QUOTES ON #ಪರಿತ್ಯಾಗಿ

#ಪರಿತ್ಯಾಗಿ quotes

Trending | Latest
23 FEB 2019 AT 8:49

ಭಕ್ತಿ ಶಕ್ತಿ ವಿರಕ್ತಿ ಸಂಯೋಗ ನೀನಹುದೋ
ಮುಕ್ತಿಗಂಟಿದ ಮಾರ್ಗ ನಿನ್ ಆಯ್ಕೆಯೊಳಗೆ
ನರಕ ನಾಕಗಳೆಲ್ಲ ಕಾಲನ್ ಕೈಯಾಟಗಳೋ
ಹೆಜ್ಜೆ ಲಕ್ಷಿಸಿ ನಡೆಯೋ-ಪರಿತ್ಯಾಗಿ

-


7 MAY 2021 AT 7:53

ಹುಡುಕಾಟ ಉತ್ತರಕೆ ಪ್ರಶ್ನೆಯರಿವಿರದಂತೆ
ಕೆಡುಕು ಒಳಿತುಗಳೆನದೆ ಸತತ ಪರಿಶ್ರಮವು
ಬುಡ ತುದಿಯ ಅರಿವಿಲ್ಲ ವೃತ್ತತೆಯ ಪರಿವಿಲ್ಲ
ಸುಡುವ ಅಲೆಮಾರಿತನ -ಪರಿತ್ಯಾಗಿ

-


30 OCT 2019 AT 21:16

ಪರರ ನೋವನ್ನ ಅರಿತವನಾಗುವನು ತ್ಯಾಗಿ
ಜಗದ ನೋವನ್ನರಿತವನು ಯೋಗಿ
ನೋವು ನಲಿವುಗಳೆರಡರಲ್ಲೂ
ಸಮ ಭಾವತಳೆದವನೇ -ಪರಿತ್ಯಾಗಿ

-



.

-


23 JUL 2020 AT 10:05

ಮಾಡಿದ ತಪ್ಪುನ್ನು ಮನ್ನಿಸಿ
ಮರಳಲು ಮನಸ್ಸಿಗೆ ಮರುಕವೇ.?
ಮೆರುಗು ಕಳೆದುಕೊಳ್ಳುವ ಭಯವೇ.?

ಮರಗಿ ತಿರುಗಿ ನೋಡಲು ಸಮಯವಿರುವುಲ್ಲ,!
ಮನಸ್ಸೇ ಶಾಶ್ವತವಾಗಿ ಮಲಗಿದಾಗ...

-


10 AUG 2020 AT 12:24

ಪ್ರಾರಂಭ ಕಾರ್ಯಕ್ಕೆ ಹಿಂಜರಿಯದೆ ನೀ ತೊಡಗು
ಆರಂಭದಿಂದಲೇ ಸಕಲ ಪ್ರಾಪ್ತ
ಓರೆ ಹಚ್ಚದೇ ಸೋಲು ಗೆಲುವುಗಳ ಮನಸ್ಥಿತಿಗೆ
ಧರಿಸು ಅನುಭವ ಶಿರದಿ -ಪರಿತ್ಯಾಗಿ

-



ಯಾರು ಹೆಂಡತಿ, ಮಗು ಮತ್ತು ಪೋಷಕರಿಂದ ತಮ್ಮ ಹೃದಯವನ್ನು ಹಿಂತೆಗೆದುಕೊಳ್ಳುತ್ತಾರೆ ಮತ್ತು ನನ್ನನ್ನು ಪ್ರೀತಿಸುತ್ತಾರೆ, ಅವರು ನನ್ನ ನಿಜವಾದ ಪ್ರೇಮಿ.

-


1 NOV 2021 AT 0:02

ಮೊದಲರಿತ ಅಕ್ಷರವೂ ತೊದಲಾಡಿದಾ ನುಡಿಯು
ಬದುಕಿನುದ್ದದಿ ಬಳಸಿ ಬೆಳೆದ ಪರಿಯು
ಪದಗಳಿಲ ವರ್ಣಿಸಲು ಋಣ ತೀರುವುದಸಾಧ್ಯ
ಅದುವೇ ಕನ್ನಡ ಭಾಷೆ-ಪರಿತ್ಯಾಗಿ

