ಹಸಿರೆಲೆಯ ನಡುವಿನಲಿ
ಹೂವೊಂದು
ಸದ್ದಿಲ್ಲದೇ
ಎಳೆ ಬಿಸಿಲಿನ ತಾಪಕ್ಕೆ
ಇಳೆಯ ಮಡಿಲಲಿ
ಜಗದ ಚಿಂತೆ ತೊರೆದು
ಅರಳಿರೆ....
ಹೂವ ಪರಿಮಳವ
ಕದ್ದೊಯ್ದ ತಂಗಾಳಿಯು
ಹೂವರಳಿದ ಸುದ್ದಿಯ
ಮನೆಮಂದಿಗೆಲ್ಲ ಅರುಹಿರಲು....
ಹೂವ ಪ್ರೇಮಿಯು ಬೆಕ್ಕಸ
ಬೆರಗಾಗಿ ನೋಡಿರೆ
ಸುಮಧುರ ಪುಷ್ಪವನ್ನು
ಮನ ತಿಳಿಸಿದಂತೆ
ಫೋನಿನಲ್ಲಿ ಕ್ಲಿಕ್ಕಿಸಿತು
ಆ ಸೌಂದರ್ಯದ ಪೋನಾ ಹೂವನ್ನು
ಆ ಮುದ್ದಾದ ಕುಸುಮವ
ಕೊಂಡೊಯ್ದ ಜಂಗಮ ವಾಣಿಯು
ಪಸರಿಸಿತು ಊರಿಗೆಲ್ಲ
ಅದರ ಗಮವನ್ನು ಅದರ ಚಂದವನ್ನು😍
- Manjusha bhat
-
"ಸ"- ಕಾಗುಣಿತ ಕವಿತೆ... ಹೊಸ ಪ್ರಯತ್ನ🤭
ಸ ರಳವಾಗಿ
ಸಾ ವಿರಾರು ಸಾಲುಗಳನ್ನು
ಸಿ ಹಿಸಿಹಿಯಾಗಿ
ಸೀ ಕರಣೆಯಂತೆ ಜೋಡಿಸಿಟ್ಟಿರುವೆ
ಸೃ ಜನಾತ್ಮಕ ಲೇಖನಗಳ ಭಕ್ಷ್ಯವಿದು ...
ಸು ಮಧುರವಾದ ಭಾವಗಳ ಜೊತೆ
ಸೂ ಜಿಮಲ್ಲಿಗೆಯ ಒಲವ ಸುವಾಸನೆ ಬೆರೆಸಿ
ಸೆ ಳೆಯುವ ಪದಗಳಾಗಿ
ಸೇ ರಿಸಿಟ್ಟಿರುವೆ
ಸೈ ಎಂಬ ನಿಮ್ಮ ಉದ್ಗಾರದ ಜೊತೆಗೆ
ಸೊ ಗಸಾದ ನಿಮ್ಮ ಪ್ರತಿಕ್ರಿಯೆಯೊಂದನ್ನೇ ಆಶಿಸುವೆ
ಸೋ ನೆಮಳೆಯಂತೆ ಈ ಕವಿತೆಯು ಹಿತ ಕೊಡುತಿರೆ ಎನಗೆ
ಸೌ ಭಾಗ್ಯವಿದು ಜೀವನದಿ
ಸಂ ತೃಪ್ತಿಯ ಭಾವ ಒಡಗೂಡಿರೆ ಸಹಕಾರ ಸಮ್ಮತಿಯ ನಡುವೆ ಸಂತಸದಿ ಬೇಡುತಿದೆ ಈ ಎನ್ನ ಪುಟ್ಟ
ಸಃ ಹೃದಯ....
— % &-
ಬಾಳೆಂಬ ನೌಕೆಯಲಿ
ಎಲ್ಲೋ ಇದ್ದ ನಮ್ಮನ್ನು
ಜಂಟಿಯಾಗಿಸಿದ ದಿನವಿಂದು...
ಎಲ್ಲರೊಳಗೊಂದಾಗಿ
ನಮ್ಮದೊಂದು ಬಂಧವೆಂದು
ಬೆರೆತ ಸುಧಿನವಿಂದು...
ಮೊದಲ ವಾರ್ಷಿಕೋತ್ಸವದ ಈ
ದಿನದಲಿ
ಇಬ್ಬರೂ ಸಲ್ಲಿಸುವೆವು
ಎಲ್ಲರಿಗೂ ಮನದಾಳದಿಂ
ವಂದನೆಗಳನ್ನು....
