QUOTES ON #ವಿಶ್ವ

#ವಿಶ್ವ quotes

Trending | Latest
24 MAY 2020 AT 11:14

ವೈಕ್ಯೂನ ನೆಚ್ಚಿನ ಎಲ್ಲಾ ಸಹೋದರರಿಗೂ
ವಿಶ್ವ ಸಹೋದರ ದಿನದ ಶುಭಾಶಯಗಳು

ಸಹೋದರತೆಯ ಬಂಧ
ಸಾಮರಸ್ಯದೊಳಗಿನ ಗಂಧ
ಸಹಬಾಳ್ವೆಗೆ ಅನುರಾಗದ ಗೆಲವು
ಸರಿಸಮದೊಂದಿಗೆ ಸಾಗುವ ಒಲುವು
ಸರಿಗಮದ ಸಪ್ತಸ್ವರದ ಕೀರ್ತಿ
ಸಂಬಂಧಗಳ ಬೆಳೆಸುವ ಅರ್ತಿ
ಸಮಾಕ್ಷಮದಿ ಬೆಸೆವ ಹಂದರ
ಸಂಗಮದೊಳಗೆ ಹೆಚ್ಚಿದೆ ಪ್ರೀತಿಯಾಗರ
ಸಂತಸದಿ ನಲಿಯುತ ಸಡಗರದಿ ಬೆರೆಯಿರಿ
ಸಂಭ್ರಮದಿ ತಣಿದು ಸದಾ ಖುಷಿಯಾಗಿರಿ
ಸಲಿಲಿದಂತೆ ಶುದ್ದ ಸ್ವಚ್ಛ ಮನದೊಳು
ಸಾಕಾರ ಮೂರ್ತಿಗಳಾಗಿ ಬೆಳೆಯಿರಿ
ಸನ್ಮಾರ್ಗ ಲಭಿಸಲಿ ಸದಾ ಕ್ರಿಯಾಶೀಲರಾಗಿರಿ
ಸಂಪೂರ್ಣತೆಯ ಬದುಕು ನಿಮ್ಮದಾಗಲೆಂದು
ಸವಿನಯದಿಂದಲೆ ಅಭಿನಂದಿಸುವೆ...

-


22 MAR 2020 AT 8:57

ಉಳಿಸೋಣ ನೀರು
ಸಂರಕ್ಷಿಸೋಣ ಜಲ
ತಪ್ಪಿಸೋಣ ಹಾಹಾಕಾರ
ಬೆಳೆಸೋಣ ನೀರಿನ ಮಮಕಾರ.!
(Read Caption)
👇🏾👇🏾👇🏾👇🏾👇🏾👇🏾

-


20 JUL 2020 AT 7:40

ಶುಭ ಸೋಮವಾರ..

ಖಾಲಿಯಾಗಿದೆ ಮನೆಯ ಅಂಗಳವು
ಮುಚ್ಚಿದೆ ಮನೆಯ ಬಾಗಿಲು
ಸುಳಿವಿಲ್ಲದೆ ಮೂಲೆ ಸೇರಿವೆ ಹಿತ್ತಾಳೆಯ ಪಾತ್ರಗಳು
ಎಲ್ಲಿಹೇ ನೀನು ದರ್ಪ ತೋರಿಸುತ್ತಿದ್ದ
ಓ ಮನುಜ ಎಲ್ಲವೂ ಕ್ಷಣಿಕ ನೀ ಇರುವಲ್ಲಿ .. 🦋🦋

-


29 APR 2020 AT 16:26



ಲಯಬದ್ಧವಾಗಿ ಸಂಗೀತಕ್ಕೆ ದೇಹ ಚಲಿಸುವುದೇ ನೃತ್ಯ
ಈ ಕಲೆ ಒಲಿದವರು ಮಾಡಿರುವರು ಪುಣ್ಯ
ಋಗ್ವೇದಕ್ಕಿಂತಲೂ ಹಳೆದು ಇದರ ಇತಿಹಾಸವಿದು ಸತ್ಯ
ಇದರ ಪ್ರದರ್ಶನ ನೋಡುಗರಿಗೆ
ನೀಡುವುದು ಮನರಂಜನೆ ನಿತ್ಯ

