QUOTES ON #ಮಹಾಭಾರತ

#ಮಹಾಭಾರತ quotes

Trending | Latest
15 MAY 2020 AT 8:49

ನಿನ್ನ ನಡಿಗೆಯೆ ಸಿಂಹನಡಿಗೆ
ನಿನ್ನ ಗಾಂಭೀರ್ಯ ನಿನ್ನ ಗತ್ತು,
ನಿನ್ನ ಹೆಸರಿಗೆ ಅಮೃತ ಕಳಶ
ನಿನ್ನ ವ್ಯಕ್ತಿತ್ವವೇ ಆಜಾನುಬಾಹು
ನೀ ರಾಜನಾಗಿ ಅಧಿಕಾರ
ನಡೆಸಬಹುದಾಗಿತ್ತು
ಆದರೆ ಕೆಲವು ಕಡೆ ನೀ ಸೂತ್ರದ
ಗೊಂಬೆ ಆಗಿದ್ದಂತು ನಿಜ
ಅನ್ಯಾಯವ ಮೆಟ್ಟಿ ನಿಲ್ಲೊದರಲ್ಲಿ
ನೀ ಸಿಂಹ ಸ್ವಪ್ನವಾದೆ
ನ್ಯಾಯ ನೀಡೋದರಲ್ಲಿ ನೀ
ನ್ಯಾಯಾಧೀಶನಿಗಿಂತಲು ಒಂದು
ಕೈ ಮೇಲೆ ಮಾಹಿತಾತ್ಮಾ ಭೀಷ್ಮ

-




ತುಂಬಿರುವ ಸಭೆಯ ಮುಂದೆ
ತಲೆಬಾಗಿದೆ ಧರ್ಮದ ಜ್ಯೋತಿ
ಅವಮಾನ ಅಪಮಾನಗಳಿಂದ
ಪಾಪದ ಕೊಡ ತುಂಬಿ ತುಳುಕಿದೆ
ಅಧರ್ಮದ ಖ್ಯಾತಿ

ಒಡಲೊಳಗೆ ಬೆಂಕಿ ದಹಿಸುತಿದೆ
ನೋಡುಗರ ನೋಟವ ಸುಡುವಂತೆ
ಕಾಳ್ಗಿಚ್ಚಿನಂತೆ ಹೊತ್ತಿ ಉರಿಸಬೇಕಿದೆ
ಅಧರ್ಮದ ನೀತಿ

ಕೇಳುವವರಿಲ್ಲ ಹೇಳುವವರಿಲ್ಲ
ನೋವಿನ ಮಡಿಲಲಿ ಮಲಗಿದೆ
ದ್ಯೂತದ ನೆಪದಲ್ಲಿ ಬರೆದಿರುವ
ಗುಲಾಮರ ರೀತಿ...
✍Thilaka kulal











-


27 JUN 2020 AT 12:27

ಅಗ್ನಿಕನ್ಯೆಯಾದ ನೀನು
ಅಗ್ನಿಯಷ್ಟೆ ಪವಿತ್ರಳು
ಆದರೂ ನಿನಗೆ ಅಪವಾದ
ತಪ್ಪಲಿಲ್ಲ ಅಲ್ಲಿ
ಯಾರದ್ದೋ ದ್ವೇಷ ಸಾಧನೆಗೆ
ನಿನ್ನ ಜನನವಾಯಿತು
ಇನ್ನಾರದ್ದೋ ಧರ್ಮಕ್ಕೆ
ನಿನ್ನ ಮುನ್ನುಡಿಯಾಯಿತು
ನಿನ್ನ ಒಂದು ಕಣ್ಣೀರ ಬಿಂದುವೇ
ವಿನಾಶಕ್ಕೆ ಕಾರಣವಾಯಿತು

-


24 MAY 2020 AT 17:20

ಈ ಕಥೆ ಸಂಗ್ರಹವು
ವಿಶ್ವದ ಕಲ್ಯಾಣವು
ಧರ್ಮ ಅಧರ್ಮ ಆದಿ ಅನಂತ
ಸತ್ಯ ಅಸತ್ಯ ದ್ವೇಷಗಳ ಅಂತ್ಯ
ಸ್ವಾರ್ಥದ ಪರಮಾರ್ಥದ ಕಥೆಯಿದು
ಶಕ್ತಿಯಿದು ಭಕ್ತಿಯಿದು
ಜನ್ಮಗಳ ಮುಕ್ತಿಯಿದು
ಜೀವನದ ಸಂಪೂರ್ಣ ಸಾರವಿದು
ಯುಗ ಯುಗದ ಕಣ ಕಣದಿ
ಸೃಷ್ಟಿಯ ದರ್ಪಣದಿ
ವೇದಗಳ ಪಾಠ ಅಪಾರವಿದು
ಧರ್ಮದ ಚರಿತ್ರೆಯಿದು
ದೇವರ ಭಾಷೆಯಿದು
ಸಾಧಕರ ಇತಿಹಾಸದ ಪ್ರಮಾಣವಿದು
ಕೃಷ್ಣರ ಮಹಿಮೆಯಿದು
ಗೀತೆಯ ಗರಿಮೆಯಿದು
ಗ್ರಂಥಗಳ ಗ್ರಂಥವಿದು ಶ್ರೇಷ್ಟವು...