ಹೇಳುವೆವು ಒಂದಾಗಿ
ಒಕ್ಕೊರಲಿನಿಂದ ಸೇರಿಸಿದ
ಎಲ್ಲರಿಗೂ
ಧನ್ಯವಾದಗಳನ್ನು....
ಜೊತೆಗೆ ನಾ ಹೇಳುವೆ
ಪಿಸುದನಿಯಲ್ಲಿ
ಒಲುಮೆಯ ಜೊತೆಗಾರನಿಗೆ
ನಲ್ಮೆಯ ಶುಭಾಶಯಗಳನ್ನು
Manjusha bhat
— % &-
ಸುತ್ತಲೂ ಹಚ್ಚ ಹಸಿರಿನ ಹಂದರ...
ಆ ಬಳ್ಳಿ ಗಿಡಕೆನ್ನುವರು
ಕೆಲವರು ವಾಸ್ತು ಗಿಡವೆಂದು
ಇನ್ನೂ ಹಲವರು ಉಸುರುವರು
ಅಂಗಡಿಯ ಮುಂಬಾಗಿಲಿಗಿಡಿರೆಂದು...
ಸುಂದರ ಆಕಾರದಿಂ
ಬೆಳೆವ ನಿನ್ನ ಪರಿಯ ನಾನೆಂತು ವರ್ಣಿಸಲಿ??
ಬಿಳಿಯ ಗೋಡೆಯ ಪಕ್ಕಕ್ಕಿಂದು
ಮಂಜಿನ ಹನಿಯ ನರ್ತನ...
ಅಪರೂಪದ ಬಳ್ಳಿ ಗಿಡಕ್ಕಿಂದು
ಬೆಳಗಿನ ಇಬ್ಬನಿಯೇ ದರ್ಪಣ...
ಹಿರಿಯರು ಹೇಳಿದರು..
ಬದುಕೊಂದು ಗಿಡದಂತೆ
ಬಂಧುವೆಂಬ ನೀರನ್ನು
ಗೊಬ್ಬರವೆಂಬ ನೆಮ್ಮದಿಯನ್ನು
ಬಿಸಿಲೆಂಬ ಶಾಂತಿಯನ್ನು
ವಾತಾವರಣ ಎಂಬ ಮನೆಮನವನ್ನು
ಅವಶ್ಯಕತೆಗೆ ತಕ್ಕಂತೆ ಉಣಬಡಿಸಿದರೆ
ಉತ್ತಮ ಜೀವನ ಪಾಠದ ಜೊತೆ
ಉತ್ತಮ ಗಿಡ ಬೆಳೆಸಿದಂತೆ ಎಂದು....
— % &-
ನನಗೆ ತೋಚಿದ್ದು
ನಿಮ್ಮ ಅಭಿಪ್ರಾಯ ತಿಳಿಸಿ...
ಜೀವನ ಎಂಬುದು
ಸಿಹಿಯ ಜೊತೆ ಸೇರಿದ ಉಪ್ಪುನೀರಿನ
ಮಿಶ್ರಿತ ಸರೋವರ ಇದ್ದಂತೆ...
ಜನನ ಎಂಬ ದಡದಿಂದ
ಮರಣ ಎಂಬ ದಡದವರೆಗಿನ ಸುದೀರ್ಘ ಪಯಣ ಇದು...
ಈ ಸರೋವರ ದಾಟುವಾಗ
ಮದ್ಯದಲ್ಲಿ ಮುಳುಗಿ ಸತ್ತರೆ!!!!
ಅದು ಆತ್ಮಹತ್ಯೆ ಮಾಡಿಕೊಂಡಂತೆ...
ಏನೇ ತೊಡಕುಗಳು ಎದುರಾದರೂ
ಹೆದರದೇ ಸಾಧಿಸಿ
ಈಜಿ ದಡ ಸೇರಿದರೆ
ಸಂಪೂರ್ಣ ಯಶಸ್ವಿಯಾಗಿ ಜೀವನ ಸಾಗಿಸಿದಂತೆ....
— % &-
ಸುಂದರ ಸೊಬಗಿನ
ವಿಸ್ಮಯ ಪ್ರಕೃತಿಯೊಳು
ಹಸಿರ ಮೈಸಿರಿಯ ಹೊದ್ದು
ಜೀವಿಸುವ ಜೀವಿ ನೀನು...
ಕಾಣಲೇಷ್ಟು ಚಂದ ನೋಡ!!
ಈ ಕಣ್ಣಿಗೆ....
