QUOTES ON #ಶುಭಮುಂಜಾನೆ

#ಶುಭಮುಂಜಾನೆ quotes

Trending | Latest
15 JAN 2021 AT 10:09

🌸ಶುಭ ಮುಂಜಾನೆ🌸
ಕೆಲವೊಂದು ಸಲ ತೋಳಿನಲ್ಲಿ ಬಲವಿದ್ದರೂ,
ತಟ್ಟೆ ಹಿಡಿದುಕೊಳ್ಳಲಾರದಷ್ಟು ಶಕ್ತಿಹೀನರಾಗಿರುತ್ತೇವೆ,
ಇದು ನಮ್ಮ ದುರ್ಬಲತೆಯ ಪರಿಣಾಮವಲ್ಲವೇ?
ಬಾಹ್ಯ ಬಲಕ್ಕಿಂತ ಅಂತಾರತ್ಮದ ವಿವೇಚನೆ ಹಿಡಿತದಲ್ಲಿರುವುದು ಉತ್ತಮ.

"ದುರ್ಬಲತೆ ಮತ್ತು ಸಬಲತೆ ಸಮತೋಲನ ನಮ್ಮ ವಿಚಾರದಲ್ಲಿರುವುದು"

-


29 AUG 2020 AT 7:07

ಶುಭದಿನ..

ಸ್ಪರ್ಧಿಗಳು ಎಷ್ಟೇ ಜನರಿದ್ದರು ಗೆಲುವೆಂಬುವುದು ಮಾತ್ರ ಒಬ್ಬಂಟಿಯಾಗಿದೆ..

-


22 JUL 2021 AT 8:34

ಶುಭ ಮುಂಜಾನೆ🌞

ಪೂರ್ವ ದಿಶೆಗೆ ಚೆಲ್ಲುತ ಕಾಂತಿಯ
ಹೊನ್ನ ಚಿತ್ತಾರದಿ ರಂಗೇರಿಸುತ
ಮೂಡಿದನೋ ಮೂಡಣದಿ ದಿವಾಕರ..

ನವೀನ ದಿನಕೆ ಸಕಲ ಜೀವಿಗಳ ಬಡಿದೆಬ್ಬಿಸಿ
ತನ್ನ ಪ್ರಖರ ರಶ್ಮಿಗಳನ್ನು ಝಳಪಿಸುತ
ಕಾರ್ಮೋಡಗಳ ಮರೆಯಿಂದ ಪ್ರಸನ್ನನಾದನೋ ಶುಭಕರ..

ಮುಂಜಾವಿಗೆ ನವ್ಯ ಮೆರುಗು ತಂದು
ಹೃನ್ಮನಗಳಿಗೆ ನವಚೈತನ್ಯದ ಚಿಲುಮೆಯಲಿ
ಹೇಳ‌ ಬಂದನೋ ಶುಭೋದಯವ ಪ್ರಭಾಕರ!!!

- ರಂಜಿತ.ಸಿ.ಕನ್ನಡತಿ

-



•••|ಸುಂದರ ಮುಂಜಾನೆಯ ವಂದನೆಗಳು|•••

ಬಾನಂಚಲಿ ಓಡಿ ಬರುವಾ ಸೂರ್ಯ
ಮನಸಲಿ ಪುಟ್ಟಿಸುವ ಬದುಕಿನ ಶೌರ್ಯ
ಧರೆಗೆ ಬೀಳುತಿಹ ನೇಸರನ ಕಿರಣಗಳು
ಮನುಜುನಲಿ ತುಂಬುತಿಹ ಹೊಸ ಹರುಷಗಳು

ಬೆಳ್ಳಂ ಬೆಳಗ್ಗೆ ಮೂಡಿಹನು ನನ್ನ ಭಾಸ್ಕರ
ಭುವಿ ತಾಯಿಯ ನೋಡಲು ಆತುರ
ಮುಂಜಾವಿನಲಿ ಮೊಗ್ಗು ಅರಳಿ ಹೂವಾಗಲು ಕಾರಣನಿವ
ನವ ನವ ಕಾರ್ಯಗಳಿಗೆ ಕೈ ಹಾಕಲು ಪ್ರೇರೆಪಕನಿವ

