QUOTES ON #ಪುಣ್ಯಸ್ಮರಣೆ

#ಪುಣ್ಯಸ್ಮರಣೆ quotes

Trending | Latest

ಪುಣ್ಯ ಸ್ಮರಣೆ
**********
ಅಪ್ಪುನ ಸಾಧನೆ ಚಿಪ್ಪೊಳಗಿನ ಮುತ್ತು
ಸರಳತೆ, ಗುಣದಲ್ಲಿ ಅಪ್ಪುವೇ ಸಂಪತ್ತು
ಅವರ ನಗುವಲ್ಲಿ ಕನ್ನಡರಂಗ ಮಿಂಚಿತ್ತು
ಬಡವರು, ಅನಾಥರೆಂದರೆ ಅವರಿಗೆ ಪ್ರೀತಿ ಹೆಚ್ಚಿತ್ತು
ಅಪ್ಪು ಮಾಡಿದ ದಾನ ಯಾರಿಗೂ ತಿಳಿಯದಾಗಿತ್ತು
ಅಪ್ಪುಗೆ ದೇವರಲ್ಲಿ ನಂಬಿಕೆ, ಭಕ್ತಿ ಅಗಾಧವಾಗಿತ್ತು
ದೇವರಿಗೂ ಅವರ ಮೇಲೆ ಅತೀ ಮಮತೆ ಇತ್ತು
ಅಪ್ಪು ದೇವರ ಪಾದ ಸೇರಿ ಇಂದಿಗೆ ಒಂದು ವರ್ಷಾಗೋಯ್ತು
ಆದರೆ ಅಪ್ಪುನ ನೆನಪು ಜೀವಂತವಾಗಿರುವುದು ಯಾವತ್ತೂ
ಅವರನ್ನು ಮನದಾಳದಿಂದ ಸ್ಮರಿಸೋಣ ನಾವಿವತ್ತು 🙏🏻💐

-



ಹಸಿದವರಿಗೆ ಉಣಬಡಿಸುವಾಗ ದಾನಿಯಾಗಬೇಡ ದಾಸನಾಗು...!!

"ದಾಸೋಹ ದಿನ"








-


27 JUL 2020 AT 10:03

ವಿ "ಶೇಷ" ಸಾಲುಗಳು

ಮಲಗಿರುವ ಯುವಕರ ಮನಸ್ಸನ್ನು
"Ignited minds" ಎಂದು ಬಡಿದೆಬ್ಬಿಸಿ.
ಅವರ ಸ್ಪೂರ್ತಿಗೆ
"ಅಗ್ನಿಯ ರೇಖೆಗಳನ್ನು" ತೋಡಿಸಿ.
ಸಾಧನೆಯೇ "ನನ್ನ ಪಯಣ" ಎಂದು.
ಭವ್ಯ ಭಾರತದ ಕನಸ್ಸನ್ನು
Vision 2020ಯಲ್ಲಿ ಕಂಡು.
ಯುವಕರಿಗೆ ವಿಶ್ವದ ವಿಸ್ಮಯವನ್ನು
ವಿಜ್ಞಾನ ಮೂಲಕ ವಿಸ್ತ್ರತವಾಗಿ ವಿವರಿಸಿ.
ಭವ್ಯ ಭಾರತದ ರಾಷ್ಟ್ರಪತಿಯಾಗಿ.
ಭಾರತಾಂಬೆಯ ಮುಕುಟದ
ಶಿಖರವನ್ನು ಎತ್ತರಕ್ಕೆ ಏರಿಸಿದ ಮಹಾನ್ ಚೇತನ
ಶ್ರೀ ಡಾ. ಎ. ಪಿ. ಜೆ ಅಬ್ದುಲ್ ಕಲಾಂ

