ಯಾರಾದ್ರೂ ಹೋದ್ರೆ,
ಓಂ ಶಾಂತಿ ಅಂತೀವಿ...!!
ಅದೇ ಬದುಕಿನ ತುಂಬಾ ನಾವು ತುಂಬಿದ್ದು,ತುಂಬಿಸ್ಕೊಂಡಿದ್ದು,ಹರಡಿಸಿದ್ದು,ಅಂಟಿಸಿಕೊಂಡಿದ್ದು,ಆವರಿಸಿಕೊಂಡಿದ್ದು ಬರೀ ಅಶಾಂತಿನೇ...!!
ಒಳಗಿನೊಳಗೇ ಇರೋ ಅನಂತ ನೆಮ್ಮದಿ ನಾ ಉಸಿರಾಡೋಕೇ ಬರ್ದಿರೋ ನಾವುಗಳು,ಊರು ಸುತ್ತಿ,ಬೆಟ್ಟ ಹತ್ತಿ,ಉರುಳಾಡಿ,ಗೋಳಾಡಿ,ಮಿಂದು ಮಿಸುಕಾಡಿ,ಸಂಕಟ ಬಂದಿದೆ ವೆಂಕಟರಮಣನೇ ಕೊಡು ಕೊಡು ಕೊಡು ಎಂದು,ಅವಶ್ಯಕತೆ ಇದ್ದಲ್ಲಿ ಕೊಡದೇ ಕೆರೆಯ ನೀರು ಕೆರೆಗೆ ಚೆಲ್ಲಿ ಕೆಟ್ಟಿಯಲ್ಲೋ ಮನುಜಾ...ಬೆಂದೆನಯ್ಯಾ ಅಂದರೇ ಬಂದು ಬಿಡುವನೇ ಅವನು...?ಅವನೋ ದೀನನಾಥ ...ನೀನೋ ಸದಾ ಬೇಡೋ ಭಿಕ್ಷುಕ...
ಜೀವನದ ಭಿಕ್ಷೆಯನ್ನೇ ಆಗಲೇ ನಿನ್ನ ಜೋಳಿಗೆಯ ತುಂಬಾ ಬಿಸಾಡಿದ್ದಾನೆ...
ಸಾಧ್ಯವಾದರೆ ಪ್ರೀತಿಸು,ಧ್ಯಾನಿಸು,ಆನಂದದ ಕಣ್ಣಾಲಿಗಳಲಿ ತೋಯಿಸು,ಕೇಳದೇ ಕೊಡುವವನು ಅವನು ಕೈಬಿಡುವನೇ,ಅಪ್ಪಿ ತಪ್ಪಿ ಎದುರೆ ಸಿಕ್ಕರೆ ಅಪ್ಪಿ ಮುದ್ದಾಡಿಬಿಡು... ಜೀವನ ಸಾರ್ಥಕ...
ಇಷ್ಟೇ ಮೂರು ದಿನದ ಬಾಳು... ಸಿಕ್ಕಿದ್ದಕ್ಕೆ ಖುಷಿಪಡು...
ಯಾಕ್ ಗುರು ಇಲ್ಲದೇ ಇರೋದ್ನೆಲ್ಲಾ ಎಳ್ಕೊಂಡು ಬದುಕು ಭಾರ ಮಾಡ್ಕೋತಿಯಾ...?
