ನಿನ್ನ ಅಹಂಕಾರ ನಿನ್ನ ಜೊತೆಗೆ ಘೋರಿಯಲ್ಲಿ ಮಣ್ಣಾದಾಗ, ನಿನ್ನ ಎದೆಯ ಮೇಲಿನ ಕಲ್ಲು ಕೂಡ ನಿನ್ನ ನೋಡಿ ನಗುತ್ತೆ....
-
"ನಮಸ್ಕಾರ"
'ನಮಸ್ಕಾರ'ದ ರೂಪ ಎಷ್ಟೊಂದು ವಿಸ್ತಾರ..
ಅದರೆದುರು ಅಡಗಿಕೊಳುತ್ತೆ ಅಹಂಕಾರ
ಎದ್ದು ನಿಲ್ಲುತ್ತೆ ಮನುಜನ ಸಂಸ್ಕಾರ
ಕಂಡೊಡನೆ ಮಾಡುವ ನಾಲ್ಕಕ್ಷರದ ನಮಸ್ಕಾರ
ಮಾಡುತ್ತೆ ಅದ್ಭುತ ಚಮತ್ಕಾರ
ಬಂಧು ಬಾಂಧವರಲ್ಲಿ ಇರಲ್ಲ 'ನಾನೆಂಬ' ಕಿರೀಟ ದ ಭಾರ
ಕರ ಜೋಡಿಸಿ ಮಾಡುವ ನಮಸ್ಕಾರ
ಅದರಲ್ಲಿರುವ ಭಕ್ತಿಭಾವ ಅಪಾರ
ಅದರೆದುರು ನಿಲ್ಲದು ಹರನಿಗರ್ಪಿಸುವ ಹಾರ
ಆಡಂಬರಕ್ಕಿಂತ ವಿನಯದ ಆದರವನ್ನು ಮೆಚ್ಚುವನು ಆ ಹರ..
-
ಲೋಕದ ಡೊಂಕು
ಮುಚ್ಚಲೊರಟವನ
ಆಂತರ್ಯಲೋಕವೆ
ಬರೀ ಮಂಕು.!
ಡೊಂಕು ಮಂಕುಗಳ ನಡುವೆ
ಸಿಲುಕಿ ನರಳುತಿಹುದು
ಅವನ ಮನಸ್ಸು
ಅಲ್ಲೆಲ್ಲಾ ಇರುವುದು
ಬರೀ ಕೊಂಕು.!-
ನಮ್ಮ ಜೀವವೇ ಶಾಶ್ವತವಲ್ಲ
ಆದರೂ ನಾವು ಮರೆತೆವೆಲ್ಲ
ಇದ್ದಷ್ಟು ದಿನ ಖುಷಿಯಾಗಿರುವ ನಾವೆಲ್ಲ
ಅಹಂಕಾರ ಎನ್ನುವ ಶರ ಪಂಜರದಲ್ಲಿ
ಯಾವತ್ತೂ ನಾವು ಬಂದಿಯಾಗುವುದು ಸರಿಯಲ್ಲ ಮಮಕಾರ ಎನ್ನುವುದು ಮಮತೆಯ ಬಳ್ಳಿ
ಅದು ಯಾವತ್ತು ಸುಂದರ ನಮ್ಮ ಬಾಳಲ್ಲಿ ಅಹಂಕಾರದಿಂದ ಮುಕ್ತರಾಗೋಣ
ಮಮಕಾರ ಪ್ರೀತಿಯಿಂದ ಬಾಳೋಣ
ಆವಾಗ ನಾವು ಪುಣ್ಯವಂತರು
ಎಲ್ಲರಿಗಿಂತ ಭಾಗ್ಯವಂತರು.....-
ಮಾನವನಿಗೆ ಸುಖ ಸಂಪತ್ತು ಜಾಸ್ತಿಯಾದಷ್ಟು
ಅವನಲ್ಲಿ ಅಹಂಕಾರ ಗರ್ವ ಹೆಚ್ಚಾಗುತ್ತದೆ..!!-
ತಪ್ಪಿದಾಗ ನಾವೂ ಅಹಂ
ಅಡ್ಡಬರದ ರೀತಿಯಲ್ಲಿ
ನಾವೂ ಬೆಳೆದರೆ
ಎಂತಹ ಕಠಿಣ ಸ್ಥಿತಿಯು
ಕೂಡ ಸಲೀಸಾಗಿ
ಬಗೆ ಹರಿಯುತ್ತದೆ
-
ಅಹಂಕಾರ ನಮ್ಮ ದೇಹವನ್ನು ಮಾಡುತ್ತೆ ವಿಕಾರ
ಅಹಂಕಾರ ಎಂದಿಗೂ ಶೋಭೆಯಲ್ಲ ನಮ್ಮ ಪ್ರಕಾರ.
-