ಸುಂದರ ಸ್ವಪ್ನಗಳನ್ನು ಆಗಾಗ ಕಾಣಬೇಕು
ಮನಸ್ಸು ನಿರಳವಾಗಬೇಕೆಂದಾಗಲೆಲ್ಲಾ
ಆ ಕನಸುಗಳನ್ನು ನೆನಪು ಮಾಡಿಕೊಳ್ಳಲು....
-
ಕೈಯಲ್ಲಿ ಪೆನ್ನು ಜೊತೆಯಲ್ಲಿ ಬಿಳಿಯ ಖಾಲಿ ಹಾಳೆಯಿದ್ದರೆ ಅದೇ ಸಾಕೆನಗೆ ತೋಚಿದ್ದು... read more
ನಗುವಿನ ಕೊಲೆಯಾಗಿದೆ ವದನದಲಿ..
ಕಣ್ಣೀರು ಜಾರದಂತೆ
ಅಡಗೋಡೆಯಾಗಿದೆ ಕಣ್ಣ ರೆಪ್ಪೆಗಳು
ಹೆಜ್ಜೆ ಮುಂದಡಿಯಿಡಲು ಅವಸರಿಸಿದರೂ
ಮನಸ್ಸು ತಡೆಯುತ್ತಿದೆ ಕಾಲುಗಳನ್ನು
ಮತ್ತೇನಾದರು ಚುಚ್ಚು ಮಾತುಗಳು
ಉಳಿದಿರಬಹುದೇನೋ
ಎಲ್ಲವನ್ನು ಕೇಳಿಸಿಕೊಳ್ಳಲು..............
-
ಒಬ್ಬೊಬ್ಬರದು ಒಂದೊಂದು ಮನಸ್ಥಿತಿ
ಮನಸ್ಥಿತಿಗೆ ತಕ್ಕಂತೆ ಬದಲಾಗುತ್ತಿದೆ
ಜನರ ಪರಿಸ್ಥಿತಿ
ಪರಿಸ್ಥಿತಿ ಮಿತಿಮೀರಿದರೆ ಊಹಿಸಲಾಗದು ಸ್ಥಿತಿಗತಿ
ಇದೆಲ್ಲಾ ಅತಿಯಾದರೆ ಬದುಕಿನ ಸ್ಥಿತಿ ಅದೋಗತಿ!-
ಮನುಷ್ಯ ಕೆಲವೊಂದು ಬಾರಿ ತನ್ನತನವನ್ನು ಹುಡುಕಾಡುವ ಭರದಲ್ಲಿ ತಾನೇ ಕಳೆದುಹೋಗುತ್ತಾನೆ.
-
ಹಲವು ಸಮಯವೇ ಬೇಕು
ಕೆಲವೊಂದು ಪಟನೆಗಳಿಂದ ಚೇತರಿಸಿಕೊಳ್ಳಲು
ಕೆಲವೇ ಕ್ಷಣಗಳು ಸಾಕು
ಕೇಳಿದ್ದನ್ನು ಅರಗಿಸಿಕೊಳ್ಳಲಾಗದೆ ಸಾವಿಗೆ
ಶರಣಾಗಲು...-
ಸುಳ್ಳಿನ ಜೊತೆ ಪ್ರತಿದಿನವೂ
ಕಳೆಯುವುದು ಕಷ್ಟದ ಸಂಗತಿ
ದುಷ್ಟಶಕ್ತಿ ಯಾವತ್ತಿದ್ದರೂ
ದೈವಶಕ್ತಿಯ ಎದುರು ಸೋಲಲೇಬೇಕು
ಅರ್ಥಮಾಡಿಕೊಂಡವರು ಸತ್ಯಕೆ ತಲೆಬಾಗಿ
ಸಾರ್ಥಕತೆ ಜೀವನ ನಡೆಸುತ್ತಾರೆ.
-
ನಿಮ್ಮನ್ನು ನೀವು ಪ್ರೀತಿಸಿ
ದೇವರಲ್ಲಿ ನಂಬಿಕೆಯಿಡಿ
ನಿಮ್ಮವರಿಗೆ ಸಮಯ ಕೊಡಿ
ಹಿರಿಯರನ್ನು ಗೌರವಿಸಿ
ಕಿರಿಯರನ್ನು ಪ್ರೀತಿಸಿ
ಸುತ್ತಮುತ್ತಲಿನವರ ಜೊತೆ ಸ್ನೇಹದಿಂದಿರಿ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ
ಸ್ನೇಹಿತರೊಂದಿಗೆ ನಿಷ್ಟೂರ ಮಾಡಿಕೊಳ್ಳದಿರಿ
ಭಿಕ್ಷುಕರಿಗೆ ಒಂದೊತ್ತು ಊಟ ನೀಡಿ...
ಒಂದು ವೇಳೆ ಇದು ಯಾವುದೂ ನಿಮಗೆ
ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಸುಮ್ಮನಿದ್ದುಬಿಡಿ.
ಅವರವರ ಭಾವನೆಗಳಿಗೆ ದಕ್ಕೆ ಬರದಂತೆ
ನಿಮ್ಮ ಪಾಡಿಗೆ ನೀವಿರಿ ಸಾಕು
ಹೀಗಿದ್ದರೆ ಬಹುಶಃ ಆ ದೇವರು
ಮೆಚ್ಚಿಕೊಳ್ಳಬಹುದು ನಿಮ್ಮನ್ನು...
ಶಮಂತಪ್ರಿಯ...
-
ಜೀವನದಲಿ ತಿರುವುಗಳು ಅನಿರೀಕ್ಷಿತ
ಬೇಕಿರುತ್ತದೆ ಬದುಕಲು ಹಣದ ಅವಶ್ಯಕತೆ
ತಿಳಿದಿಲ್ಲ ಯಾವುದು, ನಮಗೆ ಸುರಕ್ಷಿತ
ಮೋಸದಿಂದ ಬಳಸಿಕೊಳ್ಳುವರು
ನಮ್ಮ ಅಸಹಾಯಕತೆ ..
-
ಸಂದರ್ಭ ಉಪಯೋಗಿಸಿ ತನ್ನ ಕಾರ್ಯ
ಮಾತ್ರ ಸಾಧಿಸಿಕೊಳ್ಳುವವನು
ಜೀವನದಲ್ಲಿ ಎಂದೂ ಬರಲು ಸಾಧ್ಯವಿಲ್ಲ...
-
ಕೆಲವೊಮ್ಮೆ ಯಾರೋ, ನಡೆಯುವ ದಾರಿ
ನಮಗೆ ಸರಿ ಇಲ್ಲ ಅನಿಸಲೂಬಹುದು
ನೋಡುಗರಿಗೂ ಅದು ಸರಿ ಕಾಣದೇನೋ ಇರಬಹುದು
ಆದರೆ ಅದೇ ಸರಿಯಾಗಿರುತ್ತದೆ
ನಡೆವ ಹಾದಿಯಲಿರುವರಿಗೆ
ಕಾರಣ ಸಹಾಯಹಸ್ತ ನೋಡುಗರಿಂದಲೂ ಸಿಗದಿರುವಾಗ
ಜೀವನದ ಬಂಡಿ ಸಾಗಬೇಕಾಗಿರುತ್ತದೆ
ಅನಿವಾರ್ಯ ಪರಿಸ್ಥಿತಿಗಳಿಂದ....
-