ಅವ್ವನ ಮನೆ
-
ಕನಸುಗಳ ಹೆಬ್ಬಾಗಿಲಿನ ತನಕ ಬಂದು
ಮಂಜಿನಲ್ಲಿ ಕಾಣದಂತೆ ಎತ್ತ ಹೋಗುವೆ
ಅಲಂಕೃತ ಬಾಗಿಲ ತಳಿರು ತೋರಣ ನೋಡು
ಗೃಹಪ್ರವೇಶದ ಮುಹೂರ್ತ ನಿರ್ಧರಿಸು ಬೇಗ.-
ನನ್ನ ಹೃದಯದ ಬಾಗಿಲಿಗೆ
ಬಲಗಾಲಿಟ್ಟು ಮಾಡು
ನೀನೊಮ್ಮೆ ಪ್ರವೇಶ
ನಿನ್ನಿಂದಲೇ ಶುರುವಾಗಲಿ
ಗೃಹಪ್ರವೇಶ..!!-
ಹೃದಯದ ಬಾಗಿಲಲ್ಲಿ ಕಾದು
ನಿಂತಿರುವೆ ದಾರಿ ನೋಡುತ
ಸುಮಗಳಿಂದ ಅಲಂಕರಿಸಿರುವೆ
ನವಿಲು ಗರಿಗಳಿಂದ ಸ್ವಾಗತ
ಕೋರುತಿರುವೆ ಕಂಡೊಡನೆ
ಕೊಡುವೆ ಸಿಹಿ ಮತ್ತೊಂದು..!!-
ನಿನ್ನದೆಯ ಪ್ರೀತಿಯಲ್ಲಿ
ಭಾವಕೋಶದಲ್ಲಿ ನೆಮ್ಮದಿ
ಹರಸಿ ಮನಸು ಹಗುರಾಗಿಸಿ
ನಿನ್ನ ಮಧುರ ಮನದಿ ಎದೆಯ
ಹೂದೋಟದಿ ಹೂವಾಗಿ ಅರಳಿ
ನಿಂತಿರುವೆ ನಿನಗಾಗಿ ಕಾಯುತ್ತ..!!-
ಯಾರೆಂದು ವಿಚಾರಿಸಿದಾಗ ಅವನು ಮಾನಸಿಕ ಅಸ್ವಸ್ಥನಂತೆ ಕಂಡು ಬಂದನು
ಕೂಡಲೇ ಹಿಂದಿನಿಂದ ವಾಹನವೊಂದು ಬಂದು ನಿಂತಿತು.
ನಿಮ್ಹಾನ್ಸ್ ಆಸ್ಪತ್ರೆಯದ್ದಾಗಿತ್ತು ಏಕೆಂದರೆ ಅವನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದನು ಅವರೆಲ್ಲರೂ ಹೋದ ನಂತರ ಗೃಹಪ್ರವೇಶ ಮುಂದುವರೆಯಿತು-
ಭವ್ಯ ಅನಂತ ಮನಮಂದಿರ
ಕಟ್ಟಿಸಿದೆನು ನಿನಗಾಗಿ ಸುಂದರ
ಪ್ರೀತಿಯ ಇಟ್ಟಿಗೆಗಳು ಅದಕೆ
ಪ್ರೇಮದ ಕಾವ್ಯಶಿಲ್ಪಿಗಳು ಒಳಗೆ
ನವಯೌವನದ ಕನ್ನಿಕೆಯರು ಕಂಬದೊಳಗೆ
ಸಪ್ತಸ್ವರಗಳ ನಾದ ನಮ್ಮ ಕೋಣೆಯವಳಗೆ
ವೇದ ಮಂತ್ರಗಳ ಸ್ತುತಿಯು ದೇವಮಂದಿರದೊಳಗೆ
ಸ್ವಾಗತ ಕೊರಲಿದೆ ಸುಂದರ ಪಕ್ಷಿಗಳು
ಕೆಟ್ಟ ಶಕುನಗಳ ಬಿಡಿಸಲಿದೆ ಹಾಲಬಣ್ಣ ವುಳ್ಳ ಹಸುಗಳು...
