★★★★
-
ನನ್ನೀ ಮುಂಗುರುಳ ರಾಶಿಯೊಳು
ನಲಿಯುತಿಹನು
ಒಲವಸುಧೆಯಾಗಿ
ನನ್ನೀ ನಗುವ ಚಂದನದೊಳು
ಬೆರೆತಿರುವನು
ಜ್ಞಾನಸುಧೆಯಾಗಿ
ನನ್ನೀ ಆಂತರ್ಯದ ಒಡಲೊಳು
ಐಕ್ಯವಾಗಿರುವನು
ಜೀವಭಾವದ ಸುಧೆಯಾಗಿ.!-
💐💐ನನ್ನ ಕಲ್ಪನೆಯ ಚಲುವನಿಗೆ ನನ್ನೀ
450ನೇ ಕವನದಭಿಷೇಕ..💐💐
ಯಾರವ ಎಂದು ಕೇಳಬೇಡಿ,ನನಗೂ ತಿಳಿಯದವ
ಅವ ನನ್ನವ,ನನಗೆ ಮಾತ್ರ ಸ್ವಂತದವ..😍😍😘
Read Caption..✍✍👇👇👇👇
-
ನನ್ನವನೊಬ್ಬ ಕವಿ,
ಅವನ ಬರಹಗಳಿಗೆಲ್ಲ ನಾನೇ ಸ್ಪೂರ್ತಿ.
ಅಲಂಕಾರ ಬಳಸಿದ ಅವನ ಕವಿತೆಗಳಲ್ಲಿ,
ಅಲಂಕಾರವನೇ ಮಾಡದೆಯು ನಾ ಚೆಂದ.
ಅವನ ವರ್ಣನೆಯ ಪದಪುಂಜಗಳಲಿ,
ಕನ್ನಡಿಯೆದುರು ನಿಂತರೂ ದೊರಕದಾ ಆನಂದ.-
ಕಾಯಕದೊಳಗಿನ
ನಿತ್ಯ ಆರಾಧಕನಿವ
ವೈರಾಗಿಯಂತೆ.!
ನೋವು ನಲಿವುಗಳಲ್ಲೂ
ಆತ್ಮೀಯ ಸ್ನೇಹಿತನಿವ
ಸಾಂಗತ್ಯಕ್ಕೆ ಶ್ರೀಕಾರ.!
ಅದೇನೆ ಕೆಲಸವಿದ್ದರೂ
ಒಂದು ಕ್ಷಣವೂ
ನೆನೆಯದಿರಲಾರ
ನನ್ನನು ನನ್ನೊಳಗಿನ
ಒಲವಸುಧೆಯನ್ನು
ಹರಿಸುವ ಝೇಂಕಾರ.!
ಸದಾ ಒಡನಾಟದಿಂದ
ನನ್ನ ಗೆದ್ದವನು
ಕರುಣೆಯ
ಪರಾಕಾಷ್ಠೆಯನ್ನು
ನನಗಾಗಿ
ಮೀಸಲಿರಿಸಿದವನು
ನನ್ನೊಲವಿನ ಓಂಕಾರ.!-
ಇರುಳೊಳು ನನ್ನೆದೆಯ ಬೀದಿಯ ತುಂಬೆಲ್ಲಾ ಕರಿಮೋಡಗಳ ಚಾದರ;
ಅದರೊಳು ಗೋಚರಿಸಿವೆ ಬೆನ್ನೇರಿದ ನನ್ನೊಲವ ಕನಸುಗಳ ಸಾಗರ!-
ಮನದಲ್ಲಿ ಅಡಗಿರುವ ಭಾವನೆಗಳಿಗೆ ಪೆದ್ದು ಎಂಬ ಬಿರುದು ಕೊಟ್ಟು ಮನದ ಮೂಲೆಯಲ್ಲಿ ಶಾಶ್ವತ ಜಾಗ ಕೊಟ್ಟು ಮುದ್ದು ಮಾಡುತ್ತೀರುವೆ ನಿನ್ನನ್ನು ಒಬ್ಬಂಟಿಯಾಗಿ.
(ಕಲ್ಪನೆ)-
ನನ್ನವನೆಂದರೆ;
ನನ್ನಂತರಂಗದೊಲುಮೆಯೊಳು
ದಿವ್ಯವಾಣಿಯ ಮಂಜುಳಸುಧೆಗೆ ಕೊಳಲಾಗುತ್ತ
ಅವ್ಶವಚ್ಛಿನ್ನವಾಗಿ ನನ್ನುಸಿರಿಗೆ
ಉಸಿರಾಗಿರುವವನು!-
ಬೇಕಂತಲೇ ನನ್ನ
ಮರೆತಂತೆ ನಟಿಸಿ
ನನ್ನ ಸತಾಯಿಸಿ
ಅಮೇಲೆ ಮತ್ತೆ ನನ್ನ
ರಮಿಸಿ ಸಿಹಿಯಾದ
ಕಾಟ ಕೊಡುವ
Handsome ರಾಕ್ಷಸನೆ
ನನ್ನವನು 💞-
ಬವಣೆಗಳ ಬದಿಗೊತ್ತಿ ಭಾವನೆಗಳ ಬೀದಿಯಲಿ ಭರವಸೆಯ ಬೆಳದಿಂಗಳ ಬೆಳಕನ್ನು ಬದುಕಲಿ ಬೀರುತ ಬಂದವನೆ ನನ್ನವನು
-