QUOTES ON #ತಾಳ್ಮೆಯಪ್ರತೀಕ

#ತಾಳ್ಮೆಯಪ್ರತೀಕ quotes

Trending | Latest

ಹೆಣ್ಣೆಂದರೆ ತಾಳ್ಮೆಯ
ಸಹಕಾರ ಮೂರ್ತಿ
ತಾನು ಮದುವೆಯಾದ
ನಂತರ ಪ್ರತಿ ಹೆಣ್ಣಿಗೆ
ತನ್ನ ಗಂಡನೇ ಸರ್ವಸ್ವ,
ಅವನು ಎಷ್ಟೇ ಬೈದರೂ
ಕೋಪಿಷ್ಟನಾದರೂ,
ಅವಳು ಅವನನ್ನು
ಎಂದಿಗೂ ಕೈಬಿಡುವುದಿಲ್ಲ...
ತಾಳ್ಮೆಯಿಂದ ಸಂಸಾರ
ಬಂಡಿಯನ್ನು ಚೆನ್ನಾಗಿ
ನಡೆಸುತ್ತಾಳೆ ಹಾಗೂ
ಗಂಡನ ಕಷ್ಟ ಸುಖದಲ್ಲೂ,
ಅವನೊಂದಿಗೆ
ಪ್ರೀತಿಯಿಂದ ಸದಾ
ಜೊತೆಯಾಗಿರುತ್ತಾಳೆ.

-



ಕನಸುಗಳೆಲ್ಲ ಕೊಚ್ಚಿಹೋದರೂ ಭರವಸೆಯ ಕಿಚ್ಚು ಆರದಿರಲಿ..!
ಜೀವನವದು ನೋವ ನೀಡಿದರೂ ನಗುವೆಂಬ
ಮುಲಾಮಿನ ಆಸರೆಯದು ನಿನ್ ತಾಳ್ಮೆಯ ಪ್ರತಿರೂಪವಾಗಿ
ನಿನ್ನೆಡೆಗೆ ಮರಳುವುದು ನೆನಪಿರಲಿ ❤️

-



ಬಾಳ ಯಾನದಲ್ಲಿ ಅರಿವಿಲ್ಲದೆ ಹುಟ್ಟಿಕೊಳ್ಳುವ ಸಮಸ್ಯೆಗಳಿಗೆ
ಲೆಕ್ಕವೇ ಇಲ್ಲ ಕೊನೆಯೂ ಇಲ್ಲ..!
ಬಯಸಿದ ಭಾಗ್ಯವದೂ ನಮ್ಮದಾಗಬೇಕೆಂದರೆ ಬರುವ
ಅಡೆತಡೆಗಳನ್ನೆಲ್ಲ ಹಿಮ್ಮೆಟ್ಟಿಸಿ ಜೀವಿಸಿದೊಡೆ ಜೀವನಕೆ ಹೊಸ ಅರ್ಥವದು
ತಾನಾಗೇ ಹುಟ್ಟಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ 🌷🌷

-



ಸರಳತೆಯ ಸಾಹುಕಾರ
ಕಲಾತ್ಮಕತೆಯ ಕುಮಾರ
ಶಾಂತತೆಯ ಶೂರ
ಶಿಸ್ತಿನ ಸಿಪಾಯಿ
ಈ ಎಲ್ಲ ಆಸ್ತಿಯ ಅರಸನೆ ನಮ್ಮ
ಕರುನಾಡ ಕನ್ನಡಿಗ
ರಾಹುಲ್ ದ್ರಾವಿಡ್.

-



ದೀಪವದು ಉರಿಯಲು ಹೇಗೆ ಎಣ್ಣೆ ಹಾಗೂ ಬತ್ತಿಯ
ಆಸರೆಯದು ಅವಶ್ಯವೋ ಹಾಗೆಯೇ.,
ಮನುಷ್ಯನ ಕಾರ್ಯಸಾಧನೆಗೆ ತಾಳ್ಮೆಯ ಎಣ್ಣೆ ಪರಿಶ್ರಮದ ಬತ್ತಿಯದು ಆಸರೆಯಾದರೆ ಮಾತ್ರ ಸಾಧನೆಯ ದೀಪವದು ಪ್ರಜ್ವಲಿಸುವುದು 😍

-


12 JAN 2020 AT 9:34

ಕನ್ನಡ ನಾಡು ಇವರನ್ನು ಪಡೆದು ತುಂಬಾ ಮಹತ್ಕಾರ್ಯ ಮಾಡಿದೆ ಇವರು ಕ್ರೀಡಾ ಲೋಕಕ್ಕೆ
ಸೀಮಿತ ವಾಗದೆ ತಮ್ಮನ್ನು ತಾವು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಭಾರತ ಕ್ರಿಕೆಟ್ ಇವರು ಕೊಟ್ಟ ಉಡುಗೊರೆ ಅತ್ಯಮೂಲ್ಯ

-


28 JUL 2020 AT 20:04

ತಾಳ್ಮೆ,ಸಹನೆ,ಕರುಣೆ,ಮಮತೆಯ
ಪ್ರತೀಕ ಈ-"ನಾರಿಯರು"
ತನ್ನೊಳಗಿರುವ ಸಹನೆಯ
ಸೀಳಿ ಸಿಡಿದೆದ್ದರೆ-"ವಾರಿಯರು"





-


11 JAN 2020 AT 23:04

ಬೌಲರ್ಗಳಿಗೆ ಬಗೆಹರಿಯದ ಸವಾಲ್
ರಕ್ಷಣಾತ್ಮಕವಾಗಿ ಆಡುತಿದ್ರಿ ಬಾಲ್
ನೀವು ಟೀಮ್ ಇಂಡಿಯಾದ ಗೋಡೆ
ಅದಕೆ ನೆನಪಿಸುತ್ತಿರುವೆವು ನಿಮ್ಮ ಟುಡೇ

-



ನಾವು ಸುಮ್ಮನೆ ಇದ್ದರೂ ಕೆಲವರು ಪದೇಪದೇ ಕೆಣಕುತ್ತಲೇ ಇರುತ್ತಾರೆ . ಆದರೆ ಒಂದಲ್ಲ ಒಂದು ದಿನ ಆ ಮೌನದ ಹಿಂದೆ ಇರುವ ನಮ್ಮ ತಾಳ್ಮೆಗೆ ಅವರು ತಲೆಬಾಗುವುದಂತೂ ಖಂಡಿತ ....

-


11 JAN 2020 AT 23:44

ಬ್ಯಾಟಿಂಗ್ ಮಾಡುವುದರಲ್ಲಿ ಇವರಿಗಿರುವುದು ಜಾಣ್ಮೆ
ಇರುವುದು ಇವರಿಗೆ ಅಪರಿಮಿತ ತಾಳ್ಮೆ..
ಸೀದಾ ಸಾದಾ ಜೀವನ ಶೈಲಿ ನಡೆಸುವುದು ಇವರ ಹಿರಿಮೆ..
ಅದೆಷ್ಟು ಹೇಳಿದರು ಹೇಳತೀರದು ಇವರ ಗರಿಮೆ..
ದೇಶದ ಯುವಜನತೆಗೆ ಇವರೊಂಥರ ಆದರ್ಶ ವ್ಯಕ್ತಿಯ ಪ್ರತಿಮೆ....

-