ಆ ಹಸಿರಿಗೆ ಉಸಿರ
ನೀಡುತಿರುವ ಚುಕ್ಕಿ ನೀನು...-
ತುಂಬಿ ತುಳುಕುತ್ತಿರುವ
ಕಾನನದ ಬಣ್ಣದಲಿ
ನಗುತ್ತಾ ನಿನ್ನದೇ ಲೋಕದಲಿ
ಮೆರೆಯುತ್ತಿರುವ ನಿನಗೆ
ನಾನೇನು ಕವಿತೆ ರಚಿಸಲಿ??
ಹಸಿರ ತಪ್ಪಲಿನಲ್ಲಿ
ಹನಿಯ ನರ್ತನದ ಜೊತೆಗೆ
ಜೀವ ಉಳಿಸಿಕೊಳ್ಳಲು
ಆಹಾರ ಹುಡುಕುವ
ನಿನ್ನ ಪರಿಯ ನಾನೆಂತು ವರ್ಣಿಸಲಿ??
ಅಪರೂಪದ ಬಳ್ಳಿಯಂತಿರುವ
ಎಲೆಯ ಮೇಲಿನ
ನಿನ್ನ ಕುಣಿತವ
ಹಾಡುವ ಆಸೆ ಮನದಲ್ಲಿ....
ಆದರೆ....
ನಿನ್ನ ಮುಂದೆ ನಾನಿಂದು
ತೃಣ
ಎಂಬ ಭಾವನೆಯ ಹೇಗೆ ತಾನೇ ಹೊರಹಾಕಲಿ???
-
ನಡೆದಳು ಜೀವನದಿ
ಉತ್ಸಾಹದ ಕಿರಣದಲಿ
ಸಾಧಿಸುವ ಭರವಸೆಯೊಂದಿಗೆ
ಮುಂದಿರುವ ಗುರಿಯೆಡೆಗೆ
ಹಿಂದಿರುವ ಛಲದೊಂದಿಗೆ
ನಡೆದಳು ಸಂಕೋಲೆಗಳ
ದಾಟಿ ಮುಂದೆ....
ಬೆಂಬಲವಿದ್ದರೆ ಖುಷಿ ಪಡುವಳು
ಇಲ್ಲದಿದ್ದರೆ ಸಾಧಿಸಿ ತೋರಿಸುವಳು
ಮುಂದಿಟ್ಟ ಹೆಜ್ಜೆಯ ಹಿಂದಿಡದ
ಸಾಧಕಿ ಅವಳು...
ಸರಳತೆಯ ಸೋದರತ್ತೆ ಅವಳು
ನಗುಮೊಗದಿ ಎಲ್ಲ ತಿಳಿಸಿ ಹೇಳುವಳು
ಉತ್ಸಾಹದ ಹೊನಲವಳು
ಪ್ರೇರಣೆಗೆ ಗುರು ಅವಳು...-
🙄 ಹೆತ್ತವಳ ಪದಗಳಲಿ
ಸೆರೆ ಹಿಡಿಯಲು ಯತ್ನಿಸಿದಾಗಲೆಲ್ಲಾ
ಲೇಖನಿಯ ಜೊತೆಗೆ ಮಡಿಚಿದ ಕಾಗದವು
ನನಗೊಂದು
ನಾಮಕರಣವ ಮಾಡಿತ್ತು
"ಶತಮೂರ್ಖ"ನೆಂದು...-
ಅವನೊಂದು ಕೌತುಕದ ಗರ್ಭ
ಎಷ್ಟೇ ಅರಿತರೂ ನಿಗೂಢವಾಗೆ
ಉಳಿವ ದೇವ ಮಂದಿರವದು ಗರ್ಭಗುಡಿಯದು....
ಪ್ರತಿ ಜೀವಜಂತುಗಳು ಕೂಡ
ಅಲ್ಲಿ ಕುಳಿತು ಕಲಿತು
ಜೀವನದ ಅರ್ಥ ಕಂಡು
ಹೋಗುವ ವಿಧ್ಯಾರ್ಥಿಗಳು...
ಆದರೆ ಅದನ್ನರಿಯದೆ ಕೆಲವರು
ತಾವೇ ದೇವಗುಡಿಯಲ್ಲಿ ನೆಲೆಸಲು
ವ್ಯರ್ಥ ಶಕ್ತಿ ಹಾಕುವರು
ಅವನ ಮೀರಿ ಸ್ವಾಮಿಯಾಗ ಬಯಸುವರು
ಅಂತಹ ಒಂದು ವಿಭಿನ್ನ ಕಥೆಯ ಸರಮಾಲೆಯೇ
" ವಾಸವಿ "
-