ಹುಟ್ಟಿದಬ್ಬದ ಆತ್ಮೀಯ ಶುಭಾಶಯಗಳು ಅಣ್ಣಯ್ಯ..
ಬರಹಕ್ಕೂ ಸಂತುಷ್ಟಿ ಭಾವ ಕೊಟ್ಟವರು ನೀವು!
ನಂಬಿಕೆಯ ಬೆಳಕಾಗಿ, ಕಾಳಜಿಯ ಪ್ರತಿರೂಪವಾಗಿ
ಪ್ರೀತಿಯ ಹೊನಲಿನಲ್ಲಿರುವ ಅಪರೂಪದ ಮುತ್ತು ನೀವು
ಅವಳೆಡೆಗಿನ ಪ್ರೇಮದೊಲವ ಗೀಚುತ್ತಾ ಅಕ್ಷರಗಳಿಗೆ
ನಿಮ್ಮನ್ನು ನೀವೇ ಸಮರ್ಪಿಸಿಕೊಂಡಿದ್ದೀರಿ..
ಹೀಗೇ ಅನಂತದವರೆಗೂ ನಕ್ಕು ನಲಿಯುತ್ತಾ,
ಗೀಚುತ್ತಾ, ಎಲ್ಲರೊಂದಿಗೂ ಬೆರೆಯುತ್ತಾ,
ಸುಖದಿಂದಿರಿ ಅಣ್ಣಯ್ಯ.
ಬರಹದೊಳಗಿನ ಭಾವವ ಜೀವಿಸುವ ಬೇಂದ್ರೆಪ್ರಿಯರಿಗೆ
ಹೆಚ್ಚೆಚ್ಚು..ಕೊನೆಯಿರದಷ್ಟು ಒಳಿತಾಗಲಿ
ಕೆಟ್ಟದ್ದೆಂಬುದು ನಿಮ್ಮ ನೆರಳನ್ನೂ ತಾಕದಿರಲಿ.
ಬದುಕ ಪಯಣದ ಕೊನೆಯವರೆಗೂ ತರ್ಪೂರ್ಣ
ಪೂರ್ಣವಾಗಿ ಒಟ್ಟಾಗಿಯೇ ಉಳಿಯಲೆಂದಾಶಿಸುವೆ..
ಇನ್ನೂ ಹೆಚ್ಚೆಚ್ಚು ಗೀಚುತ್ತಾ ಕನ್ನಡಕ್ಕೆ ಕೀರ್ತಿ ತರುವಂತವರಾಗಿ..
ಶುಭವಾಗಲಿ ನಿಮಗೆ ಶುಭವಷ್ಟೇ ಆಗಲಿ..!!-
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ 🎂💐
ಬರವಣಿಗೆಯ ಲೋಕದಿ
ಸದಾಕಾಲಕ್ಕೂ ಮರೆಯಾಗದೆ
ಅಜರಾಮರವಾಗಲಿ
ನಿಮ್ಮಯ ಹೆಸರು!
ಬದುಕೆಂಬ ವಿದ್ಯಾಲಯದಲಿ
ಕನ್ನಡವ ಕಲಿಯುತ್ತಾ,
ಬಳಸುತ್ತಾ,ಕಲಿಸುತ್ತಾ,
ಕನ್ನಡಕ್ಕೂ ಹೆಮ್ಮೆ
ತರುವಂತಾಗಲಿ
ನಿಮ್ಮಯ ಜ್ಞಾನ!
ಹೆಚ್ಚೆಂದರೆ ಹೆಚ್ಚೇ ಆಗಲಿ
ನೋವಲ್ಲ, ನಲಿವು.
ಮರೆಯಾಗುವುದಾದರೆ ಮರೆಯೇ ಆಗಲಿ
ಸುಖವಲ್ಲಾ, ನಿಮ್ಮೆಲ್ಲಾ ಸಂಕಷ್ಟಗಳು!
