ಪ್ರೇಮಿಗಳಿಗೆ ಇಂದು ಸುದಿನ
ಇದ್ದ ಪ್ರೇಮವನ್ನು ಸಂಬ್ರಮಿಸುವ ದಿನ
ಹೊಸ ಪ್ರೀತಿಗೆ ಜನುಮ ನೀಡುವ ದಿನ
ನಮ್ಮಿಬ್ಬರಿಗೂ ಶುಭಾಶಯ ಕೋರಿಕೊಳ್ಳುವ ದಿನ-
ನನ್ನ ಮೇಲೆ ನಂಬಿಕೆ ಇಟ್ಟು ನೀನು ನನ್ನ ಪ್ರೀತಿಸಿದೆ
ಆ ನಂಬಿಕೆಯನ್ನು ನಾನು ಹುಸಿ ಗೊಳಿಸಿದೆ
ನನ್ನ ಕೆಟ್ಟ ಭಾವನೆಗಳಿಂದ ನಿನ್ನ ಮನಸ್ಸು ನೋಯಿಸಿದೆ
ನಿನ್ನ ಆ ಧ್ವನಿ ಇನ್ನು ನನ್ನ ಕಿವಿಯಲ್ಲಿ ಮೊಳಗುತ್ತಿದೆ
ತಪ್ಪಿಗೆ ಮನ ಕ್ಷಮೆ ಕೋರಿದೆ
ಆದರೂ ಕ್ಷಮಿಸದೆ ತೊರೆದು ಹೋದೆ
ಇದ್ಯಾವ ಪ್ರೀತಿಯೆಂದು ನಾನು ಅರಿಯದಾದೆ-
ಓ ನನ್ನ ಪ್ರೀತಿಯ ಬಾಳು
ನಿನಗಾಗಿ ಬರೆದೆ ಈ ಕವನವ ಗಮನವಿಟ್ಟು ಕೇಳು
ಮೊದಲ ನೋಟದಲ್ಲೇ ಆದೆ ನಾ ನಿನ್ನ ಸೇರೆಯಾಳು
ನನ್ನ ಮನಸು ಆಗಿದೆ ನಿನ್ನ ನೋಟಕ್ಕೆ ಮರುಳು
ಇರುವೆಯಾ ಜೊತೆಯಾಗಿ ಕೈಹಿಡಿದು ಹೇಳು
ಕೊನೆಯವರೆಗೂ ಎದುರಿಸಲು ಜೀವನದ ಏಳುಬೀಳು
ನಡೆಯಲಾಸೆ ಏಳು ಹೆಜ್ಜೆ ಹಿಡಿದು ನಿನ್ನ ಬೆರಳು
ತಾಳಿ ಕಟ್ಟಲು ಹಾತೊರೆಯುತ್ತಿವೆ ಕೈಗಳು
ಜೊತೆಯಾಗಿ ರುಪಿಸೋಣ ಸುಂದರ ಬಾಳು
ಕಾಯುವೆ ನಿನಗೆ ಸೋಕದಂತೆ ಕಷ್ಟದ ನೆರಳು-
ಪ್ರೀತಿಯ ಬದಲು ಕೋಪವೇ ಹೆಚ್ಚಾಯಿತೇ
ಅರಿಯದೆ ಮನಸಿಗೆ ಬಾಯಿ ಖಾರದ ಮಾತು ಮತಾಡಿತೆ
ಎತ್ತಿದ ಕೈಗಳೆ ನನ್ನಿಂದ ನಿನ್ನ ದೂರ ಮಾಡಿತೇ
ಕಳೆದುಕೊಂಡಿರುವೆ ನಾನು ಕ್ಷಮೆ ಕೋರುವ ಅರ್ಹತೆ
ಆದರೂ ಕ್ಷಮಿಸಿದಳು ಎಲ್ಲ ಮರೆತು ನನ್ನ ದೇವತೆ-
ದೇವರೇ ನಿನ್ನ ಸನ್ನಿಧಿಗೆ ನಾನು ಬಂದೆ
ಭಕ್ತಿಯಿಂದ ಕೈ ಮುಗಿದೆ
ಹಸಿದು ಅನ್ನವ ತಿಂದೆ
ಕೇಳಿರುವ ವರವು ಒಂದೇ
ಓ ದೇವರೇ ನನ್ನವಳು
ನನ್ನ ಪ್ರೀತಿಸುವ ಹಾಗೆ ಮಾಡು ತಂದೆ-
ಮರೆಯಲು ಸಾಧ್ಯವಿಲ್ಲ ನಿನ್ನೊಂದಿಗೆ ಕಳೆದ ಕ್ಷಣಗಳನ್ನು
ಹಿಡಿತದಲ್ಲಿ ಇರಿಸಬೇಕಿತ್ತು ನನ್ನ ಈ ಮನಸನ್ನು
ನಿನಗೆ ಹೇಳಬಾರದಿತ್ತು ನನ್ನ ಪ್ರೀತಿಯನ್ನು
ಆದರೆ ಕ್ಷಮಿಸಿಬಿಡು ಇದೊಂದು ಸಾರಿ ನನ್ನನ್ನು
ತೋರಿರುವೆ ನೀನು ಎಲ್ಲಕ್ಕಿಂತ ಮಿಗಿಲಾದ ಪ್ರೀತಿಯನ್ನು
ತೊರೆದು ಹೋಗಿರುವೆ ಹೇಳದೆ ಕಾರಣಗಳನ್ನು
ನಿನ್ನ ನೆನೆದಾಗ ತುಂಬುತಿಹವು ಕಣ್ಣು
ಸೇರಲು ಆಸೆ ಆದಷ್ಟು ಬೇಗ ಮಣ್ಣು-
ಆಗಿರುವುದು ಮನಸ್ಸು ತುಂಬಾ ಭಾರ
ನಿನ್ನ ಮೇಲೆ ಇರುವುದು ಪ್ರೀತಿ ಅಪಾರ
ಸೋತು ಹೋಗಿರುವ ನಿನ್ನ ವೀರ
ನನ್ನನ್ನು ಕ್ಷಮ್ಮಿಸಿಬಿಡು ನನ್ನ ಬಂಗಾರ
ಅದೇನೋ ಕಾಡುತಿದೆ ಮುಜುಗರ
ಮಾಡಿದೆ ನಿನ್ನ ನಗುವನ್ನು ನಿನ್ನಿಂದ ದೂರ
ನಿನ್ನ ಪ್ರೀತಿಯಲ್ಲಿ ನಾನು ಕುರುಡ ಆಗಿರ
ತೋಚುತ್ತಿಲ್ಲ ದಾರಿ ಹೋಗಲು ದೂರ-