ್ನಲ್ಲಿ
ನಿನ್ನ ನೆನಪಲ್ಲಿ ಕಾದಿರುವೆ ನ

ಮುಗಿಯದ ಮಾತು ಮಾತಲೇ ಬೆರೆತು
ಸಾಗಿದೆ ಜೀವನ ಎಲ್ಲವ ಮರೆತು
ನೂರಾರು ನೆಪವೊಡ್ಡಿ ಮಾತು ಮುಗಿಯದು
ಮಾತು ನಿಂತರೆ ಜಗವೆಲ್ಲ ಮೌನಿ


-


7 DEC 2023 AT 10:18

ಆಕಸ್ಮಿಕ ಭೇಟಿ ಹೇಳಲಾರದ ಅನುಭವ
ಸಮಯದ ಅರಿವಿಲ್ಲದೆ ಮಾತಿನ ಸುರಿಮಳೆ
ಪೂರ್ವ ಜನ್ಮದ ಋಣವೊ ತಿಳಿಯದು
ಪುನರ್ಜನ್ಮ ಸಿಕ್ಕರೆ ಹೀಗೆ ಇರಲಿ ಬಂಧನ

-


1 DEC 2023 AT 8:41

ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳು ಇದ್ದರೂ ಭರವಸೆಯ ನಂಬಿಕೆಯ ಹಾದಿಯಲ್ಲಿ ಸಾಗಬೇಕು
ಯಾರಿರದಿದ್ದರು ಭಗವಂತನ ಕ್ರಪೆಯಿದೆ ಎನ್ನುವ ನಂಬಿಕೆ ನಮ್ಮದಾಗಿರಬೇಕು

-


Fetching shwe bailu Quotes