ಇಪ್ಪತ್ನಾಲ್ಕು ಗಂಟೆಗಳ
ಐವತ್ತೆರಡು ವಾರಗಳ
ಪ್ರತಿವರುಷದ ಪ್ರತಿಕ್ಷಣವೂ ಅವಿಸ್ಮರಣೀಯವಾಗಿರಲೆಂದು
ಮನದುಂಬಿ ಆಶಿಸುವೆ!-
ಹುಟ್ಟಿದಬ್ಬದ ಹಾರ್ದಿಕ ಶುಭಾಶಯಗಳು ನನ್ನೇಹಿಗ! ✨💙
ಚಂದದಿಂದಿರಲಿ ನಿನ್ನಯ ಬಾಳು ಮಮತೆಯ ಆಷಾಗೋಪುರದಲಿ!
ನಿನ್ನೊಲವಿನ ಕನಸಿಗೆ ರೆಕ್ಕೆ ಕಟ್ಟಿ ಎಟುಕದಷ್ಟೆತ್ತರಕ್ಕೆ ಹಾರಿ
ಸದಾಕಾಲಕ್ಕೂ ವಿಜಯಿಯಾಗಿರು ಬಂಗಾರ.
ಬದುಕಿನುದ್ದಕ್ಕೂ ಸಂತೋಷವಷ್ಟೇ ಜೊತೆಗಿರಲಿ
ಅಪ್ಪನಾಸರೆಯಲಿ,ಅಮ್ಮನ ಕಾಳಜಿಯ ಮಾಡಿಲಿನಲಿ,
ಅನುಕ್ಷಣವೂ ಆನಂದದಿಂದಿರು!
ಖರೇನಾ ಹೇಳಕತ್ತೀನಿ ಚಿನ್ನ ನೀ ಬಂದ್ಮ್ಯಾಗಿಂದ
ನನ್ ಜೀವ್ನ ಶ್ಯಾನೆ ಚಲೋ ಆಗ್ಯಾದ!!
ನೀ ನಂಗ ಮರೆಯಲಾಗ್ದಂತ ನೆನಪಿನುಡುಗೊರೆ
ಕೊಟ್ಟು ನನ್ನ ಬಾಳ ಸಂತಸದಿಂದಿಟ್ಟೀಯಾ
ಕಡಿತಂಕ ಹೀಂಗ ಕಾಳಜಿ ಮಾಡ್ತಾ ಬೈಕೋತ ನನ್ ಮನ್ಸಲ್ಲೇ ಇದ್ಬುಡು!!
ನೀಜ್ವಾಗು ನೀ ಇಲ್ದಿರೋ ಬದ್ಕು ಹೆಂಗಿರ್ತಾದಂತ್ಲು ಊಹಿಸಿಲ್ಲ ಬಂಗಾರ..
ನಾ ನಿಂಗ್ಕೊಟ್ಟಿರೋ ಎಲ್ಲಾ ನೋವ್ಗೂ ಟನ್ಗಟ್ಲೆ
ಕ್ಷಮಾ ಕೇಳ್ತಾ ಮುಂದೇನು ಹೀಂಗ ನಿನ್ಕುಟ ಜಗ್ಳ ಮಾಡ್ಕೋತಾ,
ಗೋಳ್ ಹೊಯ್ಕೋತ ನನ್ನುಸ್ರಿನ್
ಕಡೇಗಳಿಗೆತಂಕ ನಾ ನಿನ್ನ ಜಗ್ಗಿ ಪ್ರೀತಿ ಮಾಡ್ತಿರ್ತೆ...!
ಬದುಕೆಂಬ ಈ ಪಯಣದಲಿ ಒಳ್ಳೆಯದನ್ನಷ್ಟೇ ಜೊತೆಗೊಯ್ದು,
ಒಳ್ಳೆಯದನ್ನಷ್ಟೇ ಬಯಸುತ್ತ, ಒಳ್ಳೆಯ ದಾರಿಯಲ್ಲೇ ಸಾಗುತಲಿರು ಹುಡುಗ..
