ಊರು ಬಿಟ್ಟು ಕೆಲಸಕ್ಕೆಂದು ಬಂದವರಿಗೆ ದಿನದ ಕೊನೆಯ ಸಂತೋಷ ಮತ್ತೆಲ್ಲೂ ಇಲ್ಲ,
ಮನೆಯವರೊಂದಿಗೆ ಮಾತನಾಡಿ, ಯೋಗಕ್ಷೇಮ ವಿಚಾರಿಸಿ, ಚಿಕ್ಕ ಚಿಕ್ಕ ಕಾರಣಗಳಿಗೂ ತುಸು ನಕ್ಕು, ಕೊನೆಯಲ್ಲಿ ಅವರು ತೋರಿಸುವ ಪ್ರೀತಿ ಚನಾಗ್ ಊಟ ಮಾಡು, ಹುಷಾರು, ನಾಳೆ ಕಾಲ್ ಮಾಡು ಅನ್ನೋದ್ರಲ್ಲಿದೆ..❤️😊
GouriNag..✍️-
* ಬದ್ಕೋಕೊಂದು ಸರ್ಕಾರಿ ಕೆಲಸ ಇದೆ,ಸರಕಾರಿ ಕೆಲಸವೇ ದೇವರ ಕ... read more
ಅದೆಷ್ಟೋ ಹೃದಯಗಳು ದುಃಖಿಸಿದ್ದು
ಹಣಕ್ಕಾಗಿ ಅಲ್ಲ,
ತನ್ನವರ ತುಸು ಪ್ರೀತಿಗಾಗಿ ಅಷ್ಟೇ ..❤️
Gourinag..✍️-
😍ನಮ್ದೊಂತರ ಮುಗಿಯದ ಕವಿತೆ..😍
ಮಾರ್ನಿಂಗ್ 8:00 ಗಂಟೆಗೆ ಏಳುವ
8:30 ವರೆಗೂ ರೀಲ್ಸ್ ನೋಡುವ, ಶೇರ್ ಮಾಡುವ,
8:30 ರಿಂದ ಫ್ರೆಶಪ್ ಆಗುವ, ರೆಡಿ ಆಗುವ, ಪಬ್ಲಿಕ್ಸ್ ಕಾಲ್ಸ್,ಆಫೀಸ್ ಕಾಲ್ಸ್,ಅಟೆಂಡ್ ಮಾಡುವ,
9:45ಕ್ಕೆ ತಿಂಡಿ ತಿನ್ನುವ, ದೇವರಿಗೆ ಕೈ ಮುಗಿಯುವ,
10:00 ಗಂಟೆಗೆ ಆಫೀಸ್ ಗೆ ಹೊರಡುವ, ವರ್ಕ್ ಮಾಡುವ, ಮೀಟಿಂಗ್ ಅಟೆಂಡ್ ಆಗುವ,
ಮಧ್ಯಾನ್ಹ ಊಟ ಮಾಡುವ, ಮಾಹಿತಿ- ಗೀಹಿತಿ
ಅಂತಾ ತಲೆಕೆಡುಸ್ಕೊಳುವ, ಟಪಾಲ್ ಬರಿಯುವ
ಸಂಜೆ ಫ್ರೆಂಡ್ಸ್ ಜೊತೆ ಸ್ನಾಕ್ಸ್ ತಿನ್ನುವ, ಟೀ ಕುಡಿಯುವ
ಕೊನೆಗೆ 7 ರಿಂದ 8 ಗಂಟೆಯೊಳಗೆ ಮನೆ ಸೇರುವ, ಹಾಗೇ ಊಟ ಮಾಡುವ, ಮನೆಗೆ ಕಾಲ್ಮಾಡಿ ಮಾತಾಡುವ, ಮತ್ತೆ ರೀಲ್ಸ್ ನೋಡುವ,