ನಾಟ್ಯಕ್ಕೆ ಇದೇ ತನ್ನದೇ ಆದ ವಿಶಿಷ್ಟವಾದ ಸೂತ್ರ
ಇದನ್ನು ಒಲಿಸಿಕೊಳ್ಳಲು ಮಾಡಬೇಕಿಲ್ಲ ಯಾವುದೇ ತಂತ್ರ
ಇದು ಹೊಂದಿರುವ ಅನೇಕ ಪ್ರಕಾರಗಳು ರಂಜನೀಯ
ಅಭಿಮಾನಿಗಳ ಕಣ್ಮನ ತಣಿಸುವುದು
ಇದು ಮನರಂಜನೀಯ

ವೇದಿಕೆಗಳಿಗಷ್ಟೇ ಸೀಮಿತವಾಗಿಲ್ಲ ಇದರ ಪ್ರದರ್ಶನ
ರೇಖಾವಿನ್ಯಾಸ,ಶಿಲ್ಪಕಲೆ,ಕವಿಸಂಗಮಗಳಲ್ಲಿ
ಇದೇ ಇದಕ್ಕೆ ವಿಶಿಷ್ಟ ಸ್ಥಾನ
ನೃತ್ಯ ಕಲಾವಿದರಿಗೆ ಮೀಸಲು ನಿತ್ಯವೂ ಅಭಿಮಾನದ ಸನ್ಮಾನ
ಇದರಿಂದಲೇ ಹಲವು ಕಲಾವಿದರಿಗೆ
ಸಿಗುವುದು ಜೀವನದ ಅನುಸಂಧಾನ

-


19 AUG 2020 AT 11:47

ವಿಶ್ವ ಛಾಯಾಗ್ರಹಣ
ದಿನದ ಶುಭಾಶಯಗಳು

-



ಹೆಣ್ಣಿನ ಮನಸ್ಸು ಹೂವಿನಂತೆ
ಹೆಣ್ಣೆಂದರೆ ತಾಳ್ಮೆಯ ದೇವತೆ
ಹೆಣ್ಣೆಂದರೆ ಎಲ್ಲರನ್ನೂ
ಸಲಹುವ ಮಹಾಮಾತೆ
ಹೆಣ್ಣನ್ನು ಗೌರವಿಸಲು
ಈ ದಿನವೇ ಶ್ರೇಷ್ಠತೆ ಹೆಣ್ಣೆಂದರೆ
ಭೂತಾಯಿಯಂತೆ
ಅವಳನ್ನು ಎಂದಿಗೂ ಗೌರವಿಸಿ
ಅವಳ ಮನ ನೋಯಿಸದಿರಿ
ಅವಳನ್ನು ಎಂದಿಗೂ ಕಡೆಗಣಿಸದಿರಿ
ಅವಳ ಕಣ್ಣಲ್ಲಿ ಎಂದಿಗೂ
ಕಣ್ಣೀರು ಹಾಕಿಸದಿರಿ ಕೇವಲ
ಹೇಳುವ ಮಾತಿಗಷ್ಟೇ ಮೀಸಲಾಗಿಸದೆ
ಜೀವನದಲ್ಲಿ ಅಳವಡಿಸಿಕೊಳ್ಳಿ.

-


15 APR 2020 AT 9:37

ಬಿಡಿಸಿದ ಚಿತ್ರಗಳಲ್ಲಿ
ಯಾವ ಚಿತ್ರವೂ ಉಳಿದಿಲ್ಲ
ಮನದಲ್ಲಿ ನಿನ್ನ ಚಿತ್ರವೂ
ಅಚ್ಚಾಗಿ ಬಿಟ್ಟಿದೆ ಬಿಟ್ಟು
ಹೊಗುತಿಲ್ಲ ಏಕೊ ಎನೊ

-


27 MAR 2020 AT 14:25

ಹೇ ಕರೋನ ಮುಗಿಸದಿದ್ದರೆ ನಿನ್ನ ಜೀವನ
ಬೆಂಬಿಡದು ನಮಗೆಲ್ಲ ಅಕಾಲಿಕ ಮರಣ

-


27 MAR 2020 AT 14:20

ಲಕ್ಷ್ಮಣ ರೇಖೆ
ನಮ್ಮನೆ ಬಾಗಿಲು,
ಕರೋನ ನಿನ್ನ
ಕಥೆ ಮುಗಿಸಲು.

-


27 MAR 2020 AT 14:16

ಮುಗಿಯಲಿ ನಿನ್ನ ಕಥೆ ಕರೋನ
ಅದಕ್ಕೆ ನಾವು ಮನೆಯಲ್ಲಿರೋಣ

-