ಭಾವನೆಗಳಲ್ಲಿ ವಿಹರಿಸಬೇಕು
ಪದಗಳು ಸರಳವಾಗಿರಬೇಕು
ನೂರು ಭಾವಗಳು ಹೊಮ್ಮಬೇಕು
ಓದುಗ ವ್ಹಾವ್ ವ್ಹಾವ್ ಅನ್ನಬೇಕು-
ಕನ್ನಡಕ್ಕಾಗಿ ಕೊರಳೆತ್ತು ಪಾಂಚಜನ್ಯವಾಗುತ್ತದೆ
ಕನ್ನಡಕಕ್ಕಾಗಿ... read more
ಶಿಕ್ಷಣವಿಲ್ಲದ ರಾಜಕಾರಣಿ ಮುಂದೆ
ಸುಶಿಕ್ಷಿತನ ಟೋಪಿ ತಲೆತಗ್ಗಿಸಿತು/
ಕಂಚಿನ ಗಂಟಲಿನ ಸದ್ದಿಗೆ
ಮೈಕ್ಸೆಟ್ಟೂ ಕೆಟ್ಟು ಕೂತಿತ್ತು//-
ಹುಟ್ಟು ಸಾವಿನ ನಡುವಿನ ಸಮಯ ಬದುಕು ಬೇವು ಬೆಲ್ಲ/
ಎಣಿಸಿದಂತೆ ಏನೂ ನಡೆಯದು;ನಡೆದಾಗ ನಾನೇ ಇಲ್ಲ//-
ದೆವ್ವ ಬಂದವನಂತೆ ದುಡಿಯುತ್ತಾನೆ
ಗರ ಬಡಿದವನಂತೆ ಮಲಗುತ್ತಾನೆ
ಮತ್ತೇ ದೇವರಕಡೆಗೆ ದೃಷ್ಟಿ ಬೀರುತ್ತಾ-
ಯಾವುದೇ ಧರ್ಮ ಬಯಸುವುದಿಲ್ಲ ನೆತ್ತರು/
ಧರ್ಮದ ಹೆಸರಲ್ಲಿ ಮತಾಂಧರು ರಕ್ತ ಹರಿಸುವರು//-
ಸಣ್ಣ ಸಣ್ಣ ಕವಿತೆಗಳ ರಚಿಸಲು
ಒಂದಂಕದ ನಾಟಕ ಬರೆಯಲು
ಸಣ್ಣ ಸಣ್ಣ ಕಥೆಗಳ ಹೇಳಲು
ಸ್ಪರ್ದೆಗೆ ಪ್ರಬಂಧ ಬರೆಯಲು
ಪ್ರೇಮ ಪ್ರೀತಿ ಪ್ರಣಯವಾಡಲು
ವಿರಹಗೀತೆಯಲಿ ವಿರಮಿಸಲು
ಹಸಿರು ಚಪ್ಪರದಲಿ ಚಪ್ಪರಿಸಲು
ಲಾಲಿ ಹಾಡುಗಳ ಹಾಡಲು
ಶೋಷಿತ ವರ್ಗವ ಎತ್ತಲು
ಲೇಖನಿ ಹರಿತವೆಂದು ತೋರಲು
ಇದ್ದರೂ ಹೀಗೆ ನಾನೇ ಬೇರೆ
ಬದುಕು ಬರಹ ಬೇರೆ ಬೇರೆಂದು
ಎಲ್ಲಾ ಸಿಕ್ಕಮೇಲೆ ನನಗೇಕದು
ಹಣ್ಣಾದ ನನಗೆ ಬೇಕಿಲ್ಲ ಹಸಿಹಸಿ
ತೆರಿಗೆ ಹಣ ತಂದಿದೆನೆಗೆ ಐಸಿರಿ
ಲೇಖನಿ ಮುದುಡಿದೆ ಮೂಲೆಯಲಿ
-
ಚಕ್ರಗಳುರುಳಿದಂತೆ ಟೈರೂ ಸವೆದು ಹೋಯಿತು/
ಕೀಲುಗಳು ಕರಕರೆಂದು ಮೂಲೆ ಹಾಸಿಗೆ ಹಿಡಿದಾಯ್ತು//-