ಮತ್ತೆ ಮತ್ತೆ ನೆನಪಿಸುವ
ನೆನಪಿನ ಅಂಗಳತುಂಬ
ಅವಳದೆ ಕಣ್ಣಿನ ಬಿಂಬ,
ಮತ್ತೆ ಮತ್ತೆ ನೆನೆ ನೆನೆದು
ಮನವು ತೇವ ಗೊಳ್ಳುವುದೇಕೊ
ಈ ಹುಂಬನ ಎದೆಯದ ತುಂಬ..!!-
ಹುಡುಕುತಿರುವೆ ಪದಗಳ ನಿನ್ನ ಹಿಂಬಾಲಿಸಿ,
ಬರಿಗಾಲಿನಲ್ಲಿ ನಿನ್ನ ಕಾಲ್ಬೆರಳುಗಳ ಎಣಿಸುತ,
ಹವ್ಯಾಸಿ ಹಗಲುಗನಸು ಕಾಣುವ ಹುಂಬನಾಗಿ.
ನಿನ್ನ ಮುಗುಳ್ನಗುವ ಚಹರೆಯ ನೋಡುತ
ನೀಲ ನಭದ ಒಂದೆಡೆಯಲ್ಲಿ ತಾರೆ ನಾಚಿದೆ!
ನಿನ್ನ ಮೂಗುತಿಯ ಹೊಳಪದು ಪ್ರಕಾಶಿಸಿ,
ಜಗಲಿಯ ಹಣತೆಯ ಕುಡಿ ಬೆಳಕ ಧರಿಸುತ,
ಹೇಳಿದ ಆಸೆಗಳ ಈಡೇರಿಸು ತನ್ಮಯಳಾಗಿ.
ತೇಲುವ ನಿನ್ನ ಮುಂಗುರುಳ ಸೆಳೆಯುತ
ನೀಲ ನಭದ ಒಂದೆಡೆಯಲ್ಲಿ ತಾರೆ ನಾಚಿದೆ!-
ನನ್ನ ಸರಳತೆಯ ಬಗ್ಗೆ ನಿನಗೆ ಅರಿವಿದೆ
ವಿರಳರಲ್ಲಿ ವಿರಳ ನೀನೆಂಬ ಹೆಮ್ಮೆಯಿದೆ
ಕಾರಿರುಳಲ್ಲಿ ಮಿಣುಕು ದೀಪದಂತೆ ನೀನು
ಬೆಳಕಿನಲ್ಲಿ ನಾಚಿ ನಿಲ್ಲುವ ಹುಂಬ ನಾನು.-
ಚಿಂತೆಗಳ ಸಂತೆಯಲ್ಲಿ ದಣಿದ ಸಂಚಾರಿ ಫಕೀರ ನಾ
ನೋವುಗಳನ್ನೆದುರಿಸುತ್ತಲೇ ಸಾಗುತ್ತಿಹ ಹುಂಬ ನಾ.-
ಪದಗಳ ಹೆಕ್ಕಿ
ತೆಗೆಯುವ
ಸಾಹಸಕ್ಕಿಳಿದಿರುವೆ,,
ನಿನ್ನ ಸಾಲುಗಳಿಗೆ
ಪೈಪೋಟಿ ನೀಡಲು
ಹುಡುಗಿ ,,
ಆದರೂ
ನಿನ್ನ ಕಣ್ಣೋಟದ
ಸೆಳೆತಕ್ಕೆ ಪದಗಳನ್ನೇ
ಮರೆತು ಹೋಗುವೆ ,,
ಸೋತರೂ ಸಾಧಿಸಿದೆ
ಎಂದು ಬೀಗುವ
ಹುಂಬ ಹುಡುಗ
ನಾನು ಗೆಳತಿ ...-
ಆಚರಣೆಗಳು ಅಡಚಣೆಗಳಾಗಿ
ಸೌಹಾರ್ದತೆಯು ಮಣ್ಣುಪಾಲಾಗಿ
ನನ್ನದೇ ಮೇಲು ಎಂಬ ಹುಸಿ ನಂಬಿಕೆ
ನೆಮ್ಮದಿಯ ಮರದ ಬುಡಕ್ಕೆ
ಕೊಡಲಿಯ ಅಲಗಿನಿಂದ ಪರಿಚಯಿಸಿ
ಧರೆಗುರುಳಿದರೂ ಮೀಸೆಯ ತಿರುವಿ
ಗಹಗಹಿಸಿ ಹುಂಬನಂತೆ ನಗುವ
ಮಾನವನು ಮರೆತನೇ ಮಾನವೀಯತೆ?
ನಾಗರಿಕತೆಯ ಕೊನೆಯ ಹಂತವೇ?— % &-
ಆಸೆಗಳೊಂದಿಗೆ
ಅಕಾಡಕ್ಕಿಳಿದಿರುವೆ
ಅವುಗಳ ನೆರವೇರಿಸೋ
ಬರವಸೆಯಲಿ
ನಿನ್ನ ಕಣ್ ನೋಟ
ನನ್ನ ಗಮನ ಸೆಳೆದು
ನನ್ನ ಗುರಿಯಿಂದ
ವಿಚಲಿತವಾಗಿಸಿದೆ
ಬೇಕಂತಲೆ ಸೋಲಿಸಿದೆ ನನ್ನ
ಸೋತ ನನಗೆ
ಗೆದ್ದೆನೆಂಬ ಹೆಮ್ಮೆ
ನಿನ್ನ ಮನಸನ್ನು
ಅದು ಭ್ರಮೆಯೆಂದು
ತಿಳಿದು ಮನಸ್ಸು
ಗೋಗರೆಯುತಿದೆ
ಮೋಸ ಮಾಡಿದೆ ನೀ ನನಗೆ.-
ನೀನಿರುವೆ ನನ್ನೆದೆಯ ತುಂಬಾ..!!
ತುಂಬಾ ಇದೇ ನಿನಗೆ ಜಂಬಾ ..!
ಯಾಕೆಂದ್ರೆ ನೀನು ಏನನ್ನು ಅರಿಯದ ಹುಂಬಾ..!!
-
ಹುಡುಕಿದೆ ಹುಡುಕಿದೆ ನಾ ನಮ್ಮೂರ್ ತುಂಬಾ...
ಕಾಣಿಸದೇ ಕಂಗೆಡಿಸಿದೆ ನಿನಗೆಸ್ಟೆ ಜಂಭ...
ಕನ್ನಡಿಯಲೂ ಕಾಣುತಿದೆ ನನಗೆ ನಿನದೇ ಬಿಂಬ...
ಕುಂತರೂ ನಿಂತರೂ ನಿನ್ನ ಜಪಿಸುವ ನಾನೊಬ್ಬ ಹುಂಬ...-