ಶೃಂಗಾರ ಕಾವ್ಯ   (ಶೃಂಗಾರ ಕಾವ್ಯ)
38 Followers · 3 Following

read more
Joined 1 September 2018


read more
Joined 1 September 2018

-



ಅಧರಗಳ ಸಾಕ್ಷಿಯಾಗಿ
ವಿನೋದ ಲಾಸ್ಯಗಳ ಜೀವ
ಜ್ಞಾನ ಅಜ್ಞಾನಗಳ ಮಧ್ಯೆ
ನಿರ್ಮಲ ಭಾವಜೀವಿಯಾಗಿ
ಸೋ ಎಂದು ಸೋಬಾನೆ ಹಾಡಿಸಿ
ನೆನಪುಗಳ ಮೂಟೆಯನ್ನೊತ್ತು
ಸಾಗುತಿಹ ಅವಿಜ್ಞಾನಿ ಸೋನೆಗೆ
ಜನ್ಮ ದಿನದ ಶುಭಾಶಯಗಳು ದೋಸ್ತ್.

-




ಅಭಿನಂದನೆಗಳು ಗೋನೆ ❤❤

ಒಲವಿಗೂ ಒಲವನ್ನು ಕೂಡಿಸುವ ಶಾಂತಿದೂತನೇ
ನಿನ್ನ ಪದ ಪುಂಜಗಳ ರಾಶಿಯ ಕಂಡು ಮರುಳಾಗಿರುವೆ
ಸೋನೆ ಮಳೆ ಶ್ಯಾನೆ ನಕರಾ ಮಾಡೋ ಮುಖದವನೇ
ನಿನ್ನ ಮುದ್ದಾದ ಪದಗಳನ್ನು ಬಳವಳಿಯಾಗಿ ನೀಡು

ನನ್ನೊಳಗಿನ ಪ್ರೇಮ ಕಾವ್ಯವನ್ನು ಸುರಿದು
ಉತ್ತರಕ್ಕಾಗಿ ಶಬರಿಯಂತೆ ಕಾಯುತಿರುವೆ.
ನಿಮ್ಮ ಸಾಹಿತ್ಯ ಮೆರವಣಿಗೆ ಹೀಗೆ ಸದಾ ಸಾಗಲಿ ಗೋನೆ..
ಅಭಿನಂದನೆಗಳು ತುಂಬಾ ಉತ್ತುಂಗಕೇರು.

-



ಜಗತ್ತು ನನ್ನ ನೋಡುವ ರಂದ್ರವನ್ನು ಸೃಷ್ಟಿಸಿದೆ
ಜಗತ್ತು ನನ್ನ ಕಾಡಿಸುವ ತಂತ್ರವನ್ನು ಕಲೆಹಾಕಿದೆ
ಜಗತ್ತು ನನ್ನನ್ನು ಸೃಷ್ಟಿಸಿರುವ ರಂದ್ರಕ್ಕೂ ಆ ತಂತ್ರಕ್ಕೂ
ನನ್ನಂತ ಅದೆಷ್ಟೊ ಮೌನಿಗಳು ಸಶ್ಮಾನದಲ್ಲಿ ಸಂತಾಪ ಸೂಚಿಸುವಂತಾಗಿದೆ.

-



ಎದೆಯೊಳಗೆ ಕೈಯನಿಟ್ಟವನು
ಹೆಣ್ಣಿನ ಶೀಲ ಹರಣ ಮಾಡಿದವನು
ಕೈಗೂ ಮೈಗೂ ನಾಯಿಯಾದವನು
ಕ್ರಿಮಿಯಂತೆ ವರ್ತಿಸಿ
ಸಂಸ್ಕೃತನಂತೆ ಬೀಗುತಿದ್ದಾನೆ.