ಹರ್ಷಿಸುತ್ತಿರು ಹರ್ಷಿತಾಳ ಸ್ನೇಹ-ಪ್ರೀತಿಯಲಿ:)
ನೆಮ್ಮದಿಯಿಂದಿರು ಬಂಗಾರಳ ಮನದಂಗಳದಲಿ!
ನನ್ದೈವ ನಿನ್ನನ್ನು ಸದಾಕಾಲಕ್ಕೂ ಕಾಯಲೆಂದಾಶಿಸುವೆ
ಶುಭವಷ್ಟೇ ನಿನ್ನಯ ಪಾಲಿಗಿರಲಿ..ನಾನೂ ಅದರ ಪಾಲಾಗಿರಲಿ!!-
ಹುಟ್ಟು ಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು ಅಪ್ಪಾ!! 👑❤️🌏
ಅರ್ಧಶತಕ-ವರುಷಗಳೀ ಪಯಣದಲಿ
ಅದೆಷ್ಟೋ ಸವಾಲುಗಳ ಎದುರಿಸಿದ್ದೀರಿ,
ಅದೆಷ್ಟೋ ಮುಖವಾಡಗಳ್ಹಿಂದಿನ ಮುಖವ ಕಂಡಿದ್ದೀರಿ,
ಅದೆಷ್ಟೋ ಕಿರಿಯರಿಗೆ ಮಾರ್ಗದರ್ಶನ ನೀಡಿದ್ದೀರಿ,
ಅದೆಷ್ಟೋ ಸೋಲುಗಳ ದಾಟಿ ಗೆಲುವೆಂಬ ಬೆಳಕಲ್ಲಿ ರಮಿಸಿದ್ದೀರಿ,
ಅದೆಷ್ಟೋ ಒಡಲಾಳದ ನೋವುಗಳ ಒಬ್ಬರೇ ನುಂಗಿದ್ದೀರಿ,
ಅದೆಷ್ಟೋ ಅಪರಿಮಿತ ಬಯಕೆಗಳ ಮನದಲ್ಲೇ ಬಚ್ಚಿಟ್ಟಿದ್ದೀರಿ,
ಅದೆಷ್ಟೋ ಸಂತಸದ ಕ್ಷಣಗಳ ಮನೆವರಿಗೆಲ್ಲಾ ಹಂಚಿದ್ದೀರಿ,
ಅದೆಷ್ಟೋ ಬಾರಿ ಪ್ರೀತಿ, ಕಾಳಜಿಯ ತೋರ್ಪಡಿಸಲಾಗದೆ ಚಡಪಡಿಸಿದ್ದೀರಿ,
ಅದೆಷ್ಟೋ ಬದುಕಿನ ಪಾಠವ ನಾ ನಿಮ್ಮಿಂದ ಎನ್ನುವುದಕಿನ್ನ ನಿಮ್ಮ ನೋಡೇ ಕಲಿತಿದ್ದೀನಿ!
ಈ ಬಂಧ ಎಂದೂ ಅಳಿಯದೇ ಹೀಗೆಯೇ ಉಳಿದುಬಿಡಲಿ ಅಪ್ಪ..
ನಿಮ್ಮೊರತಾದ ಜಗತ್ತಿನ ಪರಿಕಲ್ಪನೆಯ ಬಾಗಿಲಿನ ಬಳಿಯೂ,,
ಹೋಗುವ ಆಸೆಯಾಗಲೀ, ಧೈರ್ಯವಾಗಲಿ ಎರಡೂ ನನ್ನಲ್ಲಿಲ್ಲ!
ನೀವೆನ್ನ ಪರಪಂಚ ಎಂದರಷ್ಟೇ ಸಾಲದು;
ನೀವೇ ನನ್ನ ಬದುಕ ನಂದಾದೀಪ!
