QUOTES ON #ಕವಿತೆ

#ಕವಿತೆ quotes

Trending | Latest
11 JUN 2019 AT 17:35

Paid Content

-


12 NOV 2020 AT 8:27

ಕೆಲವೊಮ್ಮೆ
ಅಡೆತಡೆಗಳಿಲ್ಲದಿದ್ದರೆ
ಬದುಕೊಂತರ
ನಿಮ್ಮಳವಾದ
ಭಾವಸಾಗರದ ಬೀದಿ!
ಒಮ್ಮೊಮ್ಮೆ
ಏರಿಳಿತಗಳುಂಟಾದರೆ
ಆರ್ಭಟಿಸುವ
ಜನಸಂದಣಿಯುಳ್ಳ
ನಿರ್ಭೀತಿಯಿಲ್ಲದ ಹಾದಿ

-


28 NOV 2019 AT 6:59

ಅವನೊಂದು ನನ್ನೊಳಗಿರುವ ಮರೆಯದ ಕಾದಂಬರಿ!

-


22 NOV 2019 AT 15:59

ಕವಿತೆ:
ಹಸಿರು ಸಿರಿ ಬನದದೊಳಗೆ ಹೊಮ್ಮುವ
ಭಾವನಾತ್ಮಕ ಕ್ಷಣಗಳ ವಿಶಿಷ್ಟ ಚಿತ್ತಾರದಿ
ಜೀವದ ತುಂಬೆಲ್ಲಾ ಉಕ್ಕುತ್ತ ˌನಲಿಯುತ್ತಾ
ಪುಟಿಯುತ್ತˌ ಕುಣಿಯುತ್ತ ˌಚಿಮ್ಮುತ್ತˌ
ಜಿಗಿಯುತ್ತ
ಬುಗ್ಗೆಯಂತೆ ನಿರಾಂತಕವಾಗಿ
ನಿರಾಯಾಸವಾಗಿ
ಭಾವನಾತ್ಮಕವಾದ ಪದಪುಂಜಗಳ
ರಮ್ಯಮನೋಹರದೊಳು
ಇಂಪು ಕಂಪಿನ ಬಳುಕಿನಾಳದ
ಸುಗ್ಗಿಯ ಕುಣಿತವೆ ಕವಿತೆ!
ಹೀಗೆ
ಕವಿಯ ಹೃದಯದೊಳು ಹೊರಹೊಮ್ಮುವ
ಭಾವನೆಗಳ ಸುಂದರ ಸ್ಫುರಿಸುವಿಕೆಯೇ
ಕವಿತೆ!

-


9 APR 2019 AT 20:16

ನಿನ್ನ ಬಿಂಬವೆ ಎನ್ನ ಕಾಡಿದೆ,
ಕುಡಿ ಹುಬ್ಬು ಕಥೆಯ ಹೇಳಿದೆ,
ನೋಟವೆ ತಬ್ಬಲು ನೆಪವಾಗಿದೆ,
ಪರಿಸರದಲ್ಲಿ ಇಬ್ಬನಿ ನಾನು,
ಬಿದ್ದ ಹನಿಗಳ ಗಮ್ಯ ನೀನು!

ನಿನ್ನ ಕನಸಿಗೆ ಭಿನ್ನ ಹೆಸರಿದೆ,
ಪ್ರತಿ ಪದಗಳ ಕಳೆಯು ಹೆಚ್ಚಿದೆ,
ದೃಷ್ಟಿಯ ಶಂಕೆಗೆ ಕಾಡಿಗೆ ಛಾಪಿದೆ,
ಹೂವಲ್ಲಿ ಮೃದು ಪಕಳೆ ನಾನು,
ಬಿದ್ದ ಹನಿಗಳ ಗಮ್ಯ ನೀನು!

-


28 FEB 2019 AT 10:14

ಮಾಸಿ ಹೋಗದ ಬಣ್ಣ ನಾನಾಗುವೆ ಚಿನ್ನ..
ಬಣ್ಣ ಬಳೆವ ಕಲಾವಿದ ನೀನಾದರೆ ಚೆನ್ನ..