-



ಬಯಕೆಗಳೆಲ್ಲವೂ ಬೇಲಿಯನ್ನು ದಾಟಿದಾಗ, ತಾರುಣ್ಯದ ವಯಸ್ಸು ಕಾಡುವಾಗ, ಕಾಮ ಮೋಹ ಪೀಡಿಸುವಾಗ, ಹೆಣ್ಣಿನ ಆತಂಕ ತಳಮಳ ತೀವ್ರಗೊಂಡಾಗ, ಗಂಡು ಪ್ರಾಣಿಯ ಸ್ಪರ್ಶವೊಂದು,
ಮೈಯನೆಲ್ಲ ರೋಮಾಂಚನ ಮಾಡಿದಾಗ, ಹೆಣ್ಣು ಕಾಮದ ವಸ್ತು ಎನ್ನುವ ಪ್ರಾಣಿಗಳು, ಅವಳೊಬ್ಬಳು ಆಸೆ ಬಯಕೆಗಳಿರುವ ಜೀವ ಎನ್ನುವುದನ್ನು ಮರೆತಿರುತ್ತಾರೆ.. ಥೂ ಥೂ ಹಾಳು ಪ್ರಪಂಚ.

-



ವಸ್ತ್ರ ಧರಿಸದೆ ಮೌನವಾಗಿ ಕುಂತಾಗ, ಬೀದಿ ನಾಯಿಗಳ ವರ್ತನೆ ಮಿತಿ ಮೀರಿ ಕಾಡಿದಾಗ, ಕಾಮದ ಮದ್ದವೇರಿ ನೀತಿಯನ್ನು ತೊರೆದಾಗ, ತಾರುಣ್ಯದ ತಾಪ ನೀತಿಗೆಟ್ಟಾಗ, ಬೀದಿ ನಾಯಿಗಳ ಜತೆಗೆ, ತೆರಿಗೆಯಿಲ್ಲದೆ ದಾಹವನೆಲ್ಲ ತೀರಿಸಿಕೊಂಡಾಗ, ವೇಶ್ಯೆ ಎನ್ನುವ ಪದನಾಮನಿಟ್ಟ ಸಮಾಜ, ಥೂ ಥೂ

-



ಬಯಕೆಗಳು ಬೇಲಿ ದಾಟಿದಾಗ
ಭಾವನೆಗಳಿಗೆ ಉಪವಾಸ ಕೆಡುವವರ್ಯಾರಿದ್ದಾರೆ
ಬಯಕೆಗಳು ಬಾನಾಡಿಯಂತೆ ಒಂದಾಗಿ
ಇನಿಯನ ಸ್ಪರ್ಶಕ್ಕೆ ನಾ ಕಾದು ಕುಳಿತಿರುವಾಗ
ನನೆಲ್ಲ ಬಯಕೆಗಳ ರೂವಾರಿ, ಎಲ್ಲಿರುವೇ ನೀ ರಾಮಚಾರಿ.

-



ಹಸಿಬಿಸಿಯ ಬಯಕೆಗಳನೆಲ್ಲ, ಒಮ್ಮೆಲೇ ತಣ್ಣೀರ ರಾಶಿಯನೆಲ್ಲ ಚೆಲ್ಲಿ, ನನ್ನೊಳಗಿನ ಬಯಕೆಗಳಿಗೆಲ್ಲ
ಮತ್ತೆ ಮತ್ತೆ ಬಯಸುತ್ತಿದೆ, ಆ ಮೊದರ ಸ್ಪರ್ಶಕ್ಕೆ ಮನವು ಕಾತರಿಸುತ್ತಿದೆ, ನಿನ್ ಸಾಂಗತ್ಯದ ಪ್ರೇಮ ಸುಖ ಮತ್ತೆ ಬೇಕೆನಿಸುತ್ತಿದೆ.

-



ಮನದ ಭಾಷೆಗೆ ಮತ್ಯಾರ ನೆರವಿದೆ
ಮೌನವು ಮರೆಯಾದಾಗ ನನ್ನೀ
ಎದೆಯ ಪ್ರೇಮವು ಭಾಷಾಂತರವಾದ ಅಪಸ್ವರ.

-


Fetching ಶೃಂಗಾರ ಕಾವ್ಯ Quotes