QUOTES ON #ಮೌಲ್ಯ

#ಮೌಲ್ಯ quotes

Trending | Latest
10 NOV 2020 AT 7:08

ಬರಹಗಾರನಿಗೆ ಅಕ್ಷರದ ಮೌಲ್ಯ
ದುಡಿದವನಿಗೆ ದುಡ್ಡಿನ ಮೌಲ್ಯ
ಕಷ್ಟಪಡುವವನಿಗೆ ಬದುಕಿನ ಮೌಲ್ಯ
ರೈತನಿಗೆ ಬೆಳೆಯ ಮೌಲ್ಯ
ಜವಾಬ್ದಾರಿ ಇದ್ದವನಿಗೆ ಬಂಧನ ಮೌಲ್ಯ
ಭವಿಷ್ಯದಾಸೆ ಇದ್ದವನಿಗೆ ವಿದ್ಯೆಯ ಮೌಲ್ಯ
ಗುರಿಯಿದ್ದವನಿಗೆ ಜೀವನದ ಮೌಲ್ಯ ತಿಳಿದಿರುತ್ತೆ.

-



ಗಜಲ್

ಮೌಲ್ಯಗಳ ಮಾರಣಹೋಮ ನಡೆಯುತಿದೆ ಹಾಡುಹಗಲಿನಲ್ಲಿಯೇ ಗೆಳೆಯ
ಮನುಕುಲವೂ ಅಧಃಪತನದತ್ತ ಸಾಗುತಿದೆ ನಡುಹಗಲಿನಲ್ಲಿಯೇ ಗೆಳೆಯ

ಕೌಟುಂಬಿಕ ವಾತಾವರಣವು ಕಲುಷಿತಗೊಂಡಿದೆ ಜೊಳ್ಳು ಸಂಬಂಧಗಳಲಿ
ಸಂಬಂಧಗಳು ಬಿಕರಿಯಾಗುತಿವೆ ಮಟಮಟ ಮಧ್ಯಾಹ್ನದಲ್ಲಿಯೇ ಗೆಳೆಯ

ಸಂಸಾರ ಸಾಗಿಸುವೆ ಭರದಲ್ಲಿ ಇಬ್ಬರೂ ಓಡುತ್ತಿರುವರು ದುಡ್ಡಿನ ಹಿಂದೆ
ಭಾವನೆಗಳನು ಬೆತ್ತಲೆಗೊಳಿಸುತಿರುವರು ನಡು ಬಜಾರಿನಲ್ಲಿಯೇ ಗೆಳೆಯ

ಶಿಸ್ತು ಪ್ರತಿಷ್ಠೆಯ ಮುಖವಾಡದಲಿ ಹಲವು ವಿದ್ಯಾ ಮಂದಿರಗಳು ಇಂದು
ಅಂಕಗಳ ಮಾರಾಟ ಮಾಡುತ್ತಿವೆ ಜನ ಸಾಗರದ ಮಧ್ಯದಲ್ಲಿಯೇ ಗೆಳೆಯ

ಚಟಗಳ ಹಿಡಿತದಲಿ ಯುವಜನತೆ ಸಿಹಿಯಾದ ಗಾಢ ನಿದ್ದೆಯಲ್ಲಿರುವುದು
ಆವರಿಸಿದ ಕತ್ತಲೆಗೆ ಮಲ್ಲಿ ಸಾಕ್ಷಿಯಾಗಿರುವನು ನಡು ಬೆಳಕಿನಲ್ಲಿಯೇ ಗೆಳೆಯ

-



ಸಂಬಂಧಗಳು ಯಾವುದೇ ಇರಲಿ
ಮುತ್ತಿನ ಮಣಿಯಂತಿರಬೇಕು.
ಗಾತ್ರದಲ್ಲಿ ಚಿಕ್ಕದಾದರೂ
ಅನುಪಮ ಮೌಲ್ಯಿಕವಾಗಿರಬೇಕು.

