ಬಾಗುತ ನಡೆದಿಹನು ರೈತ, ಎತ್ತ ನೋಡಿದರತ್ತ
ಮಣ್ಣು ಹದವಾಗಿ, ಬೇಳೆಯು ಹುಲುಸಾಗಿ
ಬೇಳೆದ ಭತ್ತ,,,,,,,,,,
ಅವನಿಂದಲೆ ನಮಗೆ ತಾಯಿಯ ಕೈ ತುತ್ತ
ಬಾ ಕಂದ ಬೇಳೆಸುವೆ ನಿನ್ನ ಜೀವನ ಸಾಧನೆಯತ್ತ
ಎನ್ನುವ ,,,,,ತಮ್ಮ ಬೆವರು ಸುರಿಸಿ ನಮ್ಮ ಹಸಿವು
ತಣಿಸುವ ನಮ್ಮ ರೈತರಿಗೆ ನಾನು ಶರಣಾಗತ.
-
ನೀ ಹೋದ ಹಾದಿಗೇ, ಜೊತೆ ನಾನು.
ನೀ ಸಾಗಿದ ಕೇದಿಗೆ, ಕಥೆ ನಾನು .
ಜೊತೆ ಇರದ ಕಥೆಯಲಿ ಕಾಲ್ಗೆಜ್ಜೆಯ ಸದ್ದು ,
ಏನೇನೋ ಬರೆದೆ, ನೀ ನನ್ನ ಮುದ್ದು .
ಬಯಸುತ್ತಿರುವೆ ನಿನ್ನೊಲವ,
ಬಂದು ಸೇರುನ್ನ ಒಲವೇ .-
ಛಲದ ಸಾಧನೆ
ಹಂಬಲಿಸಿದೆ ಮನವು ನಿನ್ನೆಡೆಗೆ
ಬಂದೇ ಬರುವೆ ನಿನ್ನೆಡೆಗೆ
ನನ್ನೆಲ್ಲ ಪ್ರಯತ್ನವನ್ನು ಮಿರಿ
ಗೆದ್ದೆ ಗೆಲ್ಲುವೆ ನಿನ್ನನ್ನು ಸೆರಲು
ಆಲೋಚನೆಗೆ ಮಿತಿಯಿಲ್ಲ
ಸಾಧನೆಗೆ ಕೊನೆಯಲ್ಲಿ-
ನೆನಪಿದೆಯೇ ನೆನಪೊಂದು
ಸಿಹಿಯಾದ ತುಟಿಯಂಚಿನ ನಗುವೊಂದು
ಉಸಿರು ಉಸಿರಿಗೆ ತಾಗಿದ ಕ್ಷಣವೊಂದು
ಮರೆತರು ಮರೆಯದ ನೆನಪೊಂದು
ಬಿಗಿದಪ್ಪಿದ ಅಪ್ಪುಗೆಯ ಕ್ಷಣವೊಂದು
ಆಶಿಸುವೆ ಬಾ ನನ್ನ ಒಲವೇ ,,
ನಾಳೆ ಕಳೆಯುವ ಮುನ್ನ,,-
ಕ್ಷಣದ ಮಾತು
ಹಸಿದರು ಹಸಿವಿಲ್ಲದ ಹಾಗಿರು
ನಿನ್ನವರ ಖುಷಿಗೆ
ತುತ್ತೊಂದಿದ್ದರು ನಟಿಸು
ಅವರ ಖುಷಿಗೊಂದು ಮಾತು
ಸುಳ್ಳಲ್ಲ ನೋವಿನ ಖುಷಿ,-
ಮನಸು ಪರಿಶುದ್ಧವಾದಾಗ ,
ಅದೇ ಗುರುವಾಗಿ ಮುಂದೆ ನಿಂತು
ಎಲ್ಲವನ್ನೂ ಭೋದಿಸುತ್ತದೆ-
ಗುರುವೆಂಬ ಪಾದಕ್ಕೆ
ತಲೆ ಬಾಗಿ ನಮಿಸುವೆ
ದಯತೋರು ಗುರುವೇ
ಹರಸೆನ್ನ ಪ್ರಭುವೇ,
-
ಗುರುವೆಂಬ ಪಾದಕ್ಕೆ
ತಲೆ ಬಾಗಿ ನಮಿಸುವೆ
ದಯತೋರು ಗುರುವೇ
ಹರಸೆನ್ನ ಪ್ರಭುವೇ,
ಸಮಸ್ತ ಗುರುವೃಂದಕ್ಕೆಗುರುಪೂರ್ಣಮಿಯ ಶುಭಾಶಯಗಳು 🙏-
ಕಂಬನಿಯು ಕಣ್ಣಾಲೆಗೆ ಜಾರಿ
ಕೆನ್ನೆ ಕಚ್ಚಿದಾಗ..........
ಮನಸ್ಸು ಹಗುರಾಗಲು
ತುಂಬಿತು ಒಡಲು
ಇರದಿದ್ದರೆ ದುಃಖದ ಬರಡು...
ಒಬ್ಬನೇ ಕೂತು ಆಲಿಸುವಾಸೆ
ಯಾರಿಲ್ಲದಾಯಿತೆ ಎನ್ನಲು ಜೀವ
ತುಂಬಿತು ಮತ್ತೆ ಕಂಬನಿ ಕಣ್ಣಿಂದ ಜಾರಲು.. ಅರಿತವರಾರು ತಿಳಿಯದಾಯಿತೆ......-
ನಗುವಿನಲಿ ನಗುವಾಗ ನಗುವೇ
ನೀ ನನ್ನ ಮನದ ಸುಖದ ಹೋನಲೇ
ಸುಖದುಃಖದ ದಾರಿಯಲ್ಲಿ ಸಹಪಾಠಿಯೇ
ನೀ ನನ್ನ ಹೃದಯದ ಹೊನ್ನಸೆಲೆ.
-