ಸ್ವಾರ್ಥ ಪರಾಕಾಷ್ಟೆಯಲ್ಲಿ ನಿನ್ನದೆ ವಿಪರೀತ
ನಿಸ್ವಾರ್ಥ ಪಾರಪತ್ಯದಲ್ಲಿ ಎಲ್ಲವೂ ಪರಿಮಿತ!-
ನೋವುಗಳಲ್ಲಿ ತೇಲಿಸಿ ಮನಬಂದಂತೆ ನಾಟಕವಾಡಿಸಿ
ಹಗಲಿರುಳು ದುಡಿದು ದೇಹಕ್ಕೆ ಸುರಪಾನ ಕುಡಿಸಿ
ಗಹಗಹಿಸಿ ನಗುವನು ಸ್ವಾರ್ಥ ಹೊತ್ತ ಮೂಲವಾಸಿ
ಸ್ವಾಭಿಮಾನ ಮರೆತ ಮನುಜನಿಗಿಲ್ಲ ಈ ಖುಷಿಯ ದಿನರಾಶಿ !!-
ಮನುಜನ ಸ್ವಾರ್ಥ
***************
ಅಂಬರದೊಡಲ ಮೇಘದನಿಗಳ ಭಾರ
ಕೊಂಚ ಇಳೆಯೊಳಗೆ ಇಳಿಸಿದರೆ ಬಾನಂಗಳವು ಹಗುರ॥
ಅವನಿಯೊಳಗೆ ಅನ್ನದಾತನ ಜೀವದುಸಿರ ಸಾರ
ಕರಾರುವಕ್ಕಾದ ಅಳತೆಗೋಲಿಲ್ಲದ ಭಾವದನಿಯ ಚದರ॥
ಇಳೆಯೊಡಲ ಹಸಿರುಸಿರ ಜೀವ ವರ್ಷಧಾರೆಯ ಸಿಂಚನ
ಇಲ್ಲದೆ ಬದುಕಿನ ಬವಣೆಯೊಳು ಎಣಗಬೇಕಿದೆ ಕದನದ ಮಜ್ಜನ॥
ಅಳುವಿನುಳಿವಿಗೆ ಸ್ವರ್ಣದ ಲೇಪನದೊಳು ಮನುಜನ ಮೆರಗು
ಅರಿವಿಲ್ಲದೆ ವಿನಾಶದಂಚಿನ ಕಾರಣಕರ್ತ ಬುದ್ಧಿಹೀನನ ಕೊರಗು॥
ಕಾಲನ ಕರೆಗೆ ಮಳೆಯಿಲ್ಲದೆ ಅವನೊಳಗುಂಟಾಗಿದೆ ಕಳವಳ
ಜೀವದುಸಿರ ನಿಲ್ಲಿಸಲೊರಟ ಮನುಜನೆದೆಯೊಳಗೆ ತಳಮಳ॥
ಕತ್ತಲೆಂಬ ಅಜ್ಞಾನದ ರಾಶಿ ಸುರಿಸುತಲಿ ಮಂಕಾಗಿದೆ ಮುಗಿಲು
ನಿಸ್ವಾರ್ಥ ಮನುಜನೊಂದಿಗೆ ಬೆಳಗಬೇಕಿದೆ ಜ್ಞಾನದ ಮಡಿಲು॥
ಕಾತರ ಬೇಸರವಿಲ್ಲದೆ ಬಾಳಬಂಡಿ ದೂಡಿದರಷ್ಟೆ ಬದುಕು ಬಂಗಾರ
ಸ್ವಾರ್ಥದೊಳು ಮುಳುಗೇಳುತಿದ್ದರೆ ಬದುಕೇ ದುಸ್ತರದ ಚಾಮರ॥-
Gd oftrn'n...
ನಗುವಿನೊಂದಿಗೆ ಜನನ ಅಳುವಿನೊಂದಿಗೆ ಮರಣ
ನಡುವಿನಲ್ಲಿ ಸ್ವಲ್ಪ ಜೀವನದ ಹೋರಾಟ ಕೇವಲ ನಮ್ಮ ಸ್ವಾರ್ಥಕ್ಕಾಗಿ....-
ಬೊಗಳಿಕೊಳ್ಳುವ
ನಾಯಿಗಳಿಗೇನು ಬರವಿಲ್ಲ ಬಿಡಿ!
ಅವರ ಬೆನ್ನಿನ ನೇರಕ್ಕೆ
ಅವರದೆಲ್ಲವೂ ಸರಿಯೇ!
ಮತ್ತೊಬ್ಬರ ತಪ್ಪುಗಳ ಹುಡುಕುವುದೆ
ಅವರ ಕಾಯಕವೆ ಆಗಿದೆಯಲ್ಲ.!
ಬೊಗಳುವ ನಾಯಿಗಳು
ಬೊಗಳುತ್ತಲೆ ಇರುವವು.!
ಹಳದಿ ಕಣ್ಣುಳ್ಳುವವರಿಗೆಲ್ಲ
ಜಗವೆಲ್ಲಾ ಹಳದಿಯಾಗಿಯೆ
ಕಾಣುವುದಲ್ಲ
ಪಾಪ!
ಇನ್ನೇನು ತಾನೆ ಮಾಡಿಯಾರು.?-
ಕೇವಲ ನಾವು, ನಮಗಾಗಿ ಪಡೆಯುವುದಲ್ಲ. ಏಕೆಂದರೆ ಅದು 'ಸ್ವಾರ್ಥ' ಎನಿಸುತ್ತದೆ. ನಾವು ಪಡೆದದ್ದನ್ನು ನಾಲ್ಕಾರು ಜನರು ಪಡೆಯುವಂತೆ ಅಥವಾ ಅವರ ಉಪಯೋಗಕ್ಕೆ ಬರುವಂತೆ ಮಾಡುವುದೇ ನಿಜವಾದ ಸಾಧನೆ"
-
ಪ್ರೀತಿಯೆಂಬ ಹೃದಯಕ್ಕೆ
ಸ್ವಾರ್ಥವೆಂಬ ಮುಳ್ಳಿನಿಂದ
ಚುಚ್ಚಿ ಕೊಲೆ ಮಾಡಲಾಗಿದೆ.-
ಬದುಕಲ್ಲಿ ಸ್ವಾರ್ಥ
ಇರಬೇಕು ಆದರೆ
ನಮ್ಮ ಸ್ವಾರ್ಥ
ಯಾವತ್ತು ನಮ್ಮನ್ನು
ದುಷ್ಟರನ್ನಾಗಿ
ಮಾಡುವಂತಿರಬಾರದು
ಇದರಿಂದ ನಮ್ಮ
ಜೀವನವೇ ವಿನಾಶ
ಆಗಲೂಬಹುದು...-
ಗತಿ ಕಾಣಿಸುವೆ ಮಿತಿಯಲ್ಲಿರು
ಅತಿಯಾಗಿ ಆಡದಿರು
ಕಾಡಿಸಿ ನನ್ನ ಕೆರಳಿಸದಿರು
ತಪ್ಪಿಯೂ ನೀನಿಷ್ಟವಾಗಬೇಡ ಅವರಿಗೆ..!!-