-


10 MAR 2021 AT 17:16

ಹಣದ ಮೇಲಿರುವ ಪ್ರೀತಿ
ಮನುಷ್ಯನ ಮೇಲೆ ಇಲ್ಲವಾಗಿದೆ ಸಾಕಿ
ಗೋಡೆಯ ಭಾವಚಿತ್ರಕ್ಕಿರುವ ಗೌರವ
ಜೀವಂತ ಉಸಿರ ಮೇಲೆ ಇಲ್ಲವಾಗಿದೆ ಸಾಕಿ!

-



ಪದಗಳು ಉಚಿತವಾಗಿಯೇ ಸಿಗುತ್ತದೆ.
ಆದರೆ ಅದನ್ನು ಹೇಗೆ ಬಳಸುತ್ತೀರಾ
ಎಂಬುದರ ಮೇಲೆ
ನಿಮ್ಮ ಮೌಲ್ಯ ನಿರ್ಧಾರವಾಗುತ್ತದೆ.

-


2 AUG 2020 AT 1:37

ಎಲ್ಲದಕೂ ಕೋಲೆ ಬಸವನಂತೆ
ತಲೆ ಆಡಿಸಿದರೆ,
ಮುಂದೆ
ಗಾಣದ ಎತ್ತಿನಂತೆ ದುಡಿದರೂ
ಮೌಲ್ಯವಿರದು ..

-


20 APR 2020 AT 22:24

ಮೌಲ್ಯಗಳು ಕಾಲದಿಂದ ಕಾಲಕ್ಕೆ
ಬದಲಾಗುತ್ತಾ ಹೋಗುತ್ತವೆ..
ಈ ಕಾಲದ ಮೌಲ್ಯ
ಮುಂದಿನ ಕಾಲಕ್ಕೆ
ಅಪಮೌಲ್ಯವಾಗಿ ಕಾಣಬಹುದು

-


13 MAY 2020 AT 14:39

ಈ ಕಾಲದಲ್ಲಿ
ಕಿರೀಟ ಸೊಟ್ಗ್ ಇದ್ರು
ಲಂಗೋಟಿ ನೆಟ್ಟ್ಗ್ ಇರಬೇಕು!
ನಮಸ್ತೆ ಮಾಡೋ
ದೇವಸ್ಥಾನದಲ್ಲಿ ಆಗ್ಲಿ
ನಡೆದಾಡುವ
ದಾರಿಯಲ್ಲಿ ಆಗ್ಲಿ
ಎಲ್ಲರ ಕಣ್ಣು
ಗಂಟೆ ಮೇಲೆ ಇರುತ್ವೆ!

-



ಹೆಣದ ಮೇಲಿರುವ ಪ್ರೀತಿ
ಮನುಷ್ಯನ ಮೇಲೆ ಇಲ್ಲದಾಗಿದೆ ಗಾಲಿಬ್
ಗೋರಿಯ ಮೇಲಿರುವ ಮಮತೆ
ಕುಟುಂಬದ ಮೇಲೆ ಇಲ್ಲದಾಗಿದೆ ಗಾಲಿಬ್

-



ಮನುಷ್ಯ ಸುಂದರವಾಗಿ ಕಾಣುವುದು ತನ್ನ ರೂಪದಿಂದ
ರೂಪ ಸುಂದರವಾಗಿ ಕಾಣುವುದು ಸದ್ಗುಣಗಳಿಂದ ,
ಸದ್ಗುಣಗಳು ಸುಂದರವಾಗಿ ಕಾಣುವುದು ಜ್ಞಾನದಿಂದ ,
ಜ್ಞಾನ ಸುಂದರವಾಗಿ ಕಾಣುವುದು ಕ್ಷಮೆಯಿಂದ.
ಕ್ಷಮಾಗುಣವಿಲ್ಲದಿದ್ದರೆ...
ಮನುಷ್ಯನ ರೂಪ ಗುಣ ಜ್ಞಾನ ಎಲ್ಲವೂ ವ್ಯರ್ಥ.

-