ನೂರಾರು ಭಾವನೆಗಳಿವೆ ನನ್ನ ಮನದಲ್ಲಿ..
ಹೇಗೆ ಅದ ಬಣ್ಣಿಸಲಿ ಈ ಪುಟ್ಟ ಕವಿತೆಯಲ್ಲಿ

ನಿನ್ನ ಸನಿಹ ಬೇಕೆಂದು ಕಾಯುತ್ತಿದೆ ಮನಸು
ವಾಸ್ತವವನ್ನು ಬಿಟ್ಟು ಮನ ಕಾಣುತ್ತಿದೆ ಕನಸು

-


28 FEB 2019 AT 17:23

ನನ್ನ ಮನ ನೊಂದಿದೆ ಇಂದು..
ಬಣ್ಣಿಸಲಾಗದ ಈ ಭಾವನೆಗಳ
ಕವಿತೆಗಳಾಗಿ ಬದಲಿಸುವ ಬಯಕೆ ನಂದು..

ಭಾವನೆಗಳ ಅಲೆಗಳಿಗೆ ಬೇಲಿಹಾಕಬೇಕಿದೆ
ಹಳೆ ನೆನಪುಗಳ ನೋವುಗಳನು
ನಾ ಇಂದು ಮರೆಯಬೇಕಿದೆ

ಕಣ್ಣೀರ ಕೊಳ ನನ್ನ ಮನದ
ಬರಗಾಲಕೆ ಬತ್ತಿ ಹೋಗುತ್ತಿಲ್ಲ..
ನನ್ನ ಮನಸೇ ನನ್ನ ಮಾತನ್ನು ಕೇಳುತ್ತಿಲ್ಲ

ಮುಗುಳುನಗೆಯ ಮುಖವಾಡ ಹಾಕಿ
ನೋವೆಂಬ ನಿಜವನ್ನು ಮರೆಮಾಚಿ
ವಿಷಾದದ ನಿಷಾದವಾದರೂ ಸ್ವರ
ಖುಷಿಯಾಗಿ ಷಡ್ಜದಲ್ಲಿ ಹಾಡಿದಂತೆ !!

