ಶಾಂತಿ ನೆಮ್ಮದಿ ಎಂಬ ಹೆಸರಿನಲ್ಲಿ ಮನೆಯ ಒಂದು ಮೂಲೆಗಾಗಿ ವಾಸ್ತು ಹುಡುಕುವ ಜನರು ತಮ್ಮನದ
ಶಾಂತಿಗಾಗಿ ಎಂದೂ ಕೋಪ ತಾಪಗಳ ನಿಗ್ರಹಿಸಿ ವಾಸ್ತು ಬದಲಾಯಿಸಲಾರರು.-
~ಸುಧೋಕ್ತಿ~
ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರಗಳು
ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಂತೆ ವಿಜ್ಞಾನದ ಶಾಖೆಗಳೇ...
ಅದು ಕೂಡ ನಮ್ಮ ಜೀವನವನ್ನು ಉಜ್ಜೀವನಗೊಳಿಸುವವೇ..
ಯಾವುದು ಮಿಷನರಿಗಳ ಮತಾಂತರಕ್ಕೆ ತೊಡಕಾಯಿತೋ ಅದನ್ನು ಮೂಢನಂಬಿಕೆ ಎಂದು
ಪಕ್ಕಕ್ಕೆ ಸರಿಸಿದರು ನಮ್ಮಲ್ಲಿಯ ಬುದ್ದಿಜೀವಿಗಳು
ಅವರ ಪರ ಬೊಬ್ಬೆಹೊಡೆದರು...
ಮೋಸ ಮಾಡುವವರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ
ಆಯ್ಕೆ ನಮ್ಮದು...-
ರೂಪು ರೇಷಗಳ ಮಧ್ಯ ವಾಸ್ತು ದೋಷ ಇದ್ದಂತೆ
ಬದಲಾವಣೆ, ಬಹುಬೇಗ ಆಗುವಂತದ್ದಲ್ಲ.
ಸತತ ಪ್ರಯತ್ನ ಮಾತ್ರ ನಮ್ಮದು.........-
ಸುತ್ತಲೂ ಹಚ್ಚ ಹಸಿರಿನ ಹಂದರ...
ಆ ಬಳ್ಳಿ ಗಿಡಕೆನ್ನುವರು
ಕೆಲವರು ವಾಸ್ತು ಗಿಡವೆಂದು
ಇನ್ನೂ ಹಲವರು ಉಸುರುವರು
ಅಂಗಡಿಯ ಮುಂಬಾಗಿಲಿಗಿಡಿರೆಂದು...
ಸುಂದರ ಆಕಾರದಿಂ
ಬೆಳೆವ ನಿನ್ನ ಪರಿಯ ನಾನೆಂತು ವರ್ಣಿಸಲಿ??
ಬಿಳಿಯ ಗೋಡೆಯ ಪಕ್ಕಕ್ಕಿಂದು
ಮಂಜಿನ ಹನಿಯ ನರ್ತನ...
ಅಪರೂಪದ ಬಳ್ಳಿ ಗಿಡಕ್ಕಿಂದು
ಬೆಳಗಿನ ಇಬ್ಬನಿಯೇ ದರ್ಪಣ...
ಹಿರಿಯರು ಹೇಳಿದರು..
ಬದುಕೊಂದು ಗಿಡದಂತೆ
ಬಂಧುವೆಂಬ ನೀರನ್ನು
ಗೊಬ್ಬರವೆಂಬ ನೆಮ್ಮದಿಯನ್ನು
ಬಿಸಿಲೆಂಬ ಶಾಂತಿಯನ್ನು
ವಾತಾವರಣ ಎಂಬ ಮನೆಮನವನ್ನು
ಅವಶ್ಯಕತೆಗೆ ತಕ್ಕಂತೆ ಉಣಬಡಿಸಿದರೆ
ಉತ್ತಮ ಜೀವನ ಪಾಠದ ಜೊತೆ
ಉತ್ತಮ ಗಿಡ ಬೆಳೆಸಿದಂತೆ ಎಂದು....
— % &-