ಓಂ ಶಾಂತಿ ಶಾಂತಿ ಶಾಂತಿಃ-
ತುಂಬಿದ ಹೃದಯ
ಕೆಲಸವಿಲ್ಲದ ಕೈ
ಮನಸ್ಸಿಗೆ ಸರಿಯೆನಿಸುವ ಬಹುಶಃ ಸರಿಯಿಲ್ಲದ ಸಾಲುಗಳ ಗೀಚುವ ಹವ್ಯಾಸಿ... read more
ನೆವರ್ ಎಂಡಿಂಗ್ ಡೈರಿ -04
ದಿನದ ಭಾರವೆಲ್ಲಾ ಮೈ-ಮನಸ್ಸುಗಳಿಗೆ ಅಂಟಿಕೊಂಡು ಪಾದಗಳು ಕುಸಿದಾಗೆಲ್ಲಾ ಮನದಾಳವ ಅರಿತಂತೆ ಖಾಸ ಸಂಜೆಯೊಂದು ಸದಾ ಬಾಗಿಲ ಬಳಿ ಬಂದುಬಿಡುತ್ತದೆ. ಇಷ್ಟು ಸಾಕಲ್ಲವೆ ಮೇಲೆ ಏಳಲು...? ಹಾ! ಇವತ್ತು ಅಂತದ್ದೆ ಒಂದು ಸಂಜೆ ಕೈ ಹಿಡಿದು ನಡೆಸಿದ್ದು. ನಾಲ್ಕು ಗೋಡೆಗಳೊಳಗೆ ಬಂಧಿಯಾದ ಮನಸ್ಸು, ಇಡುವ ಪ್ರತಿ ಹೆಜ್ಜೆಯೊಂದಿಗೆ ಬಿಡುಗಡೆಗೊಳ್ಳುತ್ತಿದ್ದರೆ ಹೃದಯ helium ಅನಿಲ ತುಂಬಿಕೊಂಡಂತೆ ಹಗುರಾಗುತ್ತದೆ.ಅದೇ ಹುಮ್ಮಸ್ಸು ಇನ್ನೂ ನಾಲ್ಕು ಹೆಜ್ಜೆಗಳನ್ನು ಹೆಚ್ಚಿಗೆ ಹಾಕಿಸುತ್ತದೆ. ಇನ್ನು ಕಳೆದೋಗುವುದೊಂದೇ ಬಾಕಿ... ಅಲೆದಾಡಿ ಅಪ್ಪಿಕೊಂಡು ಸವಿಸಿದ್ದೊಂದೇ ದಾರಿ ...
ಅಬ್ಬಾ !ನನ್ನದೇ ಊರಿನ ಈ ದಾರಿ ಬಹು ಅಪರಿಚಿತ ..ಎಂದೋ ಬಂದಿದ್ದೆನೆಂಬ ನೆನಪಿನ ತಿಳಿಗಾಳಿಯ ಅಣುಗಳು ನಾಸಿಕವ ದಾಟಿ ಹೋಗುತ್ತಿದ್ದರು, ನನ್ನದೇ ಮನೆಯಲ್ಲೇ ಅನಾಥಳದಂತಹ ಒಂದು ಭಾವ... ಆಗಾಗ ಹೀಗಾಗಬೇಕು ಬಿಡಿ...ಹ್ಮ್ ಹಿಂಗಾಯಿತಲ್ಲ ಅನ್ನುವಷ್ಟರಲ್ಲಿ ಇನ್ನೊಂದೇನೋ ಅನಿರೀಕ್ಷಿತ ನಡೆದು ಬಿಡುತ್ತದೆ. ಮುಚ್ಚಿದ ಮನದ ಬಾಗಿಲೊಂದು ತೆರೆದು ಬಿಡುತ್ತದೆ ಕೆಲವೊಮ್ಮೆ ಅಂದುಕೊಳ್ಳದೆ ಆಗುವುದು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಯೋಜನಾ ಯುಕ್ತ. ಇರಲಿ ಅಲ್ಲೇ ಬಿದ್ದ ಹೆಸರು ಗೊತ್ತಿಲ್ಲದ ಹೂದಳಗಳ ವಾಸನೆ ಹಳೆ ನೆನಪಿನ ಬೋರ್ಡೊಂದನ್ನು ದರ್ಶಿಸಿದಾಗ ಮನಸ್ಸು ಸಂಪೂರ್ಣ ನಿರಾಳ. Anyway ಇಂಥ ಸಂಜೆಗೊಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ ಅನ್ನುವಾಗೊಂದು ಅಪರಿಪೂರ್ಣತೆ ಕಣ್ಣಿಗೆ ರಾಚುತ್ತದಲ್ಲ ಆಗಲೇ ಹೃದಯ unplanned ಸಂಜೆಯೊಂದಿಗೆ ಹಾಡಲು ಶುರುವಿಟ್ಟಿದ್ದು.
ಇಂತಿ
ಸಂಜೆಯಲ್ಲೊಬ್ಬಳು ಅಲೆಮಾರಿ-
ಒಂದನೇ ಸಾಲಿನಲ್ಲೇ ನಾನು ಸಂಪೂರ್ಣ ಗುಣಮುಖಳು...
ಎರಡನೇ ಸಾಲು ಬರೆಯುವ ಮುಂಚೆಯೇ ಅಳಿಸಿ ಹೋಯಿತು...!!-
ಮತ್ತದೆ ಚಿತ್ತು-ಕಾಟುಗಳು...
ಎಷ್ಟು ಅಳಿಸುವುದು?
ಹಾಳೆಯೂ ಹರಿಯುತ್ತಿಲ್ಲ...
ಮಸಿಯೂ ಒಣಗುತ್ತಿಲ್ಲ...
ಸಾವಾದರೋ ಸಲೀಸು...ಸಹಿಸುವುದು ಕಷ್ಟ...!!-