-


5 SEP 2020 AT 21:10

ವಿದೇಶಿ: ಸ್ವಾಮಿ ಕ್ರಿಶ್ಚಿಯನ್ ಧರ್ಮದ ಸ್ಥಾಪಕರು ಯಾರು?
ಸ್ವಾಮಿ ಚಿನ್ಮಯಾನಂದ: ಜೀಸಸ್
ವಿದೇಶಿ: ಇಸ್ಲಾಂ ಧರ್ಮ ಸ್ಥಾಪಕರು ಯಾರು?
ಸ್ವಾಮಿ ಚಿನ್ಮಯಾನಂದ: ಮುಹಮ್ಮದ್
ವಿದೇಶಿ: ಹಿಂದೂ ಧರ್ಮದ ಸ್ಥಾಪಕರು ಯಾರು?
ಸ್ವಾಮಿ ಚಿನ್ಮಯಾನಂದ: ಉತ್ತರವಿಲ್ಲ. ಮೌನವಾಗಿ ಉಳಿದಿದೆ.
ವಿದೇಶಿ: ಸ್ವಾಮಿ, ನಿಮ್ಮ ಧರ್ಮದ ಸ್ಥಾಪಕರಂತೆ ಯಾರೂ ಇಲ್ಲವೇ?

ಸ್ವಾಮಿ ಚಿನ್ಮಯಾನಂದ: ವಿಶೇಷವಾಗಿ ಹಿಂದೂ ಧರ್ಮದ ಒಬ್ಬ ಸಂಸ್ಥಾಪಕನೂ ಇಲ್ಲ. ಆದ್ದರಿಂದ ಇದು ಧರ್ಮವಲ್ಲ ಆದರೆ ಜೀವನ ವಿಧಾನ, ಸದ್ಗುಣ., ಏಕೆಂದರೆ ಅದು ವ್ಯಕ್ತಿಗಳಿಂದ ಬರುವ ಜ್ಞಾನವಲ್ಲ. ನೀವು ಕೇಳಿದಂತೆ ನಾನು ಕೇಳುತ್ತೇನೆ. ಉತ್ತರಿಸಬಹುದು. ರಸಾಯನಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಸ್ಥಾಪಕರು ಯಾರು? ಇದಕ್ಕೆ ನೀವು ಖಚಿತವಾದ ಉತ್ತರವನ್ನು ಹೊಂದಿದ್ದೀರಾ? ಆಗುವುದಿಲ್ಲ. ಈ ಸಾಂಪ್ರದಾಯಿಕ ಹಿಂದೂ ಧರ್ಮವು ಅನೇಕ ವಿಜ್ಞಾನಿಗಳ ಸಂಶೋಧನೆಯ ಫಲಿತಾಂಶವಾಗಿದೆ. ಆ ಸಂಶೋಧಕರು ನಮ್ಮ ges ಷಿಮುನಿಗಳು, ಮುಂಚೂಣಿಯಲ್ಲಿದ್ದಾರೆ.

ಅನ್ಯ: ಅಪರಾಧದಿಂದ ಬೆರಗಾದ.
ಸ್ವಾಮಿ ಚಿನ್ಮಯಾನಂದ: ನೀವು ಕ್ರಿಶ್ಚಿಯನ್ನರನ್ನು ಕೇಳಿದರೆ, ಅವನು ನಿಮಗೆ ಬೈಬಲ್ ಕೊಡುತ್ತಾನೆ. ಮುಸ್ಲಿಂ ತನ್ನ ಸಹೋದರನನ್ನು ಕೇಳಿದರೆ ಕುರಾನ್ ನೀಡುತ್ತದೆ. ಕೇಳಿದರೆ ಅದೇ ಹಿಂದೂಗಳನ್ನು ತನ್ನ ಗ್ರಂಥಾಲಯಕ್ಕೆ ಆಹ್ವಾನಿಸುತ್ತಾನೆ.
ಯಾಕೆಂದರೆ ಇಲ್ಲಿರುವುದು ಮಧ್ಯಮವಲ್ಲ… ಅನಂತ
ಹಿಂದೂ ಧರ್ಮವು ಒಂದು ಧರ್ಮವಲ್ಲ ...
. ಭಾರತೀಯರ ಜೀವನ ವಿಧಾನ
ಹಿಂದೂ ಧರ್ಮ ಸಾಂಪ್ರದಾಯಿಕವಾಗಿದೆ.

-


1 MAR 2020 AT 11:50

ಸಿದ್ಧಿಯು ತಲೆಗೇರೆ ಆಂತರ್ಯ ಸವೆಸುವುದು
ಕುಂದಿಸುವುದದು ದೊರೆವ ಗೌರವವನು
ಸಂದ ಜಸದೊಡೆ ದಿನದಿ ನೆನೆ ನೀನು ಮೊದಲಡಿಯ
ಮದಕೆ ಮದ್ದದು ಜಗದಿ -ಪರಿತ್ಯಾಗಿ

-