ಬದುಕೊಂಥರಾ ಭಾವಗೀತೆ... ಕೇಳಿದಷ್ಟೂ ಕೇಳಬೇಕೆನಿಸೋ ಹಾಗೆ ಬದುಕಿದಷ್ಟೂ ಬದುಕಬೇಕೆನಿಸುತ್ತೆ...
-
ಅಪ್ಪ,
ಸುಡುವ ಬಿಸಿಲಿಗೆ
ಕೊರೆವ ಚಳಿಗೆ
ಸುರಿದ ಮಳೆಯನ್ನೂ ಲೆಕ್ಕಿಸದೆ
ಸಂಸಾರವೆಂಬ ಕಡಲನ್ನು
ಅಂತಸ್ಥೈರ್ಯದಿ ದಡ ಸೇರಿಸೋ
ದೋಣಿಯ ನಾವಿಕನಂತೆ ನೀ....!
ಜೀವನದುದ್ದಕ್ಕೂ ಕಡು
ಕಷ್ಟಗಳನ್ನು ಸಹಿಸಿ
ತನ್ನವರಿಗೆಲ್ಲ ನಗುವೆಂಬ
ಸವಿಸಿಹಿಯ ಹಂಚಿದ
ಬದುಕೆಂಬ ಕಾದಂಬರಿಗೆ
ಮೂಕನಾಯಕನು ನೀ....!-
ಬಣ್ಣ ಹಚ್ಚಿದರೇನು.?
ಬಿನ್ನಾಣ ತೋರಿದರೇನು.?
ಬಾಳಲು ಬದುಕಲೆ ಬೇಕು
ಸಾರ್ಥಕತೆಗಾಗಿ ಒಂದು ಬಾರಿ
ಮತ್ತೊಮೆ ಸಿಗುವುದಿಲ್ಲ
ಜೀವನವು ಒಂದು ಸವಾರಿ.!-
ನಿಖರತೆಯಿಲ್ಲದ ನೋವಿಗೆ
ಮೌನವಾಗಿದೆ ಮನದ ನಿಕೇತನ
ನಿಗದಿಯಾಗದ ಭಾವಕೆ
ಕಣ್ಣೀರಿಡುತ್ತಿದೆ ಯೋಚನೆ
ಸೂಚನೆಯಿಲ್ಲದೆ ನೆಪವಾಗಿ
ನಿಮಂತ್ರಿಸುವ ನೆನಪಿನ
ವೇದನೆ ಕಟ್ಟುಪಾಡಿನ
ನಡುವೆ ಒಂಟಿಯಾಗಿದೆ
ಕನಸಿನ ಬಾಡಿಗೆ
ನಿರ್ಭಾಗ್ಯದ ಬಾಳಿಗೆ
ಅತಿಥಿಯಂತೆ ಕಡೆಗಣಿಸಿದ
ನಗುವಿನ ಪಾಲಿಗೆ
ಮುಖವಾಡದ ಜೀವನವ
ಉಪಚಾರಿಸಿದೆ ನಯನ...
✍Thilaka kulal
-
ಶವದ ಬಳಿ ಹೋಗಿ ಬಂದವರು
ಮೈಲಿಗೆಯೆಂದು ನೀರು ಸುರಿದುಕೊಂಬರು,
ಎಲ್ಲಾ ಕಡೆಯು ಸುತ್ತಿ ಬಂದು ಉಸಿರ
ಹೊಕ್ಕುವ ವಾಯುಗಾವ ಸೂತಕದ ಹಂಗಯ್ಯ
ಮಹಾದೇವ ।-
ಪ್ರಲಾಪಿಸುತಿಹ ವೇದನೆ
ಕವಲೊಡೆದಿದೆ ದಾರಿ ಕಾಣದೆ
ಅಂಗಲಾಚುತಿಹ ಭಾವನೆ
ಪರಿತ್ಯಾಗಿಸಿದೆ ಕನಸನ್ನೆ
ಮುಂದುವರಿಯುವ ಬದುಕ
ಕಟ್ಟಲಾಗದೆ ಕಣ್ಣೀರಲಿ
ಕೈ ತೊಳೆದು ನಗೆಪಾಟಲಿ
ಜೀವನದ ನಡೆಗೆ ಮಾರಾಟ
ಮಾಡಿದೆ ತನ್ನ ನಗೆಯನ್ನೇ
ದುಗುಡ ದುಮ್ಮಾನಗಳ
ಹೊತ್ತು ಸಾಗುತಿಹ ಬಾಳಿನ
ಬಾಗಿಲು ಹಸಿವಿನ ಬೇಗೆಗೆ
ಕ್ಷಣ ಕ್ಷಣಕ್ಕೂ ಸಾಯಿಸಿದೆ
ಬದುಕೊ ದಿನಗಳನ್ನೇ.......
✍Thilaka Kulal
-
ಅಳುತ್ತಿರುವ ಮನವ
ಕೆಣಕ ಬೇಡ ಒಲವೇ
ಒಂದೊಮ್ಮೆ ಅತ್ತು ಬಿಡಲಿ
ಭಾವನೆಗಳಿಂದಾಚೆ ಕೊನೆಗೆ
ಇರುಳ ಅಂಚಿನ
ಬದುಕಾ ಬೇಗೆಯಲಿ
ಸುಡುತ್ತಿರುವ ನೂರು ಕನಸ
ಮರೆಸುತ ಕಳೆದು ಬಿಡಲಿ
ಅರೆ ಘಳಿಗೆ ಸುಮ್ಮನೆ
ಸಾಗುತ್ತಿರುವ ಯೋಚನೆಯ
ಕಡಲ ಕರೆಗೆ ಓಗೊಟ್ಟು
ಮುಳುಗಿ ಮರೆಯಾಗಲಿ
ಬದುಕ ನಡಿಗೆ ಕಡಲ ಕಡೆಗೆ....
✍️ Thilaka kulal
-
"don't worry that this society does not understand you. instead you understand this society and learn to live "
"ಈ ಸಮಾಜ ನನ್ನನ್ನು ಅರ್ಥವೇ ಮಾಡಿಕೊಳ್ಳುತ್ತಿಲ್ಲ ಎಂದು ಕೊರಗವ ಬದಲು ನಾವೇ ಈ ಸಮಾಜವನ್ನು ಅರ್ಥ ಮಾಡಿಕೊಂಡು ಬಾಳುವುದನ್ನು ಕಲಿಯಬೇಕು"-
ಹತ್ತು ಕನಸುಗಳ ಹೊತ್ತ ನಗು ಅಳುತ್ತಾ ಹೇಳುತ್ತಿತ್ತು ನಿನ್ನ ಕಣ್ಣೀರಿನ ಪ್ರತಿ ಪುಟದಲ್ಲೂ ನನ್ನ ನಗುವಿದೆಯೆಂದು...
-