-


11 JAN 2020 AT 7:20

ಸರಳ ಸಜ್ಜನಿಕೆಯ ಮಹಾನಾಯಕ
ಪ್ರಾಮಾಣಿಕತೆಯ ಮೈಗೂಡಿಸಿಕೊಂಡ ಧೀರ
ಭಾರತದ ಸ್ವಾಭಿಮಾನಿ ಕನಸು ಕಂಡ
ಕೆಚ್ಚದೆಯ ದೇಶಾಭಿಮಾನಿ
ಭಾರತದ ಸ್ವತಂತ್ರಕ್ಕೆ ಅವಿರತ
ಶ್ರಮಿಸಿದ ಹೋರಾಟಗಾರ
ಮೌಲ್ಯಯುತ ಕಾಯಕದಲ್ಲಿ
ದಿಟ್ಟ ಹೆಜ್ಜೆಯಿಟ್ಟ ಹರಿಕಾರ
ಬಡವರಿಗಾಗಿ ಒಂದ್ಹೊತ್ತ
ಊಟ ತ್ಯಜಿಸಿದ ಗುರಿಕಾರ
ಅಚಲ ನಿರ್ಧಾರಗಳನ್ನು ತೆಗೆದುಕೊಂಡ
ಧೀಮಂತ ನಾಯಕ
ಸಾವಿಗೂ ಹೆದರದೆ ರಾಷ್ಟ್ರದ ಸಮಗ್ರತೆಯ
ಎತ್ತಿ ಹಿಡಿದ ಆದರ್ಶ ವ್ಯಕ್ತಿ
'ಜೈ ಜವಾನ್ ಜೈ ಕಿಸಾನ್' ಎಂಬ ಘೋಷ
ವಾಕ್ಯದೊಂದಿಗೆ ಪ್ರಖ್ಯಾತ ಹೊಂದಿದ
ದೇಶ ಕಂಡಂತಹ ದಕ್ಷ ಪ್ರಧಾನಿ
ಲಾಲ್ ಬಹಾದ್ದೂರ್ ಶಾಸ್ತ್ರಿಯವರ
ಪುಣ್ಯ ಸ್ಮರಣೆಯ ದಿನದ ಭಕ್ತಿಪೂರ್ವಕ
ಪ್ರಣಾಮಗಳು.🙏🙏🙏💐💐💐💐
_ಶೃತಿ ಶೈವ



-



ಸಂತಸವೆಂಬುದು ಸಾವಾದರೆ,
ನೆನೆಪುಗಳೆಂಬುದು ಉಳಿಯೊ ಪುಣ್ಯ ಸ್ಮರಣೆಯ ಕಂತೆ.

-


25 DEC 2021 AT 16:54

ಅಸಾಮಾನ್ಯ ವಾಕ್ ಚಾತುರ್ಯದಿಂದ
ತನ್ನ ಸಿದ್ದಾಂತಗಳಿಗೆ ಬದ್ಧರಾಗಿ
ದಕ್ಷತೆ ಪ್ರಮಾಣಿಕತೆಗೆ ಹೆಸರಾಗಿ
ರಾಷ್ಟ್ರೀಯ ಹೆದ್ದಾರಿಯ ರುವಾರಿಯಾಗಿ
ದಿಟ್ಟ ಹೆಜ್ಜೆಯಿಟ್ಟು ಪರಮಾಣು‌
ಪರೀಕ್ಷೆ ನಡೆಸಿದ ಧೀಮಂತ ನಾಯಕ
ಭಾರತ ಕಂಡ ಶ್ರೇಷ್ಠ ಆಡಳಿತಗಾರ
ಓರ್ವ ಪತ್ರಕರ್ತರಾಗಿ
ಅದ್ಬುತ ಬರಹಗಾರರಾಗಿ
ಭಾರತ ರತ್ಮ ಪ್ರಶಸ್ತಿ ಪಡೆದ
ಸರಳ‌ ಬದುಕಿನ ಮಹಾಚೇತನ
ಅಜಾತಶತ್ರು ಶ್ರೀ ಅಟಲ್
ಬಿಹಾರಿ ವಾಜಪೇಯಿಯವರಿಗೆ
"ಜನುಮ ದಿನದ" ಸ್ಮರಣಾರ್ತವಾಗಿ
ಗೌರವಪೂರ್ವಕ ನಮನಗಳು. 🙏💐
ಹಾಗೂ "ಉತ್ತಮ ಆಡಳಿತ ದಿನದ"
ಶುಭಾಶಯಗಳು.

-


30 SEP 2024 AT 15:27

ನಟಿಸಿದರೂ ನಟನಾಗಿ ಉಳಿಯದೇ
ನಿರ್ದೇಶನ ಮಾಡಿದರೂ ಅದಕ್ಕೆ ಸೀಮಿತವಾಗಿರದೆ
ಪಾದರಸದಂತೆ ಪ್ರತಿ ಕೆಲಸಗಳಲ್ಲಿಯೂ ಕೈಹಾಕಿ
ಜೊತೆಗಿದ್ದವರಿಗೂ ಹುರುಪು ತುಂಬುತ
ನಾಡು ನುಡಿಗಾಗಿ ಶ್ರಮಿಸಿ, ಅಪಾರ ಕನಸುಗಳನ್ನು ಕಣ್ತುಂಬಿಸಿಕೊಂಡಿದ್ದ ಧೀಮಂತ ಶಕ್ತಿಯನ್ನು ವಿಧಿ ಮಾಯಮಾಡಿತು ಎಂದರೆ ಅತೀವ ದುಃಖವಾಗುವುದು. ಅವರ ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುವುದೇ ಅವರಿಗಿದ್ದ ಆಸಕ್ತಿ ಪ್ರೀತಿ ಶ್ರದ್ಧೆಯನ್ನು ನೆನಪಿಸುತ್ತದೆ.