ಸುಂದರ ಸೊಬಗಿನ ಮುಂಜಾನೆಯಲ್ಲಿ
ನೆನೆಯುವ ಭಗವಂತನ ಏಕಾಂತದಲ್ಲಿ
ಅದುವೆ ಮಾನವನಿಗೆ ಶ್ರೇಯಸ್ಸಿನ ಕಾರ್ಯವದು
ನನ್ನ ಹೊಸ ಕನಸುಗಳ ಜನನದ ಸಮಯವದು

-



ಕೆಂದುಟಿಯಲಿ ಸದಾ
ನಗೆ ಮಲ್ಲಿಗೆಯ ಕಂಪು ಅರಳಿರಲಿ
ನಯನಗಳಲಿ ಸದಾ
ಆನಂದ ಭಾಷ್ಪವು ತುಂಬಿರಲಿ
ಮುದ್ದು ಮೊಗವು ಸದಾ
ಕೆಂದಾವರೆಯಂತೆ ಅರಳುತಿರಲಿ
ಅನವರತ ಸಂತಸದ ಸೌಭಾಗ್ಯವು
ಸದಾ ನಿಮ್ಮದಾಗಿರಲಿ
ಗುರು ರಾಘವೇಂದ್ರಸ್ವಾಮಿಯ ದಯೆ
ಸದಾ ನಿಮಗಿರಲಿ.
- ವಿಜಿ ✍️💞

-


9 JAN 2020 AT 9:49

ಹಿರಿತನವೆಂಬುವುದು ಒಳ್ಳೆಯ ಗುಣಗಳಿಂದ ಲಭಿಸುವುದೇ ಹೊರತು ವಯಸ್ಸಿನಿಂದಲ್ಲ.... !!!!

-



ಮೂಡಣದ
ಮಾರ್ತಾಂಡನ
ಮಹಾಮಸ್ತಕದ
ಮೇಲೊತ್ತು ತರುವೆ
ಮನುಕುಲದ ಒಳಿತಿಗಾಗಿ
ಮಹೋದಯದ ಕೋಟಿಕಿರಣದ
ಮಾರ್ತಾಂಡನ ಚೆಂಡಿನಿಂದ ನಾ
'ಮಹದೇವ'ನಿಗೆ ಮಂಗಳಾರತಿ ಎತ್ತುವೇ
ಮುಂಜಾವಿನಲಿ ಶುಭವಾಗಲಿ ಎಂದು
ಈ ಅರುಣೋದಯದಲಿ,,

-



ಮುಂಜಾನೆ ಚುಮು ಚುಮು ಮಂಜು
ನೀಡುತ್ತಿದೆ ಮನಕೆ ಏನೋ ಮುದ ಇಂದು
ಪ್ರಕೃತಿಯ ಈ ವಿಸ್ಮಯ ಕಣ್ಣ ತುಂಬಿಕೊಂಡು
ಧನ್ಯಳಾಗಿಹೆ ಈ ಭುವಿಯಲಿ
ಮಾನವಜನುಮ ಪಡೆದುಕೊಂಡು.

-



ಮುಂಜಾವಿನ
ಹೊಂಗಿರಣವೆಂದರೆ
ಮುದ್ದು ಮೊಗದಲ್ಲರಳುವ
ಮಂದಸ್ಮಿತೆಯಂತೆ.

-



ಭೂಲೋಕದ ನಿಶೆಗೆ
ಭಂಗಪಡಿಸಿ
ಬಡಿದೋಡಿಸಲು
ಭರವಸೆಯ
ಬಂಗಾರದೊಂಗಿರಣದ
ಬೆಳಕ ಚೆಲ್ಲುವ
ಭಾಸ್ಕರನ
ಬೊಗಸೆಯಲಿ
ಬಾಚಿತರುವ
ಭಕ್ತನಾಗಿರುವೆ
ಈ ಮುಂಜಾವಿನಲಿ
ಶುಭೋದಯ🌅

-