ಹೇಳ ತೀರದ ಮೌನ ಒಂದು
ಬದುಕಿನ ಕನ್ನಡಿ ಮುಂದೆ
ಭಿಕಾರಿಯಂತೆ ಅಳುತ್ತಿತ್ತು
ನೀನೊಂದು ಹೆಣ್ಣೆಂದು
ಗಹಿ ಗಹಿಸಿ ನಕ್ಕು
ಕಣ್ಣೀರ ಕೂಪದಲಿ
ತೆಲಿದ ಮನಕೆ
ಬಿಸಿ ರಕ್ತ ಹೀರುತಿರುವ
ರಕ್ಕಸನ ಮುಂದೆ
ನಿನ್ನ ತಾಯಿ ಹೆಣ್ಣೆಂದು
ಅಂಗಲಾಚಿ ಬೇಡಿತ್ತು
ಕಾಮದ ದಾಹಕೆ
ಬಲಿಯಾದ ದೇಹ
ಸತ್ತ ಮಾನವೀಯತೆಯ
ಶವದ ಸಂಸ್ಕಾರಕೆ
ಇಟ್ಟ ಕಟ್ಟಿಗೆ ನುಡಿದಿದ್ದು
"ಹುಟ್ಟಿದರೆ ಹೆಣ್ಣಾಗಿ ಹುಟ್ಟಬೇಡವೆಂದು"
✍Thilaka kulal
-
ಅವಳೆಂದರೆ ಶಾಪವೋ..?
ಕಥೆಯಲ್ಲಿ ಅಡಗಿದೆ ಅವಳೆನ್ನುವ ವ್ಯಥೆಯ ಸಾರ
ಅತ್ಯಾಚಾರ ಅನಾಚಾರಗಳಿಂದ
ಕೊನೆಗೊಳ್ಳುತಿರುವ ಅವಳೆನ್ನುವ ಸಂಚಿಕೆಗೆ
ಮುಕ್ತಾಯವೆಂದೋ....?
ಮಾನವೀಯತೆ ಇಲ್ಲದ ಮನುಷ್ಯನ
ಮುಂದೆ ಅಂಗಲಾಚುತ್ತಿರುವ ಕಣ್ಣೀರ ಗೋಳು
ನಿತ್ಯ ನಿರಂತರ ದೌರ್ಜನ್ಯಗಳ
ಅಟ್ಟಹಾಸವಾಡುತಿರಳು ಬಳಿಪಶು
ಅವಳೆನ್ನುವ ಅವಳು
ಹೇಳತೀರದ ಕೃತ್ಯಸಾಲು
ಉಕ್ಕಿ ಹರಿದರು ಲೆಕ್ಕಿಸದೇ
ಅಂಧರಂತೆ ನೋಡುತಿಹರು
ಕಾಲ ಕಾಲಕ್ಕೂ ತುಳಿಯುತ್ತಾ
ಅದೆಷ್ಟೋ ಹೆಣ್ಮನಗಳ ಬಾಳು
ನಿಭ೯ಯಳಿಂದ ಹಿಡಿದು
ಅದೆಷ್ಟೋ ಹೆಸರುಗಳ ಸಾಲು
ಬಿಕ್ಕಳಿಸಿ ಅಳುತಿದ್ದರು
ಕಸಕ್ಕಿರುವ ಬೆಲೆ ಅವಳಿಗಿಲ್ಲವೇನು..?
ಅವಳೆನ್ನುವ ಅವಳು ಹೆಣ್ಣವಳು ....
✍Thilaka kulal
-
ಕಣ್ಣಲ್ಲವೇ ಹೆಣ್ಣು ಸಂಸಾರಕೆ
ಚಕ್ರವಲ್ಲವೇ ಹೆಣ್ಣು ಬಾಳಬಂಡಿಗೆ
ಒಲವಲ್ಲವೇ ಹೆಣ್ಣು ಪ್ರೀತಿಪ್ರೇಮಕೆ
ಆದರ್ಯಾಕವಳಿಗೆ ಅತ್ಯಾಚಾರದ ಶಿಕ್ಷೆ..?
ಜನ್ಮವಲ್ಲವೇ ನಮಗೆ ಅವಳಿಂದ
ಗುರುವಲ್ಲವೇ ಅವಳು ಮೊದಲಿಂದ
ಮಮತೆಯ ಹೆಸರು ಅವಳಿಗೆ ಅಕ್ಕರೆಯಿಂದ
ಆದರೂ ತಪ್ಪಲಿಲ್ಲ ಅಂಜಿಕೆಯ ಬಾಹುಬಂಧ..!
ಅಗಸನ ಮಾತಿಗೆ ಅರ್ಥವುಂಟು ನಾಡಲ್ಲಿ
ರಾವಣನ ಕೊನೆಯಾಯಿತು ಒಪ್ಪಿಗೆಯಲಿ
ಕಾಮುಕರ ಅಟ್ಟಹಾಸ ಮುಟ್ಟಿದರು ಮುಗಿಲ
ಸೌಖ್ಯ ಸಂಭ್ರಮದ ಬೆಳೆ ಕಾಣಲಿಲ್ಲವಲ್ಲ..!