-


9 OCT 2020 AT 19:45

ಕಡಲ ತೀರದ ಭಾರ್ಗವನಿಗೆ ಕೋಟಿ ಪ್ರಣಾಮಗಳು
÷÷÷÷÷÷÷÷÷÷÷ ÷÷÷÷÷÷÷÷÷÷÷ ÷÷÷÷÷÷÷÷÷
ಸಮಾಜ ಸುಧಾರಕ, ವೇಶ್ಯೆಗೆ ಮದುವೆ ಮಾಡಿಸಿದವರು
ಜನರ ಕೋಪಕೆ ಬಲಿಯಾದವರು, ಪರಿಸರ ಸಂರಕ್ಷಣೆಗೆ ಪಣ ತೊಟ್ಟವರು, ಹೆದರದೇ ಮುನ್ನುಗ್ಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟದ ಕಿಚ್ಚು ಹಚ್ಚಿದವರು. ಚೋಮನ ದುಡಿ, ಕುಡಿಯರ ಕೂಸು ಎಂದು ದಲಿತರ ಕಷ್ಟಗಳಿಗೆ, ಅವರ ಹಕ್ಕುಗಳಿಗಾಗಿ ದನಿ ಎತ್ತಿದವರು, ಮೂಕಜ್ಜಿಯ ಕನಸು, ಚಿಗುರಿದ ಕನಸು, ಬೆಟ್ಟದ ಜೀವ ಎಂಬ ಅನೇಕ ತೆರನಾಗಿ ವಿಚಾರಧಾರೆಗಳಿಗೆ ಬೆಳಕ ಚೆಲ್ಲಿದವರು.
ಜ್ಞಾನಪೀಠ ಪ್ರಶಸ್ತಿ ವಿಜೇತರಾದ "ಕೋಟ ಶಿವರಾಮ ಕಾರಂತರ ೧೧೯ ನೇ ಜನ್ಮದಿನದ ಸವಿನೆನಪು" (೧೦/ಅಕ್ಟೋಬರ್/೧೯೦೨)

-


1 APR 2020 AT 10:36

ನೆಡೆದಾಡುವ ದೇವರ 113ನೇ ಜಯಂತಿ.

ಶತವರ್ಷಗಳ ಕಾಲ ಸಾರ್ಥಕ ಜೀವನ ನೆಡೆಸಿ, ಲಕ್ಷಾಂತರ ಮಕ್ಕಳಿಗೆ ದಾರಿದೀಪವಾದ ಚೇತನ. ಕಾಯಕ ಯೋಗಿ, ತ್ರಿವಿದ ದಾಸೋಹಿ, ಅಭಿನವ ಬಸವಣ್ಣ "ಶಿವಕುಮಾರ ಸ್ವಾಮಿ"ಗಳಿಗೆ ಕೋಟಿ ಪ್ರಣಾಮಗಳು.

-


9 OCT 2020 AT 21:01

ಆಡುಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ
°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°
ಸುಮಾರು ೪೨೭ ಪುಸ್ತಕಗಳನ್ನು ರಚಿಸಿದ್ದರು ಎನ್ನಬಹುದು. ಹಾಗಾಗಿ ಕಾರಂತಜ್ಜನಿಗೆ ಅನೇಕ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಹುಡುಕಿಕೊಂಡು ಬಂದಿವೆ. ನಾಡೋಜ ಪುರಸ್ಕಾರ, ಪಂಪ ಪ್ರಶಸ್ತಿ ಕೂಡ ಒಲಿದಿದೆ. ಅಲ್ಲದೇ ಪದ್ಮಭೂಷಣ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು. ಆದರೆ ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಸರ್ವಾಧಿಕಾರವನ್ನು ಧಿಕ್ಕರಿಸಿ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ವಾಪಸು ಮಾಡಿದ್ದರು ಎಂಬುದು ಈಗ ನೆನಪಿಸಿಕೊಳ್ಳಬೇಕು. ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕøತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿನ ಅವರ ಸಾಧನೆ ಅಪಾರ.

-