ನಿಮ್ಮೆಡೆಗಿನ ನನ್ನ ಪ್ರೀತಿ ಅನಂತವಾದದ್ದು
ಅದಕ್ಕಾವ ಬಿಂಕು ಬಿನ್ನಾಣಗಳು ಬೇಕಿಲ್ಲ
ಆಣೆ ಪ್ರಮಾಣವೂ:)
ನನ್ನ ಬದುಕಿನ ಶಿಕ್ಷಣದ ಶಿಕ್ಷಕರು ನೀವು
ನನ್ನ ಖುಷಿಯ ಮಂತ್ರ ನೀವು, ನನ್ನೋವ ಮರೆಸೋ ಚಿಕಿತ್ಸಕ ನೀವು
ನನ್ನೇಳಿಗೆಯ ಬೆನ್ನೆಲುಬು ನೀವು, ನನ್ನಾಸರೆಯ ಹೆಗಲು ನೀವು..!!
ಸದಾಕಾಲಕ್ಕೂ ಹೀಗೇ ನಗು ನಗುತ್ತಾ ಸಂತಸದಿಂದಿರಿ ನನ್ನಾತ್ಮದ ದೈವ..
ನಿಮ್ಮನ್ನು ಅನಂತದವರೆಗೂ ಸುಖವಾಗಿಡಲೆಂದು ಗಣೇಶನಲ್ಲಿ ಅನುಕ್ಷಣವೂ ಪ್ರಾರ್ಥಿಸುವೆ..!! ❤️-
ಹುಟ್ಟುಹಬ್ಬದ ಶುಭಾಶಯಗಳು ಡಿಯರ್ ಮಾಲಾಶ್ರೀ
ನಿನ್ನ ಆಸೆ - ಆಕಾಂಕ್ಷೆಗಳೆಲ್ಲವೂ ಈಡೇರಲಿ ಮಾಲಾಶ್ರೀ
ಶರಣರ ನಾಡಿನ ಕುವರಿ, ಮುದ್ದು ಸಹೋದರಿ
ಅಪ್ಪ - ಅಮ್ಮರಿಗೆ ಮುದ್ದಿನ ಮಗಳಿವಳು ಮಾಲಾಶ್ರೀ
ಪ್ರಾಸಬದ್ದವಾದ, ಕ್ರಮಬದ್ದವಾದ ಬರಹಗಳ ಗೆಳತಿ ಈ ಸಹೋದರಿ
ವಿಭಿನ್ನವಾಗಿ ವಿಶೇಷತೆಯ ಬರಹಗಳಿಂದ ಪರಿಚಿತಳವಾಗಿರುವಳು ಮಾಲಾಶ್ರೀ
೬೪೦ರ ನಿತ್ಯ ನಿರಂತರವಾದ ಅತ್ಯಮೂಲ್ಯ ಬರಹಗಳಿಗೆ ಅಭಿನಂದನೆಗಳು
ನಿಷ್ಕಲ್ಮಶವಾದ ನಿನ್ನ ಮನದ ಆಶಯಗಳಿಗೆ ಒಳಿತಾಗಲಿ ಮಾಲಾಶ್ರೀ
'ವಿನೋದಾ'ಳ ಮನದಲ್ಲಿ ಸದಾ ಹಸಿರಾಗಿರುವ ನಲ್ಮೆಯ ಗೆಳತಿ
ನನ್ನೆಲ್ಲಾ ಬರಹಕ್ಕೆ ತುಂಬಾನೇ ಸ್ಫೂರ್ತಿಯಾಗಿರುವಳು ಮಾಲಾಶ್ರೀ
-
ಅರ್ಕನ ರಶ್ಮಿಯೂ ತಾಗಿ
ನೈದಿಲೆಯೂ ಅರಳುವಂತೆ
ನಿನ್ನ ಕನಸುಗಳು ನನಸಾಗಿ
ನಿನ್ನ ಬದುಕು ಸದಾ ಖುಷಿಯ
ರಶ್ಮಿಯಿದ ಮಿಂಚುತ್ತಿರಲಿ
ಚಿಟ್ಟೆಯ ಮೈ ಮೇಲಿನ
