ಕಾರಿರುಳು
ಸರಿಸುತಿದೆ
ಮನದೊಳು
ಆವರಿಸಿದ
ಭಯದ ಛಾಯೆ!
ಕಾದಲನ
ಬರುವಿಕೆಗೆ
ಉಲ್ಲಾಸದಿ
ಮನಸ್ಸಿನ
ದುಗುಡ ಮಾಯೆ.!-
ಕಾರಿರುಳಲ್ಲಿ ಚಂದ್ರಿಕೆಯನ್ನಾವರಿಕೊಂಡು
ಅರಳಿರುವ ಕುಸುಮಕ್ಕದೇ ಬಿಗುಮಾನ
ಸೌಗಂಧವ ದಶ ದಿಕ್ಕುಗಳಿಗೆ ಪಸರಿಸಲು
ನಶೆಯ ಕುರಿತು ಈಗಲೂ ಅದಕ್ಕನುಮಾನ.-
ಕಾರಿರುಳು ಸರಿಸುತಿವೆ
ನೋವಿನ ಆ ಕ್ಷಣಗಳ ಹೊತ್ತ
ನಿದೆರೆಯ ಮಡಿಲು ನೋವು ನಲಿವುಗಳ
ಮರೆಸಿ ನೆಮ್ಮದಿಯ ವೀಣೆ ನುಡಿಸುತಿಹುದು!
ಹೃದಯದ ಬಡಿತದ ತುಡಿತವು
ನವ್ಯ ಗಾನಬಜಾನ
ಮಿಡಿದಿದೆ ಮನದೊಳು ಸಮೃದ್ಧ ಗಾನ
ಈ ರಾತ್ರಿಯ ಚೈತ್ರ ಚಂದಿರನ ಚೆಲುವಿನಂದದ
ಸಿರಿ ಸಂಪದದೊಳು ನವ ಋತುಗಾನದ ಇಂಪು
ಕರ್ಣಗಳಿಗೆ ತಂಪು ನಿನಾದದ ಕಂಪು!
ಭಾವದುಸಿರಿನ ಸಂಕಲನದೊಳು
ಜೀವಭಾವದ ಸಂಚಲನ
ತಂತಿ ವೀಣೆಯ ಮಿಡಿದ ಸ್ವರಲಹರಿಯೂ
ನನ್ನೆದೆಯೊಳು ಮೃದು ಮಧುರ ಶಾಯರಿ!
ಕನಸುಗಳ ಆಹ್ವಾನಿಸುತ
ನೆನಪುಗಳ ತೇಲಿಸುತ
ಮನಸು ಶಿಸ್ತಿನ ಸಿಪಾಯಿಯಾಗಿರದೆ
ಚಂಚಲತೆಯೊಳು ಸ್ಥಿರತೆಯ ಕಾಯ್ದುಕೊಂಡು
ಘನ ಗಾಂಭೀರ್ಯತೆಯ ಪ್ರದರ್ಶಿಸುತಿರಲೂ..!-
ಬದುಕಿನಲಿ ಬೆರೆತು ಬರುವವು ಸುಖ ದುಃಖಗಳು
ತೇಲಿ ಬರುವಂತೆ ಗಾಳಿಯಲ್ಲಿ ಗಂಧದ ಘಮಲು,
ಮನದಲಿ ಅಚ್ಚಳಿಯದೆ ಉಳಿಸಿಹೋಗುವ ಕೆಲವು ಮೌನವಾದ ಮಾತುಗಳ ಕಾರಿರುಳು, ಶೋಧಿಸುತ್ತ ಹೋದಷ್ಟು
ನಿಗೂಢವಾಗುವ ಬಾಳ ತಿರುವುಗಳು,
ಎಲ್ಲವನ್ನು ಒಡಲೊಳಗೆ ಹೊತ್ತು ಸಾಗುವುದೀ ಜೀವನದ ಕಡಲು...-
ಕಾರಿರುಳ ಸಂಧಿಯಲ್ಲು ಇಣುಕುವ ಮಿಣುಕು ಬೆಳಕಂತಾಗು ನೀ, ಬೇಡದ ಶಿಕಾರಿಯ ಬೆನ್ನತ್ತಿ ಬೆಂಬಿಡದೆ ಕಾಡುವ ಭೂತವನ್ನೊಕ್ಕಿಸಿಕೊಳ್ಳಬೇಡ,
ಗಗನ ಕುಸುಮವನ್ನರಸುವ ಬದಲು ಕಾಲ್ಬಳಿಯಿರುವ ಬಳ್ಳಿಯನ್ನಪ್ಪಿ ಬೆಳೆಯುವುದ ಕಲಿ ಮತ್ತು ಬೆಳೆಸುವುದ ಕಲಿ...ಇದುವೆ ಪರಿಪಕ್ವತೆಯ ತೋರುವ ಹಾದಿಯದು ನೋಡಾ...-
ಕಾರಿರುಳ ಕತ್ತಲೆಯ ಕಡುಮೌನ ಮತ್ತೆ ಕೈ ಬೀಸಿ ಕರೆಯುತ್ತಿದೆ..!
ಕರೆದರೂ ಕೇಳಿಸದಂತೆ
ಕೈ ಬೀಸಿದರೂ ಕಾಣಿಸದಂತೆ ಕಲ್ಲಾಗಿ ಹೋದ ಅವರಿಗಾಗಿ ಸುರಿದ ಕಂಬನಿ ಕಣ್ಣಿನ ಕೊಳದಲ್ಲೆ ಕರಗುತ್ತಿದೆ..!!-
ಕನಸುಗಳ ರಂಗಾದ ಬೆಳಕಿನಲ್ಲಿ
ಸಾಗಿಹುದು ಜೀವನ,
ಕಾರಿರುಳು ಹೊತ್ತಿಗೆ
ಮತ್ತದೇ ನಿಶ್ಚಿಂತ ನಿದ್ರೆ
ಮೊಗದ ಮೇಲೆ ಶಾಂತ ಮುದ್ರೆ.-
ಮುಂಗುರಳು
ಹೆಚ್ಚಿಸಿದೆ
ಮನಸಿನಲ್ಲಿ
ಮೂಡಿದ
ಒಲವಿನ ಓಲೆ;
ಮನದರಸಿ
ಬರಲಿಹಳು
ಮನವೆಲ್ಲ
ಸಿಂಗರಿಸಿದೆ
ಕನಸುಗಳ ಹೊಳೆ;-
ಹಗಲಿರುಳು
ಕಾಡುತಿವೆ
ಹೃದಯದೊಳು
ಬಚ್ಚಿಟ್ಟ ಬಯಕೆಗಳು
ಲಜ್ಜೆಗೆ ಹೆದರಿ
ನೀನೇ ಅರಿತು
ಗಟ್ಟಿಯಾಗಿ
ಬಿಗಿದಪ್ಪಿಬಿಡು
ತುಸು
ಪ್ರೀತಿಯಿಂದ
ಗದರಿ
-
ಈ ದಿನದ
ಬರುವಿಕೆಗೆ
ಕಾಯುತ್ತಿತ್ತು ಮನ...
ನನ್ನವಳ
ಗತ್ತಿನಿಂದ
ನಾಚಿಸುವ ದಿನ...
-