ಮನ ಸೆಳೆದ ಮೊದಲ
ನಗುವಿನೊಡತಿ ನೀನು
ಆ ನಗುವ ಮನದುಂಬಲು
ಜಪಿಸಿ ಕುಳಿತವ ನಾನು
ಹೊಂಬೆಳಕ ಬೀರಿ
ಮನದ ಮೂಲೆಯಲು
ಬೆಳಗು ಹರಿವಂತೆ
ಚೆಲ್ವ ಸುಖ ಹರಿಸಿ
ಹೊಸ ಪುಳಕಗಳು
ಹುಟ್ಟುಪಡೆಯುವಂತೆ
ನಗೆಯೆಂಬ ನವಿಲುಗರಿಯ
ಮನಕೆ ನವಿರಾಗಿ ಸವರಿರುವೆ
ಅದ್ಯಾವ ಸೂಜಿಗಲ್ಲಿಟ್ಟಿರುವೆ
ನಿನ್ನ ನಗುವೊಳಗೆ
ಪದೆ ಪದೆ ಅದೆ ನಗುವಿಗೆ ನಾ
ಮರುಳಾಗುವುದು ಹೇಗೆ?-
ಕಣ್ಣಂಚಲಿ ನೀರು ಸುರಿಯಲು ಕಾದಿತ್ತು
ಮುಖವೆಲ್ಲ ಮುದುಡಿ ಹೊಗಿತ್ತು
ಮನಸ್ಸು ನೋವ ತಡೆದಿತ್ತು
ಕನಸೊಂದು ಮತ್ತೆ ಮತ್ತೆ ಕಾಡಿತ್ತು
ತೊರಿಕೆಯ ಜೀವನ ಜಾರಿ ಬಿದ್ದಿತ್ತು
ಈ ಲಾಕ್ ಡೌನ್ ಸಮಯದಲಿ....!-
ಬೆಟ್ಟದಷ್ಟು ಪ್ರೀತಿಯ
ಕಟ್ಡಿದರು ಬಿಟ್ಟುಹೊದೆಯಲ್ಲ
ಕಟ್ಟಿದ ಪ್ರೀತಿಯ
ಬೆಟ್ಟವಂತು ಕೆಡವಲಾಗದು
ನೀ ನನ್ನ ಮರೆತು
ದೂರಾದರೇನಂತೆ
ಆ ಬೆಟ್ಟವನ್ನ
ಪ್ರತಿದಿನ ಪ್ರೀತಿಸುವೆ
ನಿನ್ನ ನಾ ಕಾಣುವೇ
ಅಲ್ಲಿ ಏನು ಮಾಡಲಿ
ಹೇಳು ಬಡವ ನಾನು
ಬರಿ ಪ್ರೀತಿ
ಉಚಿತವಲ್ಲ ಎನ್ನುವುದ
ಸರಿಯಾಗಿ ಕಲಿಸಿ ಹೋದೆ ನೀನು-
ನಾನಿದ್ದೆ ನನ್ನ ಪಾಡಿಗೆ
ಅದೆಲ್ಲಿಂದಲೋ,ಬೀಸಿ ನಿನ್ಹೆಸರಿನ ಗಾಳಿ
ಉಸಿರಾಗಿಬಿಟ್ಟಿತು ನನ್ನೆದೆಯ ನಾಡಿಗೆ❤️
-
ಕರ್ಮ ಧರ್ಮದ ಕೈಂಕರ್ಯದಾಟದಲಿ,
ದಾಟಿದವರೆಷ್ಟೋ ಸತ್ವರಂಜಕವ,
ಸಾಧಿಪರು ಸದ್ಗುಣವಿಹೀನರು,
ಕೊಂದುಂಡವರು ನಿನ್ನ ಭಕ್ತರು,
ಕರ್ಮಹೀನರು ನಿನ್ನಾರ್ಥ ಸಾರ್ವರು
ಭಗವಂತ..
ತಿಳಿಹೇಳಿ ತುಳಿವ ಹೇಸಿಯನೋರೆಸಿ
ಕೊಂಬವರಿಲ್ಲ, ಮಾನವೀಯತೆಯದೆನ್
ಅನೈತಿಕ ನಾದವೋ, ಇಲ್ಲ ಉಳಿವ
ಭಾದೆಯೋ ಕಾಣೆ ಭಗವಂತ..-
ನಿನ್ನ
ಸಾಮೀಪ್ಯ
ಇಲ್ಲದೆ
ಶಾಂತವಾಗದು
ಈ ಮನ..
ಬಂದುಬಿಡು
ಸನಿಹ
ನಾ ನಿನ್ನ
ನೆನೆದು
ಮರುಗುವ
ಮುನ್ನ...-
ಜೀವನವೆಂಬ ಸಮರದಲಿ
ನೀ ಜೊತೆಯಾಗಿರು ಮನವೆ ಆಗ ನೋಡು
ಜೀವನ ಸಾಕ್ಷಾತ್ಕಾರವು.-
ಹಣೆಯ ಹಾದಿಯಲಿ
ಸುಳಿಯದೆ ನನ್ನಳಿಸಿದ ನಿನ್ಹೆಸರ
ಕವನಗಳ ಸಾಲಲಿ
ಇರಿಸಿ ನಗಿಸಿರುವೆ ನನ್ನುಸಿರ-