-


18 JUL 2020 AT 11:06

ಹಸ್ತಿನಾಪುರದ ಅಧಿಪತಿ
ಕುರುಕುಲದ ಮುಕುಟ
ಗಾಂಧಾರಿಯ ನಂದನ
ಸುಯೋಧನ ಸುಯೋಧನ

ಸೋಲರಿತರೂ ಸೆಣಸಾಟ
ಬಿಡದೆ ಮುನ್ನುಗ್ಗಿದ ಛಲಗಾರ
ಅಸಮಾನತೆಯ ಬದಿಗೊತ್ತಿ
ಅಪ್ರತಿಮ ಸ್ನೇಹವ ಮೆರೆದ ಸ್ನೇಹಿತ

ಕಪಟದ ಆಟದ ನಡುವೆ ಅವನೊಂದು
ಉರುಳುವ ಸೂತ್ರದ ದಾಳದಂತೆ
‌ಆಡಿಸುವವರು ಅವರಿವರಾದರೂ
ನೀಚತನದ ಕಿರೀಟ ಮಾತ್ರ ಅವನಿಗೆ

ಗರ್ವ ಪರ್ವತದ ಜಲ
ಧರ್ಮಾದರ್ಮದ ಸಮರ
ಪರಾಕ್ರಮದ ಪರದೆಯ
ನೋಡಿ ತಲೆದೂಗಿದ ಶ್ರೀಕೃಷ್ಣ

(Read caption)

-


29 DEC 2019 AT 8:38

ಮಹಾ ಕದನದಲ್ಲಿ...
~ ~ ~ ~ ~ ~ ~ ~ ~
ದಾನ ಸೋತದ್ದು,
ಧರ್ಮ ಗೆದ್ದದ್ದು.
(ಕಂಡದ್ದು ಗೆದ್ದ ಧರ್ಮವಷ್ಟೆ. ಸೋತ ದಾನ ಪರಿಗಣನೆಗೆ ಬರಲೆ ಇಲ್ಲ)

-


25 MAR 2021 AT 7:25

ಕಲಿಯುಗ is combination of ಕರುಣೆ and ಕ್ರೂರತ್ವ
ವ್ಯಕ್ತಿತ್ವದಲ್ಲಿ ಯಾವ್ದು dominant ಆಗಿರುತ್ತೋ
Based on that ವ್ಯಕ್ತಿಯಲ್ಲಿ ರಾಮ ರಾವಣರು ಹುಟ್ತಾರೆ.....

-


27 JAN 2021 AT 10:59

ಚಿತೆಯಲ್ಲಿ ದಹಿಸಿದ್ದು
ಅವರೀರ್ವರಷ್ಟೇ ಅಲ್ಲ
ಇವಳೂ ಕೂಡ,
ಸಹಗಮನ ಅವಳಷ್ಟೇ
ಅಲ್ಲ, ಬಾಹ್ಯಕ್ಕೆ
ಗಟ್ಟಿಗಿತ್ತಿಯಂತಿದ್ದು
ಒಳಗೊಳಗೆ ಉರಿದವಳು..
#ಕುಂತಿ

-


12 OCT 2019 AT 11:54

ಮಹಾಭಾರತ ಮತ್ತು ರಾಮಾಯಣದಂತಹ
ಮಹಾ ಯುದ್ಧಗಳು ಹೆಣ್ಣಿನಿಂದಾಗಿ ನಡೆದವು
ಎಂದು ಹೇಳುವವರು, ಆ ಯುದ್ಧಗಳ ಹಿಂದೆ
ಗಂಡಿನ ನೀಚತನದ ದುಷ್ಟ ಬುದ್ಧಿಯು ಕೆಲಸ
ಮಾಡಿತ್ತು ಎಂದು ಹೇಳಲು ಮರೆಯುತ್ತಾರೆ..

-



ವ್ಯಕ್ತಿ ಅದೆಷ್ಟೇ ಜ್ಞಾನ ಮತ್ತು
ಸಾಮರ್ಥ್ಯವನ್ನು ಹೊಂದಿದ್ದರು
ಕೂಡಾ ಜಗತ್ತಿನ ಮೇಲೆ ಆತನಿಗೆ
ಪ್ರೇಮ ಇಲ್ಲದೇ ಹೋದರೆ ಆತ
ಎಂದಿಗೂ ಶ್ರೇಷ್ಠ ಎನ್ನಿಸಿಕೊಳ್ಳಲಾರ..

-