ಚಿತ್ತಾರವು ಎಲ್ಲರನ್ನು
ತನ್ನೆಡೆಗೆ ಸೆಳೆಯುವಂತೆ
ನಿನ್ನ ಮುಖದಲ್ಲಿರುವ
ನಗು ಎಂದಿಗೂ ಮಾಸದಂತೆ
ಸದಾ ಎಲ್ಲರ ಗಮನವ
ಸೆಳೆಯುತಲಿರಲಿ ಎಂದು
ಹಾರೈಸುತ್ತ ಈ ನನ್ನ
ಪುಟ್ಟ ಹೃದಯ ನಿನಗೆ
ಹುಟ್ಟು ಹಬ್ಬದ
ಶುಭಾಶಯಗಳು
ಎಂದು ಹೇಳುತಿದೆ..💞
-ಅಂಕಿತಾ ಕೋಪರ್ಡೆ
-
ಅರಿಯದೆ ದೊರಕಿತು ಈ ಬಂಧ🤗
ಬೆಸೆಯಿತೊಂದು ಅನುಬಂಧ💝
ಪ್ರೀತಿ ಕಾಳಜಿ ತೋರುವ ತಂಗಿಯಾದೆ👭
ಸ್ನೇಹದೊಲವು ತೋರುವ ಗೆಳತಿಯಾದೆ👩❤️💋👩
ನಿನ್ನೊಳಗಿನ ಹೃದಯವಂತಿಕೆ ಎಂದೂ ಮಾಸದಿರಲಿ❤️
ನಿನ್ಮೊಗದ ಮೇಲೆ ಸದಾ ನಗುವಿರಲಿ😍
ಸದಾ ಬೆಳಗಲಿ ನಿನ್ನೊಳಗೆ ಭರವಸೆಯ ಜ್ಯೋತಿ✌️
ಹೀಗೆ ಇರಲಿ ನಮ್ಮ ಈ ಪ್ರೀತಿ💟
ನೀನತ್ತ ಮೊದಲ ದಿನವಿಂದು💐
ನಾ ಬಯಸುವೆನು ನಿನಗೆ ಶುಭವಾಗಲೆಂದು👍
👇👇👇👇👇-
ಜೀವನದಲ್ಲಿ ಸಂಘರ್ಷವಿಲ್ಲದಿದ್ದರೆ ಬದುಕಿನ
ಅರ್ಧಕ್ಕರ್ಧ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ ಎಂದು ಸಾರಿದವರು ನಮ್ಮ ಅಪ್ರತಿಮ ದೇಶಭಕ್ತ
ಸುಭಾಷ್ ಚಂದ್ರ ಬೋಸ್ ಅವರು.
ನಾವು ಅವರ ಜನ್ಮದಿನವನ್ನು
ಗೌರವಪೂರ್ವಕವಾಗಿ ಸ್ಮರಿಸುತ್ತಾ
ಅವರಿಗೆ ಕೋಟಿ ನಮನಗಳನ್ನು ಸಲ್ಲಿಸೋಣ.💐-
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ರಂಜು 🎂🍨🍰
ಈ ಶುಭದಿನ ನಿಮಗೆ ನವೋಲ್ಲಾಸ ತಂದುಕೊಡಲಿ 🤗 ಯಾವಾಗ್ಲೂ ಹೀಗೆ ಬರೀತಾ , ಬೆರಿತಾ , ಸದಾ ಖುಷಿಯಾಗಿರಿ ❤️
ಹರಿಯಲಿ ನಿಮ್ಮ ಚಿತ್ತ ಅಡಿಬರಹದೆಡೆಗೆ 👇🏻👇🏻👇🏻-