QUOTES ON #ಮಣ್ಣು

#ಮಣ್ಣು quotes

Trending | Latest

ದಾನವ ಮಾಡಿ
ಮಾಡಿನಿಯೆಂದು ಬೀಗಬೇಡ
ಮಾಡಿದ ದಾನವು
ಮಣ್ಣುಪಾಲಾದೀತು...

-


20 MAY 2020 AT 8:58

ಜಗವೆಲ್ಲ ಮೋಹ ಮಾಯೆ
ಕುರುಡು ಕಣ್ಣು,ಬರಡು ಮನಸು
ಹುಟ್ಟುತ್ತಲೇ ಸಾಯುವ ಭಾವನೆ
ಇದ್ದದ್ದನ್ನು ಬಿಟ್ಟು ಇಲ್ಲದ್ದರ ಬಗ್ಗೆ ಯೋಚನೆ
ಪ್ರೇಮ,ಕರುಣೆ,ವಾತ್ಸಲ್ಯ,ಮಾನವೀಯತೆ
ಇವೆಲ್ಲದರ ಮೇಲೆ ಹಿಡಿ ಮಣ್ಣು ಸುರಿದಂತೆ
ಹೊನ್ನು ಹೊಟ್ಟೆ ತುಂಬಿಸಿ,ಆಸೆ ಹುಟ್ಟಿಸಿ
ಹೆಣ್ಣು ಆಸೆ ತೀರಿಸಿ,ಮೋಹ ಹೆಚ್ಚಿಸಿ
ಮಣ್ಣು ನಕ್ಕು ನಲಿಯಿತು
ನಮ್ಮಲ್ಲಿನ ಮೋಹ ಸಾಯಿಸಿ

-



ಕೆನ್ನಾಲಿಗೆ ಚಾಚುತಿದೆ ನೆಮ್ಮದಿಯ
ಜಾಡನು ಹಿಡಿದು ಗಾಲಿಬ್
ಶಾಂತಿಯು ಅಶಾಂತಿಯ ಮಡಿಲಲ್ಲಿ
ಮಣ್ಣು ಪಾಲಾಗಿದೆ ಗಾಲಿಬ್

-


5 DEC 2020 AT 16:58

ಮಣ್ಣಿಂದ ಕಾಯ ಮಣ್ಣಿಂದ

"ವಿಶ್ವ ಮಣ್ಣು ದಿನಾಚರಣೆ ಡಿಸೆಂಬರ್ 5"

ಮಣ್ಣನ್ನು ಜೀವಂತವಾಗಿ ಇರಿಸಿಕೊಳ್ಳೋಣ ಮತ್ತು ಮಣ್ಣಿನ ಜೀವವೈವಿಧ್ಯವನ್ನು ಸಂರಕ್ಷಿಸೋಣ
2020 ಆಚರಣೆಯ ವಿಶ್ವ ಸಂಸ್ಥೆಯ ಧ್ಯೇಯ ವಾಕ್ಯ.
(ಕ್ಯಾಪ್ಟನ್ ಓದಿ)

-



ದಣಿವು ಆರಿಸುಕೊಳ್ಳಲೆಂದು
ತುಸು ಸಮಯ ಕಣ್ಣು ಮುಚ್ಚಿ
ಮಲಗಿಕೊಂಡಿದ್ದೇ ಸಾಕಿ,
ನಾನು ಉಸಿರಾಡುವುದನ್ನೇ
ನಿಲ್ಲಿಸಿಬಿಟ್ಟೆ ಅನಕೊಂಡು
ಮಣ್ಣು ಹಾಕಿ ಹೋದರು ಸಾಕಿ

-


21 MAY 2020 AT 6:34

ಎದೆಯಂಗಳದಿ ಹರಿವ ಅವನ
ನೆನಪಿನ ಹಸಿ ಘಮಲಿನ ಮುಂದೆ,
ಮಳೆಯಲಿ ಮಿಂದು ತಂಪಾದ
ಮಣ್ಣಿನ ಗಂಧವು ಮಂಕಾಗಿತ್ತು.
ದಿನಕರನ ಕಿರು ನೋಟಕ್ಕೂ
ಬಿರಿಯದ ಹೂವೊಂದು, ರಾತ್ರಿ
ಸ್ವಪ್ನದಲ್ಲಿಯ ಅವನ ಹಾಜರಿಯಿಂದ
ಅರಳಿ ಮಿನುಗಿತ್ತು...

-


24 NOV 2019 AT 22:00

ಹರಿಯುವ ಬದುಕ ಅರಿಯುವುದೆ ಮಹಾಕೌತುಕ,
ಹರಿದಂತೆ ಅರಿತು ಸರಿಯುವುದೆ ಬದುಕ,
ಮಣ್ಣಿನ ಬೊಂಬೆ ನೀ ಮನುಜ, ಮರಳಿ ಮಣ್ಣಿಗೆ ಸೇರೊತನಕ ಸೋಲುಗಳೆದುರು ಸೋಲದೆ ನೀ ಹೋರಾಡುತ ಬದುಕ...

-



ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಕನಸು
ಕಣ್ಣಲ್ಲೆ ಕಣ್ಣೀರಾಗಿ ಹರಿದು ಹೋಗುತ್ತಿದೆ
ನನ್ನ ಮನ್ನಿಸು.

-


17 NOV 2020 AT 18:00

ಸುಮ್ಮನೆ ನಡೆದುಹೋದವರ
ನಡುವೆ ಸುದ್ದಿಯಾದವರೂ
ಅದೇ ಮಣ್ಣ ಸೇರಿದಾಗ,
ಉಳಿದುಬಿಡುವೆನೆಂಬ ಮದದಿ
ಮೆರೆವವರ ಕಂಡು
ಆಂತರ್ಯದ ದನಿ ಕಿಸಕ್ಕನೆ
ನಕ್ಕಿತ್ತು..!

-



ಕಲ್ಲೆನ್ನದೆ ಮುಳ್ಳೆನ್ನದೆ ಮಣ್ಣಿನೊಳಗೂ
ಗುಂಡಿಯೊಳಗೂ ಎಡವದೇ ನಡೆದ
ಆ ವರಟು ಪಾದಗಳ ಬಿರುಕು ಕವಿತೆ!

ದಿನವಿಡೀ ನೆರಳ ಕಾಣದೆ ದಣಿದು ಬರುವ
ಆ ಗಟ್ಟಿಗಿತ್ತಿ ಮಣ್ಣಿನ ಮಗಳು ದಿನಂತ್ಯದಿ
ಗೋಡೆಗೊರಗಿ ಬಿಡುವ ನಿಟ್ಟುಸಿರೆ ಕವಿತೆ!

ಹನಿ ಕಾಣದ ನೆಲವದು ಬಿಸಿಲ ಬೇಗೆಗೆ ಬರಡಾಗಿ
ಹಠಾತ್ತನೆ ಉದುರಿದ ಮುಂಗಾರಿನ ತುಂತುರ ಕಂಡು
ನಗೆ ಬೀರಿದ ಮಣ್ಣಿನ ಕಣದ ನಗುವೆ ಕವಿತೆ!

-