ಅಡಿಗೆ ಯವನು ನಳಮಹಾರಾಜಾ
ಮುಂದೆಯೇ ದೃಷ್ಟಿ ಹೋಗಲಾಡಿಸುವ ಗಣಪತಿ
ಗೃಹ ಪ್ರವೇಶಕ್ಕೆ ನಿನ್ನನ್ನು ನಾನೆ ನನ್ನ ಕೈಯಾರೆ ಸಿಂಗರಿಸಿ ಕರೆದುಕೊಂಡು ಹೋಗುವೆ 😍😀
-
ಚೆಲುವಿನ ಚಾಮರ ಬೀಸಿ
ಸುಗಂಧ ಪರಿಮಳ ಎಲ್ಲೆಡೆ ಚೆಲ್ಲಿ
ಒಲವಿನ ಬಳ್ಳಿಯಲ್ಲಿ ಚಿಗುರಿದ ನಿನ್ನಯ
ಪ್ರೇಮದ ಹೃದಯದ ಅರಮನೆಗೆ
ಪ್ರವೇಶಿಸುವೆ ಒಡಹುಟ್ಟಿದವರ
ಒಲುಮೆಯ ಬಿಟ್ಟು ನಿನ್ನೊಲವ
ಆಶ್ರಯಿಸುತ್ತ..!!-
ಬಿಳೀ ಷರಟು, ಅದೇ ಬಣ್ಣದ ಪಂಚೆ, ಹಣೆಯಲ್ಲಿ ಅಚ್ಚೊತ್ತಿದ್ದ ವಿಭೂತಿ, ಹೆಗಲ ಮೇಲೆ ಝರಿಯ ಶಲ್ಯ. ಜೇಬಲ್ಲಿ ಹೈಟೆಕ್ ಪೆನ್ನು. ಹಾಗೇ ಎದ್ದು ಕಾಣುತ್ತಿತ್ತು ಮುಯ್ಯಿಕವರ್. ಬಂದವರೇ ಕುಶಲೋಪರಿ ವಿಚಾರಿಸಿ ಶುಭಾಶಯ ತಿಳಿಸಿ ಕವರ್ ಅನ್ನು ಕೊಟ್ಟು ಹಾಗೇ ಹೊರಟುಬಿಟ್ಟರು..ತಾಂಬೂಲವನ್ನೂ ತೆಗೆದುಕೊಳ್ಳದೇ..!!!
ಕವರ್ ಬಿಡಿಸಿದರೆ ಐದುನೂರು ಬೆಚ್ಚನೆ ಮಲಗಿತ್ತು..-
ನಮ್ಮ ಗೃಹಪ್ರವೇಶದ ದಿನ ಒಬ್ಬ ಅಪರಿಚಿತ ವ್ಯಕ್ತಿ ಬಂದು ನಮ್ಮನ್ನು ಅಭಿನಂದಿಸಿ ಮುಚ್ಚಿದ ಕವರ್ ಅನ್ನು ಕೊಡುಗೆಯಾಗಿ ಕೊಟ್ಟರು. ತಮ್ಮನ್ನು ಪಕ್ಕದ ಫ್ಲಾಟ್ ಖರೀದಿಸಿದ ಓನರ್ ಎಂದು ಪರಿಚಯಿಸಿಕೊಂಡು, ಮುಂದಿನ ವಾರದಲ್ಲಿದ್ದ ತಮ್ಮ ಗೃಹಪ್ರವೇಶಕ್ಕೆ ಆಹ್ವಾನಿಸಿದರು. ಅವರ ಸ್ನೇಹ ಗಾಢವಾಗಿ ಇಂದಿಗೂ ಉಳಿದಿದೆ.
-