QUOTES ON #ಪ್ರಯಾಣ

#ಪ್ರಯಾಣ quotes

Trending | Latest
26 AUG 2020 AT 7:40

ಭಾರವಾದ ಮನವ ಹಗುರಾಗಿಸಲು
ನಿಸರ್ಗದ ಸೌಂದರ್ಯವ ಸವೆಯಲು
ಹರುಷದಿ ಮನ ಕುಣಿದಾಡಲು
ಹೊರಟೆವು ಎತ್ತಿನ ಭುಜ ಬೆಟ್ಟವ ಹತ್ತಲು

ಪಯಣ ಮುಂಜಾನೆಯ ಹೊತ್ತಲಿ
ಮೋಡ ಕವಿದ ವಾತಾವರಣದಲಿ
ಎತ್ತರವ ಕಂಡು ದುಗಡವು ಮನದಲಿ
ಮಾಯವಾದ ಆಯಾಸ ನಿಂತಿರಲು ಬೆಟ್ಟದ ತುದಿಯಲಿ

ಚಲಿಸುವ ಮೋಡಗಳು
ಸ್ತಬ್ಧವಾದವು ಆಲೋಚನೆಗಳು
ದೂರವಾಗಲು ಮನಸಿನ ಎಲ್ಲ ಚಿಂತೆಗಳು
ಮುದದಲಿ ತುಂಬಿಕೊಂಡವು ಕಣ್ಣುಗಳು

ಬಟ್ಟೆಗಳು ಹಸಿಯಾದವು
ಜಿಗಣೆಗಳು ನೆತ್ತರ ಹೀರಿದವು
ಮನಸಿನ ಗಾಯದ ಮುಂದೆ ಇದ್ಯಾವ ನೋವು
ಎಂದು ಎದೆಗುಂದದೆ ಮುನ್ನಡೆದೆವು

ಒಂದು ಸೇಬು ಕೂಡ ಹಸಿವೆ ನಿಗಿಸಿತು
ಮೃಷ್ಟಾನ್ನ ಭೋಜನಕಿಂತ ಮೇಲೇನಿಸಿತು
ನಿಸರ್ಗವು ನಮ್ಮೆಲ್ಲರ ಮನಸ್ಸನ್ನು ಹಸನಾಗಿಸೀತು
ಆ ಕ್ಷಣವ ಮರೆಯದಂತೆ ಹಚ್ಚಾಗಿಸಿತು

-


21 FEB 2020 AT 16:38

ಪ್ರಯಾಣಿಸುತ್ತಿರುವ ದಾರಿಯೇ ಸುಂದರವಾಗಿರುವಾಗ,
ಊರ ತಲುಪುವ ಮನಸಾಗಬಹುದೇ!

-


15 MAR 2020 AT 4:27

ನಾ ದೂರದ ಪ್ರಯಾಣ ಹೊರಟಿರುವಾಗ,
ನೀನಿರಬಾರದಿತ್ತೆ ನನ್ನ ಬದಿಗೀಗ,
ಅಂಗೈಯ ಹಿಡಿದು, ನಿನ ಭುಜಕ್ಕೆ ಒರಗಿ,
ಕಣ್ಮುಚ್ಚಿ ನಿದ್ರಿಸುವ ಆಸೆ ನನಗೀಗ.
ಆ ನಿದಿರೆಯಲ್ಲೂ ನೀನೇ ಕನಸಾಗಿ ಬರಲು,
ಮನತುಂಬಿ ನಗುವೆ ನಾನಾಗ.
ತಂಗಾಳಿ ನನ್ನ ಮುಂಗುರುಳ ಸರಿಸುವಾಗ,
ನೀ ನೋಡು ನನ್ನ ಮೊಗವನೇ ಮರೆತು ಇಡೀ ಜಗ.
ಹಾಗೆಯೇ ಸಾಗುತಿರುವ ನಾವು,
ಮರೆತು ತಲುಪಬೇಕಾದ ಜಾಗ.

-


7 MAR 2020 AT 0:35

ಕಲ್ಲು ಮಣ್ಣಿನ ದಾರಿಯಲೀ,
ದಟ್ಪಡವಿಯ ನೋಡುತಲೀ,
ಏರುಪೇರಿನ ಹಾದಿಯೊಳು ನಡೆಯುತಲೀ,
ಇನ್ನಾಗದೆಂದೆನಿಸಿರಲೂ,
ಎದುಸಿರ ಬಿಡುತ ಹೆಜ್ಜೆಗಳ ಮುಂದಿಡುತಿರಲೂ,
ರಮಣೀಯಕ್ಕೂ ಅತಿರಮಣೀಯ,
ಸುಂದರಕ್ಕೂ ಸುರಸುಂದರ,
ಧುಮ್ಮಿಕ್ಕುವ ಜಲಪಾತ ಕಂಗಳಿಗೆ ಕಂಡೊಡನೇ,
ಕುಣಿಯಲೋ! ಕೂಗಲೋ!
ಸ್ಥಬ್ದಳಾಗಿ ಹಾಗೆ ನಿಂತು ಬಿಡಲೋ!
ತಿಳಿಯದಂತಾಯಿತು.
ಖುಷಿಯ ವ್ಯಕ್ತಪಡಿಸಲೂ ಈಗ ಗೊಂದಲವು ಮೂಡಿತು.

