QUOTES ON #ಇಬ್ಬನಿ

#ಇಬ್ಬನಿ quotes

Trending | Latest

ಆ ಗುಲಾಬಿಯ ಹೂವಿನ
ಮೇಲಿರುವ ಇಬ್ಬನಿಗಿಂತಲೂ
ನಿನ್ನಧರಗಳನು ಆವರಿಸಿರುವ
ಇಬ್ಬನಿಯೇ ಅನುಪಮವಾದುದು ಸಖಿ

-


23 DEC 2019 AT 23:32

ನಿತ್ಯವೂ ಹೊಸತನ ಹೊತ್ತು ಬರುವ ನೇಸರ, ತಮ್ಮ ಕಾಯಕವನ್ನು ಚಾಚೂ ತಪ್ಪದೆ ಪಾಲಿಸುವ ಹಕ್ಕಿಗಳ ಹಿಂಡು, ಚಿಗುರೆಲೆಯ ಮೇಲಿನ ಇಬ್ಬನಿ, ಹೂವಾಗಿ ಸೆಳೆಯುವ ಮೊಗ್ಗುಗಳು, ಎಲ್ಲವೂ ನಿತ್ಯನೂತನವೇ ಏಕೆಂದರೆ ಯಾರನ್ನೂ ಆಕರ್ಷಿಸುವ ಹೊಣೆಗಾರಿಕೆ ಅವಕ್ಕಿಲ್ಲ. ಸುಮ್ಮನೆ ತಮ್ಮ ಕಾರ್ಯಗಳಲ್ಲಿ ನಿರತವಷ್ಟೇ...

-


16 SEP 2018 AT 0:28

ನಕ್ಷತ್ರಗಳ ಹೆಕ್ಕಿ
ಹಾರ ಮಾಡಿ ತರುವೆ
ಕಾಯೇ ಸಖಿ
ಎಂದವನು ಅವನು..
ದಣಿದು ಬರುವ
ಅವನಿಗೆ ಇಬ್ಬನಿಯ
ಮೊಗೆದು ಕೊಡಲು
ದಾರಿ ಕಾಯುತ್ತ
ನಿಂತವಳು ನಾನು..

-


6 DEC 2019 AT 20:14

ಬೆಚ್ಚಗಿನ ಭಾವ, ತಣ್ಣನೆಯ ಮೌನ,
ಮಾರುತಕ್ಕೆ ಪರ್ಣಗಳಿಗೆ ತನ್ನ ಒಲವ ಸವರುವ ಪುಳಕ, ಇಬ್ಬನಿಗೂ ಅಗಾಗ ಮರುಕ, ತನ್ನೊಲವ ಕಸಿದುಕೊಳ್ಳುವ ಪ್ರಭಂಜನದೊಡನೆ ಮೂಡಿಸಲು ಬಿರುಕ, ಎಲೆಗೋ ತಂಪೆಲರಿನೊಡನೆ ಇಬ್ಬನಿಯ ಸಂಧಿಸುವ ತವಕ...

-



ಧರೆಯ ಮಡಿಲಿಗೆ
ಉಷೆಯ ಚುಂಬನ
ಮುತ್ತಿನ ಸೋಗನೊದ್ದ
ಇಬ್ಬನಿಯ ಸಿಂಚನ
ಮಾಸಿದ ಮನದಂಗಳಕೆ
ನೀಡಲು ತಿಳಿಬೆಳಕ ಸಂಚಲನ
ದುಗುಡ ತುಂಬಿದ ಒಡಲಿಗೆ
ತೊಡಿಸಲು ಅರಿವಿನ ಆಭರಣ
ಅಗೋ ನೋಡು
ಆ ದೂರದ ದಿಗಂತದಲಿ
ಆಗಿದೆ ಆದಿತ್ಯನ ಆಗಮನ....
ನೀಲಿ ನಭದ ಅಂಚಿನಲ್ಲಿ
ಹಾರೈಕೆಯ ಆಶಾ ಕಿರಣವ ಚೆಲ್ಲಿ
ಆಗಿದೆ ಅನುರಾಗ ತುಂಬುವ
ಆಗಸದ ಅಧಿಪತಿ
ಆದಿತ್ಯನ ಆಗಮನ....

