QUOTES ON #ಅವಿಜ್ಞಾನಿ

#ಅವಿಜ್ಞಾನಿ quotes

Trending | Latest

ನಿನ್ನೆ ಅರೆಕನಸಲ್ಲಿ
ಚಂದ್ರ ತುಸು ಹೊಂಬಣ್ಣ
ಕಡ ನೀಡಿದ್ದಾನೆ
ಕನ್ನಡಿಗೆ ಹಚ್ಚಿಬಿಟ್ಟೆ ನಿನ್ನ
ಮುಖವಾಯಿತು
ಉಸಿರುಬಿಗಿದಿಟ್ಟು ಕೋ
ಕನಸಲ್ಲೇ ನಿನ್ನ ಬಣ್ಣ ಚೋರಿ
ಮಾಡುವೆ ಕಡ ತೀರಿಸಬೇಕು..!


-ಅವಿಜ್ಞಾನಿ

-



-



ಅದುಹಾಗೆ!!!

ಅತಿಯಾದ ಪ್ರೀತಿ
ಹೃದಯ ತುಂಬಿ
ಮಿತಿಮೀರಿದ ಭಾವನೆಗಳು
ತುಂಟತನ ತಾಳಿರಲು
ಹುಸಿಕೊಪದ ಮೌನ
ಬೇಕಾಗಿನಿಸಿದಾಗ
ಹೇಳುವುದಾದರು ಹೇಗೆ?
ಅದು ಹಾಗೆ....!!!— % &

-



ತೃಷೆಯ ಬೀಜ*

ಬಟ್ಟೆ ಹರಿದವಳ ಮೈ ನೋಡುವ ಕಾಮಿಗಳ ಕವನ,
ಬೆತ್ತಲೆಯಾಗಿ ದಾಹ ತಣಿಸುವ ವೇಶ್ಯೆಯ ಜೀವನ,
ಇಲ್ಲಿ ನೋಡುವವರಿಲ್ಲ ಕೇಳುವವರಿಲ್ಲ ಮೌನಯಾನ,
ಕೇಳಯ್ಯಾ ನೀ ಅವಿಜ್ಞಾನಿ ಸೋನೆ ಪದಗಳ ಭಾವಯಾನ.

-



ಭಾಗ ೧ ಚುಟುಕುಗಳು : ನನ್ನವ್ವ ಎಂದರೆ *

೧.
ನನ್ನವ್ವ ಎಂದರೆ
ಭವಿಷ್ಯತ್ ಗಳಿಗೆ ಜನ್ಮ ಕೊಟ್ಟು
ಕಷ್ಟ ಸುಖಗಳಿಗೆ ಜೀವ ಸವೆದು
ಅವನಿಯಂತೆ ನೆರಳಾದವಳು.

೨.
ನನ್ನವ್ವ ಎಂದರೆ
ಆ ದೇವಧೂತರಿಗೆ ವಿರೋಧಿಯಾಗಿ
ನಿಸ್ವಾರ್ಥಯಂತೆ
ವರ್ತಮಾನದೊಳಗೆ ಕಾಲವಾದವಳು.

೩.
ನನ್ನವ್ವ ಎಂದರೆ
ಭೂತ ಭವಿಷ್ಯತ್ ಗಳಿಗೆ
ಚಿತ್ರ ಬಿಡಿಸಿ
ವರ್ತಮಾನದಲ್ಲಿ ಬದುಕಿ ಬಾಳಿದವಳು.

೪.
ನನ್ನವ್ವ ಎಂದರೆ
ಹಾಳಾದ ನಗುವಿಗೆ ಒಲವಾಗಿ
ಕತ್ತಲಿಗೆ ಬೆಳಕಾಗಿ
ಭೂಮಿ ಬಾನುವಿಗೆ ಸೇತುವೆ ಕಟ್ಟಿದವಳು.

-


17 MAY 2020 AT 10:10

ಕಾಮತೃಷೆ ತಣಿಸುವಳು ವೈಶ್ಯೆ ತನ್ನವರ ಹಸಿವಿಗಾಗಿ
ಕಾಮಪಿಶಾಸಿಗಳ ಕಣ್ಣಿಗೆ ಅವಳೊಂದು ದೇಹ !
ಇತರ ಹೆಣ್ಣನ್ನು ಕಾಪಾಡುವಳು ತನ್ನ ಕಾಯಕವಾಗಿ
ಮೌನಿಯಾಗಿ ಚಡಪಡಿಸಿ ತಣಿಸುವಳು ದಾಹ !!

-


17 MAY 2020 AT 10:11

ಪತಂಗವನ್ನು ದಹಿಸುವ ಬೆಂಕಿಯಂತೆ

ಭಾವನೆಗಳ ಕಿತ್ತುತಿನ್ನುವ ರಣಹದ್ದಿನಂತೆ

ಹೆಣಗಳೂ ಹೋಗಲಂಜುವ ಸ್ಮಶಾನದಂತೆ

ಜಗತ್ತು ನಡೆಯುತ್ತಿರೆ

ನಾ ಮೌನಿಯಾದೆ

ಗೀಚತೊಡಗಿದೆ ಭಾವನೆಗಳ

ನನ್ನೆದೆಯ ಹಾಳೆಯಲ್ಲಿ...

-




Save Some Sweet
memories in your Mind
Before Tensions ruin it..

#ಅವಿಜ್ಞಾನಿ

-



ಕೆಲವರು ತಮ್ಮ ಕ್ಷಣಿಕ ಖುಷಿಗಾಗಿ
ಇತರರಿಗೂ ಕೂಡ ಮನಸ್ಸು ,
ಭಾವನೆಗಳು ಇರುತ್ತವೆ ಎಂಬುದನ್ನೇ
ಮರೆತಿರುತ್ತಾರೆ..... #

ಬರೀ ಸ್ವಾರ್ಥಕ್ಕಾಗಿ ಓಡುತ್ತಿರುವ ಪ್ರಪಂಚ,
ಇಲ್ಲಿ ಇತರರ ಭಾವನೆಗಳಿಗೆ ಬೆಲೆ ತುಂಬಾ ಕಡ್ಮೆ.. #

-



ಕಾಡ ಹೂವು
ಅತ್ಯಂತ ಪವಿತ್ರವಾದದ್ದು
ಯಾರಿಗೂ ಕಾಣದೇ
ಅರಳಿ ಬಾಡುವುದು.!

-ಅವಿಜ್ಞಾನಿ

-