ಎಂತಹದೇ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ದಾಟಿ ಮುನ್ನುಗ್ಗುವ ಹುಮ್ಮಸ್ಸು ಹೆಚ್ಚಾಗಿರುತ್ತದೆ,
-
ನಮ್ಮ ಬಾಳಿನ ಕಷ್ಟ-ಸುಖಗಳ ಪ್ರಯತ್ನ ಸೋಲು-ಗೆಲುವಿನ ಪ್ರಯತ್ನ
ಬದುಕಿನ ಏರಿಳಿತಗಳ ಪ್ರಯತ್ನ
ಎಲ್ಲವೂ ಸದ್ದಿಲ್ಲದೆ ನಡೆದು ಹೋಗುತ್ತಿದೆ
ಆ ಪ್ರಯತ್ನಕ್ಕೆ ಫಲ ಸಿಗುವವರೆಗೆ
ನಮ್ಮ ಯತ್ನ
ಕೊನೆಗೆ ಗೆಲುವು
ಸಿಕ್ಕೇ ಸಿಗುವುದು
ಎಂಬ ನಂಬಿಕೆ ಇದ್ದೇ ಇದೆ.-
ಗರ್ಭ ಗುಡಿಯಿಂದ ಹೊರಬರುವ ಯೋಜನೆಯ ಯತ್ನ
ಗುಡಿಯಿಂದ ಮಡಿಲಿಗೆ ಇಳಿಯುವ ತವಕ
ಕೆಂಪು ಕೋಟೆಯ ಆಚೆಗಿನ ಪ್ರಪಂಚ ತಿಳಿಯುವ ಪುಳಕ
ಆಶ್ಚರ್ಯಯಾದ ಪ್ರಶ್ನೆಗಳಿಗೆಲ್ಲ ಆ ದೇಗುಲ ದೇವತೆಯ ಮಮತೆಯ ಮಾತಿನ ಚಳಕ
-
ಬದುಕಲ್ಲಿ ಪ್ರಯತ್ನ ಮುಖ್ಯ ಫಲ ಬಯಸುವುದು ಆನಂತರ ಒಂದು ವೇಳೆ ಪ್ರಯತ್ನಪಟ್ಟು ಸೋತರೆ ಅದಕ್ಕೆ ಚಿಂತಿಸುವ ಅಗತ್ಯವಿಲ್ಲ ಪ್ರಯತ್ನಪಟ್ಟು ಒಮ್ಮೆ ಸೋತರೂ ಇನ್ನೊಮ್ಮೆ ಗೆಲುವು ನಮ್ಮದಾಗಬಹುದು ಆದರೆ ಯಾವತ್ತೂ ಅಡ್ಡದಾರಿಯನ್ನು ಹಿಡಿದು ಪ್ರತಿಫಲವನ್ನು ಬಯಸಬಾರದು ಅದರಿಂದ ಸಿಕ್ಕಿದ ಗೆಲುವು ನಿಜವಾದ ಗೆಲುವಲ್ಲ......
-
ಬದುಕಿನ ಪಯಣ ದಿನಾಲು ಸಾಗುತ್ತಿರುವುದು ಪ್ರಯತ್ನಕ್ಕೆ ಎಂದೂ ತಡೆ ಇಲ್ಲ
ಪ್ರಯತ್ನ ಪಟ್ಟರೆ ಪ್ರತಿಫಲ ಸಿಕ್ಕೆ ಸಿಗುತ್ತದೆ
ಎಂಬ ಭರವಸೆ ಇದೆ
ಸೋಲಿರಲಿ ಗೆಲುವಿರಲಿ ಇರಲಿ
ಪ್ರಯತ್ನವನ್ನು ಕೈ ಬಿಟ್ಟಿಲ್ಲ.-
ಸಾವಿರಬಾರಿ ಸೋಲುಂಡರೂ
ಗೆಲುವಿನ ಪ್ರಯತ್ನ
ನೂರುಬಾರಿ ನೋವುಂಡರೂ
ನಗುವಿನ ಪ್ರಯತ್ನ
ಪ್ರತಿಬಾರಿ ಮೋಸಹೋದರೂ
ನಂಬುವ ಪ್ರಯತ್ನ
-✍🏻 ಪ್ರಿಯಾಂಕಾ ಬಿಳ್ಳೂರ.-
ಕೆಲವೊಮ್ಮೆ ಹೋಗುವ ದಾರಿ ಹಿಡಿಸದೇ ಇರಬಹುದು,
ಮಾಡುವ ಕಾರ್ಯ ಮನಸ್ಸಿಗೆ ಕಷ್ಟ ನೀಡಬಹುದು,
ನೋಡುವವರ ನೋಟಕ್ಕೂ ಬಲಿಯಾಗಬಹುದು,
ಆಡಿಕೊಳ್ಳುವವರ ಬಾಯಿಗೆ ಆಹಾರನೂ ಆಗಬಹುದು,
ಕೇಳುವವರಿಗೆ ಕಹಿ ಅನುಭವ ಉಂಟಾಗಬಹುದು,
ಆದರೇ ನೀವು ಮಾಡಿದ ಸಂಕಲ್ಪ ವಜ್ರದ ಹಾಗಿದ್ದರೆ,
ಇವುಗಳನ್ನೆಲ್ಲ ಭೇದಿಸಿ ಬೆಳಕು ನೀಡುವುದು.
"ಸತತ ಪ್ರಯತ್ನ, ಸಾಧಕನ ಮಂತ್ರ "-
ಬಣ್ಣ ಬಳಿದುಬಿಡು
ಸ್ವಂತಿಕೆಯ ರಂಗಿನಲಿ
ಕಾಯಬೇಡ, ಯಾರೂ ಬಂದು
ಅಲಂಕರಿಸಬಹುದೆಂದು
ನಿನ್ನ ಬದುಕು ನಿನ್ನದು!-
ಗುರಿ ತಲುಪುವವರೆಗೂ ಬಿಡುವುದಿಲ್ಲ
ಸಾಗುವದಾರಿಯಲ್ಲಿ ಕಲ್ಲು ಮುಳ್ಳಿದ್ದರು
ಹೆದರದೆ ಸಾಗುವ ಪ್ರಯತ್ನ ನನ್ನದು ಗುರು
-