ಲೋಕದ ಡೊಂಕು
ಮುಚ್ಚಲೊರಟವನ
ಆಂತರ್ಯಲೋಕವೆ
ಬರೀ ಮಂಕು.!
ಡೊಂಕು ಮಂಕುಗಳ ನಡುವೆ
ಸಿಲುಕಿ ನರಳುತಿಹುದು
ಅವನ ಮನಸ್ಸು
ಅಲ್ಲೆಲ್ಲಾ ಇರುವುದು
ಬರೀ ಕೊಂಕು.!-
ನಾಚಿ ನೀರಾಯಿತು
ಈ ವದನ
ಧುಮ್ಮಿಕ್ಕುವ
ಅವನೊಲವ
ಒಲವೋತ್ಸವದಲಿ
ಹರಿಯುವ
ಒಲವ ಸುಧೆಯ ಗಾನಕೆ.!
ಮಿಡಿಯುತ ನುಲಿದಿದೆ
ಮನದೊಡಲು
ಕದಪುಗಳ ನಾಚಿಕೆಯ
ಮರೆಮಾಚುತ
ಅಂಗೈಯೊಳಗೆ
ಅರಳುತಿಹುದು
ನಗುವಿನ ದಿವ್ಯ ನೋಟಕೆ.!-
ನೀ ನನ್ನ ಕೈ ಹಿಡಿದಾಗ ಚೂರು ಕೆಂಪಾದೆ, ಅದೇ ಕೈಗೆ ನೀ ಬಳೆ ತೊಡಿಸಿದಾಗ ನಾಚಿ ನೀರಾಗಿ ನಿನ್ನೆದೆಯಲ್ಲೆ ನಾ ಹುದುಗಿ ಹೋದೆ....
-
ಈ ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಿಕೆ ಪಡಬೇಡಿ,
1] ಹಳೇ ಬಟ್ಟೆ.
(ನೀ ಸತ್ತಾಗ ಈ ಬಟ್ಟೆ ಕೂಡ ಇರಲ್ಲ)
2] ಬಡ ಸ್ನೇಹಿತರು.
(ಎಂತಾ ಸಮಯದಲ್ಲಾದ್ರೂ ನಮ್ ಜೊತೆ ನಿಲ್ತಾರೆ(ಕೆಲವರು))
3] ವಯಸ್ಸಾದ ತಂದೆ, ತಾಯಿ.
(ನೀನ್ ಹೇಗಿದ್ರೂ, ಕಪ್ಪಗಿದ್ರು, ತೆಳ್ಳಗಿದ್ರು, ಎಷ್ಟು
ಅಸಹ್ಯವಾಗಿದ್ರೂ ನಿನ್ನ ಸಾಕಿ ಸಲಹಿರ್ತಾರೆ ನೆನಪಿರಲಿ)
4] ಸಾಧಾರಣ ಜೀವನ.
(ಹುಟ್ಟಿದಾಗ ಏನೂ ತಂದಿಲ್ಲ, ಹೋದಾಗ ಏನೂ ಹೊತ್ಕೊಂಡು
ಹೋಗಲ್ಲ ಅನ್ನೋದು ನೆನಪಿರಲಿ)-
ಸೋತು
ಹೋದೆ ನಲ್ಲೇ
ನಿನ್ನ ಈ
ಮುದ್ದಾದ ನಗುವಲ್ಲೇ
ಕನಸಲ್ಲು ಮನಸಲ್ಲು
ಕದ್ದೊಡುವೆಯಲ್ಲೇ
ಬರಬಾರದೆ ಒಮ್ಮೆ
ನನ್ನ ಕಣ್ಣೆದುರಲ್ಲೇ
ಬಂದು ನೆಲೆಸಿಬಿಡು
ಸೆರೆಯಾದ ನನ್ನ
ಮನದಲ್ಲೇ ಮನದಲ್ಲೇ..-
ನನ್ನಿಯನ ಒಲವಿನ ಹೊಸರಾಗ ತಂಗಾಳಿಯ ಹಿತದೊಂದಿಗೆ ಕಿವಿಯಲಿ ಪಿಸುಗುಡುತಿತ್ತು
ಅದ ಕೇಳಿಸಿಕೊಂಡ ನನ್ನೆದೆಯು ಢವಢವಗೊಳ್ಳುತಿತ್ತು..-
ಮಂಡೆ ಇದ್ದವರು ಉತ್ತರಿಸಿ ನೋಡಣ
IAS ಪ್ರಶ್ನೆ
1)ತಂಗಿಯೆನ್ನುತ್ತೇವೆ ರಾಖಿಕಟ್ಟಿಸಿಕೊಳ್ಳುವುದಿಲ್ಲ ಯಾರಿಂದ..?
2)ಹುಡಗರು ಹಾಗು ಹುಡುಗಿಯರು ಬಟ್ಟೆ ಬಿಚ್ಚಿ ಸಾಮಾನ್ಯವಾಗಿ ಏನು..ಮಾಡುತ್ತಾರೆ
ತಿಳಿಯುವ ಹಂಬಲವಿದ್ದರೆ ಕಮೆಂಟ್ ಲಿ ಕೊನೆಗೆ ಉತ್ತರಿಸುವೆ ತಿಳಿದರೆ ಉತ್ತರಿಸಿ
ದಿನ ಒಂದು ಕೋಟ್ಸ ಇನ್ಮುಂದೆ IAS ಪ್ರಶ್ನೆ.-
ಬರಿದಾದ ಮನದ
ಭಾವಕೆ,
ಬಳಿಯಲು ಬಣ್ಣವೇತಕೆ
ನಲ್ಲ..
ಕೆಂಪಾಗಿಸಲು
ನೀ ಹಿಡಿದಿರುವಾಗ,
ನನ್ನ ನಸು ನಾಚುತಿರುವ
ಗಲ್ಲ..-