ಎರಡು ದಿನದ ದೀಪದ ಬೆಳಕಲ್ಲಿ ನೆಮ್ಮದಿ
ಮೂರು ದಿನದ ಜಾಲತಾಣದಲ್ಲಿ ವಿಶ್ವಾಸ
ಸಾಕಿನ್ನು ಸೋದರಿಯ ಹಾಸಿಗೆ ಸಲ್ಲಾಪ
ಎದೆಹಾಲುಂಡ ನೀಚರೆ ಬಿಟ್ಟಿರೇಕೆ ಹೆತ್ತವಳ..?
ನೈಜತೆಯ ಅನಾವರಣಕ್ಕೆ ನೂರೆಂಟು ವಿಘ್ನ
ನೊಂದವರ ಕಣ್ಣೀರಿಗೆ ಹುಸಿಮಾತಿನ ಸಾಂತ್ವನ
ಹತ್ತಿದ ಬೆಂಕಿಯ ಕಡೆಯ ಕಿಡಿಯವರೆಗೆ ಸಂಚಲನ
ಆರಿದ ಮರುಕ್ಷಣವೇ ಮರೆತರೂ ತಮ್ಮತನ..!!
-✍🏻 ಪ್ರಿಯಾಂಕಾ ಬಿಳ್ಳೂರ.
-
ಲಕ್ಷಾಂತರ ಅತ್ಯಾಚಾರಗಳನ್ನು
ಹೊಟ್ಟೆಯಲ್ಲಿ ಹಾಕಿಕೊಳ್ಳುವ
ಈ ಸಮಾಜ
ಒಂದು ಅಂತರ್ಜಾತಿಯ
ಪ್ರೇಮ ವಿವಾಹವನ್ನು
ತನ್ನ ಹೊಟ್ಟೆಯಲ್ಲಿ
ಹಾಕಿಕೊಳ್ಳುವಲ್ಲಿ ಸೋಲುತ್ತದೆ.-
ಅತ್ಯಾಚಾರ ಮಾಡಿದವರ ಜಾತಿ ಧರ್ಮವನ್ನು ಗುರುತಿಸುವುದು,
ಅತ್ಯಾಚಾರಕ್ಕೆ ಬಲಿಯಾದವರಲ್ಲಿ ಜಾತಿ-ಧರ್ಮವ ಅರಸುವುದು
ಬಾಣಲೆಯಿಂದ ಬೆಂಕಿಗೆ ಹಾಕಿದಂತೆ ಗಾಲಿಬ್..-
ಬೇಡ... ಬೇಡ...
ಸಾಕಿನ್ನು ಹೆಣ್ಣು ಜನ್ಮ.
ಅತ್ಯಾಚಾರಕ್ಕಿಂತ ಭ್ರೂಣಹತ್ಯೆ ಮೇಲು!
ಹೆಣ್ಣುಮಗು ಲಕ್ಷ್ಮಿಯೂ ಅಲ್ಲ, ಗೌರಿಯೂ ಅಲ್ಲ.
ಬೆದೆಹತ್ತಿದ ನಾಯಿಗಳ ತೆವಲುತೀರಿಸೂ
ಹೆಣ್ಣುಜನ್ಮ ಸಾಕಿನ್ನು!
ಸೃಷ್ಟಿ-ಕ್ರಿಯೆ ನಿಂತರೂ ಅಡ್ಡಿಯಿಲ್ಲ.
ಗಿಡಮರ, ನದಿಪರ್ವತ, ಪ್ರಾಣಿ ಪಕ್ಷಿಗಳಿಂದ
ಈ ಭುವಿ ಸಿಂಗರಿಸಲಿ.
ಮನುಷ್ಯಜನ್ಮ ಈ ತಲೆಮಾರಿಗೆ ಮುಗಿದುಹೋಗಲಿ.
ಇಲ್ಲದಿರೆ ಇನ್ನಷ್ಟು 'ನಿರ್ಭಯಾ'ಗಳನ್ನು ಸುಡುತ್ತಿರಿ...
-
ಗಂಡಸರಾಗಿ ಒಂದು ಒಂಟಿ
ಹೆಣ್ಣು ಮಗಳ ಮೇಲೆ
ಅತ್ಯಾಚಾರವೆಸಗಿ, ಕ್ರೂರವಾಗಿ
ಕೊಲೆಗೈದ ಗಂಡಸು
ಜಾತಿಯ ಹಿಜಡಾಗಳೇ
'ಶೆಮ್' 'ಶೆಮ್',,,,
'ಥೂ',, ನಿಮ್ ಜನ್ಮದ್ ಮೇಲೆ
ನಾಯಿ ಉಚ್ಚೆ ಹೊಯ್ಯಾ 😕-
ಕೊನೆಗು ನ್ಯಾಯ ಸಿಗ್ತು ಅಂತ ಖುಷಿಪಡಬೇಕ ಅಥವಾ ನಮ್ಮ ದೇಶದಲ್ಲಿ ನ್ಯಾಯ ಸಿಗೋಕೆ ಇಷ್ಟು ದಿನ ಬೇಕಾಯ್ತು ಅಂತ ದುಃಖಪಡಬೇಕ ಗೊತ್ತಿಲ್ಲ...
ಕ್ಷಮಿಸು ಸಹೋದರಿ ನಿನಗೆ ನ್ಯಾಯ ಒದಗಲು ಇಷ್ಟು ಸಮಯ ಬೇಕಾಯಿತು.
ಆದರೆ ನಿನ್ನಂತ ನರಕವನ್ನು ಮತ್ತಾವುದೇ ಹೆಣ್ಣು ಈ ಭುವಿಯಲ್ಲಿ ಕಾಣದಿರಲಿ...-