QUOTES ON #ಹುಣ್ಣಿಮೆ

#ಹುಣ್ಣಿಮೆ quotes

Trending | Latest
30 JAN 2020 AT 22:16

ನನ್ನೆದೆಯ
ಸಾಗರದ
ಅಲೆಗಳೇರಿಳಿತವೆ
ನೀನು.!
ಧನಾತ್ಮಾಕ
ಆಲೋಚನೆಗಳಲ್ಲೆ
ತೇಲುತಿರುವ
ಬಿಂಬ ನಾನು.!

-


13 JAN 2020 AT 23:51

ನೀ ಪೂರ್ಣ ಚಂದಿರ,
ನಾ ಭೋರ್ಗರೆವ ಸಾಗರ.
ಹುಣ್ಣಿಮೆಯ ದಿನದಂದು ಬೆಳಕ ಚೆಲ್ಲುತ್ತಾ,
ಆಕರ್ಷಿಸಲು ನನ್ನ ನಿನ್ನೆಡೆಗೆ,
ಅಲೆಯಾಗಿ ಎತ್ತರೆತ್ತರಕ್ಕೆ ಜಿಗಿವೆ ನಾ,
ನಿನ್ನ ತಲುಪಲು ಆ ವಿಶಾಲ ಮುಗಿಲೆಡೆಗೆ.
ನೀ ಆಗಸಕೇ ಸ್ವಂತವೆಂದು ತಿಳಿದಿದ್ದರೂ,
ನೀ ಆ ಆಗಸಕ್ಕೆ ಸ್ವಂತ ಎಂದು ತಿಳಿದಿದ್ದರು.

-



ನನ್ನಿನಿಯನ ಪ್ರೀತಿಯ ಬಡಿತವು ಸದಾ ನನ್ನ ಹೃದಯವನ್ನು ತಟ್ಟುತ್ತಿದೆ.

-


16 FEB 2022 AT 22:27

*ಟಂಕಾ*

ನಿನ್ನಂದ ನೋಡಿ
ಹುಣ್ಣಿಮೆ ಚಂದಿರನು
ಮಂಕಾಗಿಹೋದ
ಬೆಳಕನು ಚೆಲ್ಲದೇ
ಕಳಾಹೀನನಾದನು— % &

-



ಹಸಿವಾದಾಗ ಊಟ ಹಾಕಿ ಬೆಳೆಸಿರುವ
ಅವರು ನಮ್ಮವರಾದರು...!

ಸಾಯುವ ನಿರ್ಧಾರವಿದ್ದಾಗ ಜೀವದ ಬೆಲೆ ತಿಳಿಸಿರುವ
ಅವರು ನಮ್ಮವರಾದರು...!

ಸೋತ ಹೃದಯಕ್ಕೆ ಪ್ರೀತಿ ಕೊಟ್ಟು ಸಲಹಿರುವ
ಅವರು ನಮ್ಮವರಾದರು...!

ಇನ್ನೊಬ್ಬರ ಸಂತೋಷದಲ್ಲಿಯೆ ನೆಮ್ಮದಿ ಕಂಡಿರುವ
ಅವರು ನಮ್ಮವರಾದರು...!

-



ಹುಣ್ಣಿಮೆಯ
ದಿನದ ಆಗಮನದಲ್ಲಿ
ಅಲೆದಾಟದ ದಿನಚರಿಗಳಲ್ಲಿ
ಒಂದಿಷ್ಟು ಗಮನಿಸಿದ
ವಿಚಾರದ ವಿಷಯದಲ್ಲಿ
ಏಕೊ ಮನವು ಘಾಸಿಯಾದಂತೆ
ಭಾಸವಾಗಿ ಮೌನದ ಹಾದಿ ಹಿಡಿದಿದೆ...!

ತಿಳಿಹೇಳುವ ಮಾತುಗಳಲ್ಲಿ
ಆತುರದ ನಿರ್ಧಾರಗಳಲ್ಲಿ
ಬದಲಾವಣೆಗೆ ಸೂಚಿಸಿ
ಸೂಚನೆಯ ಅನುಮತಿಸಿ
ಅಪರಿಚಿತ ನೋವುಗಳ
ನಿಯಂತ್ರಿಸಿ ಹೊರಹೋಗಬೇಕಿದೆ...!

-


21 MAR 2019 AT 7:01

ಬೆಳದಿಂಗಳು
ರಂಗೇರ್ಸಿದೆ ಮನದಿ
ಮುತ್ತಿನ ಮತ್ತು

-



***ಟಂಕಾ***
ಹುಣ್ಣಿಮೆ ಚಂದ್ರ
ನೋಡಲೆಷ್ಟು ಸುಂದರ
ಬಾನು ಬಂಗಾರ
ಪ್ರೀತಿಯ ಸರದಾರ
ನೋವೆಲ್ಲಾ ಬಹುದೂರ.

-


17 FEB 2021 AT 7:44

ಶಶಿಯ ಬೆಳಕನು ಅರಸುತಿದ್ದ ಚಕೋರ ಪಕ್ಷಿಯು ನಾನು,
ಮೋಡ ತುಂಬಿಹ ಕಡುಗತ್ತಲ ಬಾನಲ್ಲಿ ಬೆಳದಿಂಗಳಿಗಾಗಿ ಕಾದೆನು.
ಕತ್ತಲು ಕಂಡು ಅಮವಾಸ್ಯೆ ಇಂದೆಂದರು ಹಲವರು,
ನನ್ನ ಹಂಗಿಸುತ ನಕ್ಕರು ಕೆಲವರು.
ಕಾಯುವಾ ಸಂಯಮ ಕಳೆದುಕೊಳ್ಳಲಿಲ್ಲ ನಾನು,
ಮೋಡ ಚದುರಿಸಿ ಮಳೆ ತಂದಿತು ಬಾನು.
ಮಳೆ ಸುರಿಯಿತು, ಇಳೆ ತಣಿಯಿತು,
ತುಂಬಿದವು ಹೊಳೆ, ಹಳ್ಳ.
ಪೂರ್ಣ ಚಂದಿರ ಆಗಸದಿ ಹೊಳೆಯುತಿತ್ತು,
ಬದಲಾಯಿತು ಎಲ್ಲ.

-


9 SEP 2021 AT 11:02

ಅವನೆಂದರೆ ನನ್ನೊಳವಿತು ನಾ ಜೀವಂತವಿರಲು
ಅನುಕ್ಷಣ ಮಿಡಿಯುವ ಹೃದಯ😍
ನನ್ನವನಾಗಿ ತನ್ನೊಲುಮೆಯನ್ನೆಲ್ಲಾ
ನನಗೆ ಧಾರೆಯೆರೆಯುವ ನನ್ನಿನಿಯ..!!💛

-