ಎಂದು ಬರುವೆ
ಮನಸ್ಸನ್ನು ಸತತವಾಗಿ ಕಾಡುತಿರುವೆ
ತುದಿಗಾಲಲಿ ನಿನಗಾಗಿ ಕಾಯುತಿರುವೆ
ಹೇಳು ಚೆಲುವೆ ನೀನು ಎಂದು ಬರುವೆ
ಪ್ರೀತಿಯ ಹೂಗುಚ್ಛವ ಹೊತ್ತು ತರುವೆ
ಮಾತು ಕೊಟ್ಟು ಏಕೆ ಮರೆತುಹೋದೆ
ಚಡಪಡಿಸುತಿರುವೆ ನೀ ಬಳಿಗೆ ಬಾರದೆ
ಕೃಶನಾಗಿ ಹೋಗುತ್ತಿರುವೆ ಊಟ ಸೇರದೆ
ಬಾಳು ರವಿಯು ಉದಯಿಸದೆ ಕತ್ತಲಾಗಿದೆ-
ಉಸಿರಾಗುವೆ
ಬೇಸಿಗೆಯನು ತಂಪಾಗಿಸೋ ಹಸಿರಾಗುವೆ
ಪ್ರಿಯತಮೆಯೇ ನಿನ್ನೊಡಲಿಗೆ ಉಸಿರಾಗುವೆ
ಕೆಂದಾವರೆ ಅರಳುವುದಾದರೆ ಕೆಸರಾಗುವೆ
ಹೆಮ್ಮರವಾಗಿ ನೆರಳನಿತ್ತು ಆಸರೆಯಾಗುವೆ
-
ಆತ್ಮಾಭಿಮಾನ
ಅನುಮಾನ ಪಟ್ಟರೆಂದು ಹೆದರಿ ನಿಲ್ಲದಿರು
ಅವಮಾನ ಮಾಡಿದರೆಂದು ದೂರು ನೀಡದಿರು
ಕೀಳರಿಮೆಯಿಂದ ಎಂದೂ ನಿಲ್ಲಿಸಬೇಡ ನಿನ್ನ ಯಾನ
ಬಿಡಬೇಡ ಎಂದಿಗೂ ನಿನ್ನ ಆತ್ಮಾಭಿಮಾನ
ಹಿಡಿದ ಕಾರ್ಯದಲಿರಲಿ ತುಂಬು ಅಭಿಮಾನ-
ಪ್ರತಿಬಿಂಬ
ದರ್ಪಣದಲಿ ಕಾಣುವ ಪ್ರತಿಬಿಂಬ ನನದೇನು
ಬಹಿರಂಗ ದರ್ಶನವು ಆದರೇ ಸಾಕೇನು
ಅರಿಯಬೇಕಲ್ಲವೇ ಅಂತರಂಗದ ನಿಜ ರೂಪವನು
ಧ್ಯಾನವನು ಬಿಟ್ಟು ಮಾರ್ಗವದಕೆ ಇನ್ನೇನು,
ಹರಿಯುವ ನೀರಿನಲಿ ಬಿಂಬವು ಮೂಡುವುದೇ
ತಿಳಿಯಾಗಬೇಕು, ನಿಲ್ಲಬೇಕಲ್ಲವೆ ಅದು ಕದಲದೆ
ಮನಸಿನಲಿ ನೆಮ್ಮದಿ ಶಾಂತಿಯು ನೆಲೆಸದೆ
ಗುರುವು ಕಲಿಸಿದ ವಿದ್ಯೆ ಅರಿವಾಗುವುದೇ
-
ಜಗದಲಿ ಏನಿರದು ಅನವರತ
ಬದಲಾವಣೆ ಒಂದೇ ಇಲ್ಲಿ ಶಾಶ್ವತ
ಒತ್ತಡಗಳು ಕೂಡ ನಿಲ್ಲವು ಖಂಡಿತ
ಹಗುರವಾಗಿರಲಿ ಮನಸು ನಗುನಗುತ-
ಕಡಲ ಬಳಿ ತೆರಳುವರು ಎಷ್ಟೋ ಮಂದಿ
ಮುತ್ತು ಹುಡುಕುವವರು ಕೆಲವು ಮಂದಿ
ಮತ್ಸ್ಯ ದೊರಕುವುದು ಕೆಲರಿಗೆ
ಹಲವರಿಗೆ ಅಲೆಯ ನೀರು ಕಾಲ ಮುಟ್ಟಿದರೆ ಸಾಕು
ಸಂಪೂರ್ಣ ತೃಪ್ತಿ-
ಗುರುಗಳು
ಗುರುಗಳು ಬದುಕಿಗೆ ಬೆಳಕಾಗುವರು
ಅಜ್ಞಾನವೆಂಬ ಕತ್ತಲನು ನೀಗುವರು
ಆಚಾರ್ಯರು ದೇವರಿಗೆ ಸಮಾನ
ಅವರಿಗಲ್ಲವೆ ಹೆತ್ತವರೊಡನೆ ಸ್ಥಾನ
ಎಂದೆಂದೂ ಶಿಕ್ಷಕರನು ನೆನೆಯಬೇಕು
ದಾರಿ ತೋರಿದವರಿಗೆ ಋಣಿಯಾಗಿರಬೇಕು
ಮೊದಲರಿವು ಕೊಟ್ಟವಳು ತಾಯಿಯು
ಜೀವಕ್ಕಿಂತಲು ಮಿಗಿಲು ಮಾತೃಭಾಷೆಯು
-
ಒಂದು ಕಾರ್ಖಾನೆ ಅಥವಾ ಕೈಗಾರಿಕೆಯ ಕೇಂದ್ರದಲ್ಲಿ ಸಿದ್ಧವಾಗುವ ಉಪಯೋಗಿ ಸಾಮಗ್ರಿ/ವಸ್ತು
-