-


14 JUL 2019 AT 23:19

ಬಾನಂಗಳದಿ 'ಇನ'ನು ಮುಂಜಾವಿನ
ಮಂಜಿನಲಿ ಉದಯಿಸುತಾ
ಹೊಂಬೆಳಕಿನ ಉಷೆಯೊಳ ಮುತ್ತಿನ
ಮಳೆಗರೆದಿರುವನು!
ಶತತಾರಕದ ಚಿತ್ತಾರದಂತಿವೆ
ಹಸಿರೆಲೆಯ ಮೇಲೆಲ್ಲಾ
ಹಿಮಮಣಿಯ ಸಾಲು ಸಾಲು ಸರವೂ
ಮನಮೋಹನವೂ
ರಮ್ಯ ತಾರೆಗಳ ಮೋಹದಾಟವೂ
ಕಂಗಳಿಗಬ್ಬವ ತರುತಿಹವೂ ಈ ಮುತ್ತಿನ
ಹಿಮಮಣಿಗಳೂ!!

-



ನಸುಕಿನ ಹಸುರಿನ
ಮೇಲೆ ಬಿದ್ದ,
ಕರಗುವ ಇಬ್ಬನಿಯಂತೆ
ಈ ಜೀವನ..
ಕರಗುವ ಮುನ್ನ..
ನೀ ಹೊಳೆದರೆ ಚೆನ್ನ..

-



ಇಬ್ಬನಿಯ ಸೂಸುವ
ನಸುಕಿಗೆ
ಆಗರವಾದ ಈ ಧರಣಿಗೆ
ಧಾರೆ ಎರೆಯಲು
ಬಂದಿಹನೀ ತರಣಿ..
ಬಾನಂಚಲಿ ಬೆಳ್ಳಿಯ
ಕಿರಣಗಳ ಹೊತ್ತು,
ರಂಗೇರಿಸಿ ನಭದ ಸುತ್ತು
ನವ ನವೀನ ಹುರೂಪಿನೊಂದಿಗೆ
ನಡೆದಿದೆ ನವ್ಯಕಾವ್ಯದ ಸಿಂಚನ..
ಘಟಿಸಿದೆ ಪಕ್ಕಿಗಳುಲಿಯಲಿ
ಪ್ರಕೃತಿಯ ನಿತ್ಯ ಸ್ತೋತ್ರದ ಅರ್ಚನ..
ಆ ಶುಭ ಘಳಿಗೆಗೆ
ಸಮ್ಮತಿಸಿ ಸಾಕ್ಷಿಯಾಗಿದೆ
ಈ ಭುವಿಯ ಆ ರವಿಯ
ಆಲಿಂಗನ...

-


4 AUG 2020 AT 8:55

ಹೂ ಪಕಳಗಳ ಮೇಲಿನ ಇಬ್ಬನಿಗೆ
ಹೂವೊಂದು ಕೇಳಿತಂತೆ....

“ನೀ ಅರೆಗಳಿಗೆ ಇರುವುದಾದರೂ ಅದೇಕೆ ಬೆಟ್ಟದಷ್ಟು ಪ್ರೀತಿ ತೋರುವೆ ನಿನ್ನಗಲಿಕೆಯಿಂದ ನಿನಗೆ ಮನಸೋತ ಮನ ಮರುಗುವುದಿಲ್ಲವೇ" ಎಂದು...

ಇಬ್ಬನಿಯು ನುಡಿಯಿತಂತೆ... “ಇರುವಷ್ಟು ದಿನ ಪ್ರೀತಿಸು ಅರೆ ಕ್ಷಣವಾಗಲಿ, ಅರೆಗಳಿಗೆಯಾಗಲಿ ನಿನ್ನವರು ನಿನ್ನ ಚಿರಕಾಲ ನೆನೆವಂತೆ ಮಾಡು, ಬದುಕಿನಲ್ಲಿ ಸಾರ್ತಕಥೆಯ ಮೆರೆಯಲು ಹವಣಿಸು...ನಾನೆಲ್ಲೂ ದೂರ ಹೋಗಲಾರೆ ಅದೇ ಆ ಸೂರ್ಯನ ಮರೆಯಲ್ಲಿ ಅಡಗಿ ಕುಳಿತು ನಿನ್ನಂದವ ನೋಡಿ
ಕಣ್ತುಂಬಿಕೊಳ್ಳುವೆ "ಎಂದು...!!

-


17 DEC 2019 AT 9:49

"ರುಬಾಯಿ"
ಇಬ್ಬನಿ ಮುಚ್ಚಿಹುದು ಇಳೆಗೆ
ನಡುಕ ಹುಟ್ಟಿಹುದು ಛಳಿಗೆ
ಅರುಣನ ಬಿಸಿಯಪ್ಪುಗೆಯು
ಭೂದೇವಿ ಬಂಧಿಸಿಹ ಬೆಸುಗೆ

-