-


26 SEP 2020 AT 8:22


ಮತ್ತೆ ಮನ ಕರ್ಕಶದಿ ಕಿರುಚಾಡುತ್ತಲೇ ಇದೆ ಇತಿಶ್ರೀ ಇಲ್ಲದಂತೆ..
ಅದೇ ಕಹಿ ಸಂಕಟ, ಪಕ್ವವಾಗದ ಹುಸಿ ಭರವಸೆ!
ಒಳಮನಕ್ಕೆ ಈಗಾಗಲೇ ಕಳವಳದ ತಳಹಿಡಿದಾಗಿದೆ‌‌..
ಸರಪಣಿಯೊಂದು ಚಿರಪರಿಚಯವೆಂಬಂತೆ ಬಿಗಿದಪ್ಪಿದೆ..
ಅದೆಷ್ಟೋ ಮಾತುಗಳು ಅರ್ಥ ಕಳಚಿ ವ್ಯರ್ಥವಾಗಿವೆ..
ಹಚ್ಚಿದ ದೀವಿಗೆಯೊಂದು ಆರಿ ಹೋಗಿ ವ್ಯಂಗ್ಯಮಾಡುತ್ತಿದೆ..
ಕಬ್ಬು ಕಚ್ಚಲು ಕಹಿ ಹೆಚ್ಚಿದಂತಿದೆ...
ಚಂಪಕವೊಂದು ಕಂಪನವಿಲ್ಲದೆ ಅರಳಿದೆ..
ಕೋಗಿಲೆಯೂ ಕರ್ಕಶದಿ ಮೂದಲಿಸಿದೆ..
ಮೊಳಕೆಯೊಡೆದಿದ್ದ ಕನಸುಗಳೆಲ್ಲಾ ಹೊರಳಾಡಿ ಕಣ್ಮೆದುರೇ ಮಣ್ಣಾಯಿತು..
ಮುಂಜಾನೆಯ ಮಂಜಲ್ಲೂ ಕುದಿಯುತ್ತಿರೋ ನೆತ್ತರು ಬತ್ತಿದಂತೆನಿಸಿದೆ..
ಮಧ್ಯಾಹ್ನದ ಬಿಸಿಲಿಗೂ ಕತ್ತಲೆಯೇ ಕಾವಲ ಕೋಟೆ ಕಟ್ಟಿದೆ..
ಶುಧ್ದ ಗಾಳಿಯೂ ಕಲ್ಮಶಗಳ ತುಂಬಿ ಸಿಟ್ಟಿನ ದೀರ್ಘ ಉಸಿರಿಗೆ ತಡೆಯೊಡ್ಡಿದೆ..
ಗಂಟೆಗೆರಡು ಬಾರಿ ಮೀದರೂ ಅಸಹ್ಯವೊಂದೇ ಮನೆಮಾಡಿದೆ..
ತನ್ನ ತಾನೇ ಕಚ್ಚಿದರೂ ಕಂಬನಿ ಇಂಗಿ ಬರಲಾರೆನೆಂದಿದೆ..
ಗಾಯದ ಮೇಲೆ ನೊಣವೊಂದು ಕುಣಿದಾಡುತ್ತಿದೆ...
ಉದರದ ತುಂಬಾ ಶರಪರ್ವ ಹೊಡೆತದ ನೋವು ತೀವ್ರವಾಗಿದೆ....
ಹೆಣ್ಣು ಸಮಾಜದ ಕಣ್ಣೆಂದು ಹೇಳುವ ಜನ
ಯಾರ ಮನೆಯ ಹೆಣ್ಣೆಂದು ವಿವರಿಸಲಿಲ್ಲ!
ಕಣ್ಮುಂದೆ ಕೂಪವೊಂದು ಚಾಪೆ ಹಾಕಿ ಆಮಂತ್ರಿಸುತ್ತಿದೆ...
ಜೀವನದ ಪಯಣಕೆ ಪರದೆ ಎಳೆಯಲು ಉತ್ಸಾಹಿಯಾದಳಾಕೆ...
ಅಸಹ್ಯ ‌ ಭಾವನೆಯಲ್ಲೇ ಬದುಕಿನ ಬಂಧನ ಬಯಸದ ಆಕೆ
ತಾ ಮಾಡದಂತಹ ‌ತಪ್ಪಿಗೆ ಸಾವನ್ನ ಬಿಗಿದಪ್ಪೋ ಕಠಿಣ ನಿರ್ಧಾರದಲ್ಲಿದ್ದಳು..!

-


26 MAR 2020 AT 15:35

"ನನ್ನೆದೆಯ ಮಾತುಗಳು
ಎದೆ ತುಂಬಿ ಹೇಳಿದವು"
"ಏನೆಂದು ಕೇಳಿದಾಗ
ನಿನ್ನೆಸರೆ ಹೇಳಿದವು"

-


28 JUL 2019 AT 7:00

ನೀನೇನೋ ಕವಿತೆ
ನೆನಪಾದಾಗೆಲ್ಲ, ನನ್ನ
ಸೆರಗಿಗೆ ಗಂಟು ಬಿಗಿದು
ನಿರಮ್ಮಳನಾಗುವೆ
ಅಲ್ಲವೇ ಗಾಲೀಬ್.!
ನಾನೋ ಬಿರಿದಿಟ್ಟ
ಗಂಟು ಬಿಚ್ಚಿ, ಶಾಹಿ
ಹಾಳೆ ಸೇರುವ
ಬರಗೆಟ್ಟ ನಾಳೆಗಾಗಿ
ಉಸಿರುಗಟ್ಟಿ ಕಾಯುವೆ.!

-