ಶೇರ್ ಮಾಡ್ತಾ ಮಾಡ್ತಾ ಮಲಗುವ,
ಮಿಡ್ನೈಟ್ ಎಚ್ರ ಆದ್ರೆ ಲೈಫ್ ಬಗ್ಗೆ ಸ್ವಲ್ಪ ಥಿಂಕ್ ಮಾಡುವ, ಅತಿಯಾದ ಯೋಚ್ನೆ ಆರೋಗ್ಯಕ್ಕೆ ಒಳ್ಳೇದಲ್ಲಂತಾ ಲೈಫ್ಗೊಂದು ಡೋಂಟ್ ಕೇರ್ ಹೇಳುವ
ಮತ್ತೆ ಬ್ಲಾಂಕೆಟ್ ಹೊದ್ದು ಮಲಗುವ,
ಮಾರ್ನಿಂಗ್ ಎಚ್ರ ಆದ್ರೆ ಎದ್ದೇಳುವ
ಇಲ್ಲಾ ಹಾಗೇ ಚಿರನಿದ್ರೆಗೆ ಜಾರುವ.. 😊
Gourinag..✍️-
ಹ್ಮ್ ಆಗಾಗ ಅವನ
ಮೇಲೆ ಒಲವು
ಆಗಿದ್ದುಂಟು!
ಅದನ್ ಮುಂದುವರಿಸದೆ
ಹಾಗೇ ಬಿಟ್ಟಿದ್ದು ಉಂಟು!
ಅವನ ನೆನೆದಾಗೊಮ್ಮೆ
ಮುಖದಲ್ಲಿ ಸಣ್ಣ
ಮುಗುಳ್ನಗೆ ಮೂಡಿದ್ದುಂಟು!
ಮನಸ್ಸಿಗೆ ಬುದ್ದಿ ಹೇಳಿ
ಮುಗುಳ್ನಕ್ಕು ಮುಂದೆ
ಸಾಗಿದ್ದುಂಟು...!
🤫😍😍😊❤️-
ಹ್ಹಾ ಹ್ಹಾ ಹ್ಹಾ
ಹ್ಹು ಹ್ಹು ಹ್ಹು...
ನಾ ಇನ್ನೂ ಬದ್ಕಿದಿನಿ...
ಮತ್ ನೀವು ಏನ್ ಅನ್ಕೊಂಡಿದ್ರಿ 🙄🤭😄-
ನನ್ ಗಂಡ ಛಲೋ ಮನುಷ್ಯ ರಿ
ನಾ ಮಾಡಿದ್ದು ಅಡುಗೆ ಅಮೃತ ಅಂತಾ
ತಿಳಿದು ಉಣ್ತಾನ... 😄😄😄-
ನಾನು ಮದ್ವೆ ಆಗೋ ಹುಡ್ಗ ಸಿಟ್ಟಲ್ಲಿ ಒಂದೇರ್ಡು ಬೈದ್ರೂ ಪರ್ವಾಗಿಲ್ಲ, ನಾನು ಅಳುವಾಗ ಎದೆಗೆ ಅಪ್ಕೊಂಡು ಮುದ್ದು ಮಾಡ್ಕೊಂತಾ ಸಮಾಧಾನ ಮಾಡಿದ್ರೆ ಅಷ್ಟೇ ಸಾಕು.😍😉
-
ಯಾಕೋ 12 ಗಂಟೆ ಆದ್ರೂ ನಿದ್ದೆ ಬರ್ತಿಲ್ಲ, ಯಾರ್ದಾದ್ರೂ ಹುಟ್ದಬ್ಬ ಇದ್ರೆ ಹೇಳಿ ವಿಶ್ ಮಾಡ್ತೆ,
ಸುಮ್ನೆ ಎಚ್ರ ಇದ್ದೂದ್ದುಕ್ಕಾದ್ರೂ ಯೂಸ್ ಆಗ್ಲಿ.. 😄😄-