-


25 APR 2020 AT 16:23

ಮಾತಾಡದೆ ನಡೆದಿತ್ತು ಮೊದಲ ಪ್ರಯಾಣ
ಮಾತು ನಿಲ್ಲದೆ ಸಾಗಿತ್ತು ನಂತರದ ಯಾನ
ಓ ಗೆಳತಿ ನಿಜ ಹೇಳು
ನೀನು ಮೊದಮೊದಲು ಮೌನಿಯಾಗಿದ್ದು
ನಾನೆ ಮಾತಾಡಲೆಂದಾ
ಅಥವಾ ನನ್ನ‌ ಪರೀಕ್ಷೆ ಮಾಡಲೆಂದಾ?

-



ಜೀವನದ ಬಹು ದೀರ್ಘ ಪ್ರಯಾಣವೆಂದರೆ
ಒಂದು ಮನಸ್ಸಿನಿಂದ ಮತ್ತೊಂದು ಮನಸ್ಸನ್ನು ಮುಟ್ಟುವುದಾಗಿದೆ. ಇದಕ್ಕೆ ಬಹಳ ಸಮಯವೂ ಬೇಕಾಗುತ್ತದೆ.

-


20 OCT 2022 AT 13:22

ದಾರಿಯನು ಕ್ರಮಿಸುವ ಪರಿ ನನ್ನದು
ಗುರಿಯನು ತಲುಪುವ ಭ್ರಮೆಯಿಂದಲ್ಲ
ಹಾದಿಯುದ್ದಕ್ಕೂ ಪಯಣದ ಸೋಜಿಗ
ಸಂಭ್ರಮವ ಸುಖಿಸುವ ಆಸೆಯಿಂದ
ಅಂತ್ಯದ ಹಂಗಿಲ್ಲ ,ಭಯವಿಲ್ಲ
ನಾನಿಲ್ಲಿ ಕೇವಲ ಪಯಣಿಗನಷ್ಟೇ!

-


13 FEB 2021 AT 22:08

ಈ ಪಯಣ
ಶ್ರೀ ಮಂತ್ರಾಲಯ ರಾಯರು
ನಡೆದ
ನೆಲವ ಸೋಕಲು..
ಕೇಳುವರು ಎಲ್ಲರು
ಅಲ್ಲಿಂದ ತರುವುದೇನೆನೆಂದು
ಹೇಳುವುದು
ಒಂದೆ ನಾನು..
ನಾ ಹೋಗುತಿರುವುದು
ಮೂರನ್ನು ರಾಯರ
ಪಾದಕಮಲಗಳಿಗೆ ಅರ್ಪಿಸಲು..
ಅವು ನನ್ನಲ್ಲಿನ
ಕೋಪ,‌ ಸೋಮಾರಿತನ
ಮತ್ತು ಅತಿಯಾದ ನಂಬಿಕೆ

-



ಸರಿ ಸಾಟಿ ಯಾರುಂಟು
ಅವಳ ಅಂದ ವೈಯ್ಯಾರಕ್ಕೆ
ಕಲ್ಲು ಹೃದಯದಲ್ಲೂ
ಭಾವನೆ ಚಿಮ್ಮಿಸಬಲ್ಲ
ಅಭೂತಪೂರ್ವಳು ಆಕೆ
ನೋವಿಗೂ ನಗುವಿಗೂ
ಅಮೃತ ಉಣಿಸಿದವಳು ಆಕೆ

-


29 NOV 2021 AT 7:28

ಗುರುತು ಅಳಿಯದು ಗೆಳೆತನ
ನೆನಪು ಉಳಿವುದು ಬಂದರು ಮುದಿತನ
ಎಲ್ಲರದ್ದೂ ವಿಭಿನ್ನ ಪ್ರಯಾಣ
ಹೀಗಾಗಿ ಸೇರರು, ಸರಿದು ಆಗಿರುವರು ಮೌನ
ಇದು ವಿಧಿ ನಡೆಸಿದ ಯಾನ

-